Wednesday, December 26, 2007

kavana bhaaga 2

ಸ್ನೇಹ ಮಾಡಬೇಕಿಂತವಳ!
-----------------------

ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

-ಸಂತ ಶಿಶುನಾಳ ಶರೀಫ


ಅ ಆ ಮತ್ತು....ಕವನ ಸಂಕಲನ - ಅಕ್ಷರ ಹೊಸ ಕಾವ್ಯ.
-----------------------------------------------------
ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ
ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ
ಒಲೆ ಉರಿಯುತ್ತಿತ್ತು
ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ
ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ
ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು

ಅವ್ವನ ಎದೆ ಗೂಡೊಳಗೆ
ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು
ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ
ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ
ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.

ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು
ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು
ಅಸ್ಥಿ ಪಂಜರಗಳ ಪಾತಾಲದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದುವು

ಹುಡುಕುತ್ತಾ ಹುಡುಕುತ್ತಾ
ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ
ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ
ಮೀಸೆ ಬೆಳೆದು ಅಡರಿಸಿಕೊಂಡು
ಕತ್ತಲಲ್ಲಿ ಕಾಣದಾದೆ

ಆದರೆ
ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ
ಅ ಆ ಮೂಡಿಸಿದಾಗ ಅಂದು
ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ
ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.

- ಎಚ್ ಗೋವಿಂದಯ್ಯ.



ಯಾಕೋ ಅಕ್ಷರಗಳೆಲ್ಲ ಒದ್ದೆ.
--------------------------
ಪ್ರೀಯಾ
ನಮ್ಮ ಪ್ರೀತಿ
ಶಬ್ದಗಳ ಹಂಗಿಗೆ ಒಳಪಡಲಿಲ್ಲ...
ಸ್ಪರ್ಶದ ಹಂಬಲಕ್ಕೆ ಹಾತೊರೆಯಲಿಲ್ಲ...
ಆದರೂ, ನೀನು ಪ್ರತಿರಾತ್ರಿ
ನನ್ನ ಕನಸುಗಳ ದರಬಾರಿಗೆ
ಬರುವುದನ್ನ ತಡೆಯಲು
ಯಾರಿಂದಲೂ ಸಾಧ್ಯವಾಗಲಿಲ್ಲ.

ಈ ಬೆಳಗು
ಮೆಟ್ಟಿಲೇರುವಾಗ
ನಿನ್ನ ಧ್ಯಾನದಲ್ಲಿ ಕಾಲಿ ಜಾರಿ
ಮತ್ತೆ ಕಂಪಿಸಿದೆ...

ನಿನ್ನನ್ನು ಇಡಿಯಾಗಿ ಕ್ಷಣಕ್ಷಣವೂ ಪ್ರೀತಿಸಬೇಕೆಂದಿದ್ದೇನೆ
ಕಾಲನೂ ಸೋಲಬೇಕು ಹಾಗೆ

ಅವನ ನಿರ್ದಯಿ ಹೆಜ್ಜೆ
ನಮ್ಮ ಮನೆಯ ಬಾಗಿಲಿಗೆ ಬಂದರೆ
ನನ್ನ ಜೀವ ನಿನ್ನೊಳಗೆ
ನಿನ್ನ ಜೀವ ನನ್ನೊಳಗೆ ಇರುವುದ ಕಂಡು
ಕಾಲನೆ ಕಾಲು ಕಿತ್ತಬೇಕು ಹಾಗೆ.

-ಜಯಂತ ಕಾಯ್ಕಿಣಿ.

Tuesday, December 25, 2007

kavanagalu

ಸುಮ್ಮನೆ ಹೇಳುತ್ತಿಲ್ಲ
ನಿನಗಾಗಿ ನಾನು ಏಳು ಸಾಗರಗಳನ್ನ
ದಾಟಿಬಂದರು ಅಚ್ಚರಿಯಿಲ್ಲ!
ನಿನ್ನೊಳಗೆ ನನಗಾಗಿ
ಏಳು ಮಲ್ಲಿಗೆ ತೂಕದ ಪ್ರೀತಿಯಿದೆಯೆ?
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ
ನಿನ್ನ ಗುಂಗಿನಲ್ಲೆ ಕಳೆದಿದ್ದಿದೆ!
ಒಮ್ಮೆಯಾದರು ನೀನು
ಮಗ್ಗಲುಬದಲಿಸುವಾಗ ನನ್ನ ನೆನೆದಿದ್ದಿದೆಯ?

ನನಗಿಲ್ಲಿ ನಿನ್ನ ನೆನಪುಗಳೇ
ನನ್ನ ಬೆಳಕಾಗಿರುವಾಗ!
ನೀನು ನನ್ನೊಳಗೆ ಬಂದು
ಒಮ್ಮೆಯಾದರು ಕಚಕುಳಿ ಇಟ್ಟಿದ್ದಿದೆಯ?

ನಾನು ಬರೆದ ಕವಿತೆಗಳ
ಪ್ರತಿಸಾಲಿನಲ್ಲಿ ನಾನು ನಿನ್ನ
ಮುದ್ದು ಹೆಸರಪ್ರೀತಿಯಿ೦ದ ಬರೆದಿದ್ದಿದೆ!
ಅಷ್ಟು ಚಂದ ಹಾಡುವ
ನೀನುಒಮ್ಮೆಯಾದರು ನನಗೆ ಲಾಲಿ ಹಾಡಿದ್ದಿದೆಯ?

ಸಾಕು ಸಾಕಿನ್ನು
ನಿನ್ನ ನೆನಪೊಳಗೆ
ನನ್ನ ಮರೆಯುವುದನಾನು ನಾನಾಗಬೇಕಿದೆ
ನೀನಿಲ್ಲದೆಆದರೆ ನಾ ಇಡುವ
ಪ್ರತಿಹೆಜ್ಜೆಹೆಜ್ಜೆಯಲ್ಲಿಯೂನಾ
ನಿನ್ನ ನೆನೆಯದಿದ್ದರೆ ನನ್ನಾಣೆ…..


Nanna Gelathi
ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !

ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !

ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !

ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !

ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !


ಕವಿತೆ ಹುಟ್ಟುತಿಲ್ಲ......
ಎದೆಯೊಳಗೆ ನೂರಾರು
ಕವಿತೆಅದೆಷ್ಟೋ ಸಾಲುಗಳು,
ಅದೆಷ್ಟೊಮೊಗೆದಷ್ಟು
ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!

ಕನಸಿನಲ್ಲೂ ಹಾಗೆ
ಅದೆಷ್ಟೋಸಾಗರದಷ್ಟು ಪದಗಳು
ಬಂದುನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!

ಬೆರಳ ತುದಿಯಲ್ಲೇ
ಶಭ್ಧಗಳ ಬಂಡಾರಸುಮ್ಮನೆ ಬಂದು
ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ,
ನಲ್ಲನ ನಲ್ಲೆಯ ಹಾಗೆ ಸುಂದರಬೆರಳ ತುದಿಯಲ್ಲಿದ್ದರೆ ಸಾಕೆ?
ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!

ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲಪದಗಳು !
ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ
ಕದನಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!

ಕವಿತೆಗಳೇ ಹಾಗೆ,
ಎಷ್ಟು ಗೋಗರೆದರುಬೇಡಿಕೊಂಡರು,
ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ
ಕವಿತೆಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!


ಗೆಳತಿಯ ಗುಟ್ಟು..............
ಹತ್ತಾರು ಕವಿತೆಯಲ್ಲಿರದ
ಶಕ್ತಿನಿನ್ನ ಕಣ್ಣಾಲೆಗಳಲ್ಲಿದೆಯಲ್ಲ
ಗೆಳತಿಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!

ಯಾರೊ ಬರೆದ
ಪ್ರೀತಿಯಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ
ಹಾಡಿನೊಳಗೂನಿನ್ನದೇ ಪ್ರೀತಿಯ ಮಾಯೆ
ಮಾಯೆನಿನ್ನ ಕುರಿತು ಬರೆದ
ಪ್ರತಿ ಪದಗಳೂಬಂಗಾರವಾಗುವುದರ ಗುಟ್ಟೇನು ಗೆಳತಿ..!!

ನೀನಾಡುವ ಪ್ರತಿ
ಮಾತುಗಳುನೊಂದ ಹೃದಯಕ್ಕೆ
ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!

ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ
ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!

ನಟ್ಟ ನಡುರಾತ್ರಿ
ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುತ್ತಿಲ್ಲಮನದೊಳಗೆ
ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!


ನಲ್ಲೆ, ನಿನ್ನ ಮರೆಯಲು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------------------
ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಲಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳೀದೆ.

- ಬಿ ಆರ್ ಲಕ್ಷ್ಮಣರಾವ್.


ಮರು ವಸಂತ.... ಕವನ ಸಂಕಲನ - ಸುಬ್ಬಾ ಭಟ್ಟರ ಮಗಳೇ.
-----------------------------------------------------------
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

- ಬಿ ಆರ್ ಲಕ್ಷ್ಮಣರಾವ್.


ಈ ಕಂಗಳು....ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಈ ಕಂಗಳೇನೋ ನನ್ನವು
ನೋಟ ನಿನ್ನದು
ಈ ನೆಲವ ಹಸಿರು ಹೊಲವ ಗೈದ
ಮಾಟ ನಿನ್ನದು

ನಿನ್ನ ಕನಸುಗಣ್ಣಿನಲ್ಲಿ
ನನ್ನ ಕನಸಿದೆ
ನನ್ನ ಮನದ ದೇಗುಲದಲಿ
ನಿನ್ನ ಮನಸಿದೆ

ನನ್ನ ಹೆಜ್ಜೆ, ನಿನ್ನ ಹಾದಿ
ಪ್ರೇಮದೂರಿಗೆ
ನಿಂತ ಕಡೆಯೆ ನಮ್ಮ ತಾಣ
ಗಗನ ಸೂರಿಗೆ

ಎಲ್ಲ ಬಂಧ ಬಿಡಿಸಿ, ನೀನು
ನನ್ನ ಬಂಧಿಸಿದೆ
ಈಗ ನನಗಿದೊಂದೇ ಸಾಕು
ನಿನ್ನ ಪ್ರೇಮಸುಧೆ..

- ಬಿ ಆರ್ ಲಕ್ಷ್ಮಣರಾವ್.


ಒಡೆಯದ ಒಡಪೇ...ಕವನ ಸಂಕಲನ - ಸುಬ್ಭಾಭಟ್ಟರ ಮಗಳೇ.
----------------------------------------------------------
ಒಡೆಯದ ಒಡಪೇ, ಒಲವಿನ ಮುಡಿಪೇ
ಸನಿಹಕೆ ಸೆಳೆದವಳೇ
ಕಾಡುವ ಕನಸೇ, ಕನ್ನಡಿ ತಿನಿಸೇ
ದೂರವೇ ಉಳಿದವಳೇ
ಬಾರೇ ಬಾ ಬಳಿಗೆ
ಇಂದೇ ಈ ಗಳಿಗೆ

ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ
ನನ್ನೀ ಕಂಗಳಗೆ

ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕವಿದರೂ ಇರುಳ, ನೀ ಬಳಿ ಇರಲು
ಉಜ್ವಲ ದೀವಳಿಗೆ

ಕಲ್ಪಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರ್‍ಇಯಕರನ?
ಬಾ ಕನಿಕರಿಸಿ, ನನ್ನನು ವರಿಸಿ
ಬಾಳಿನ ಪಾತಳಿಗೆ.

- ಬಿ ಆರ್ ಲಕ್ಷ್ಮಣರಾವ್


ನನ್ನವಳು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ನಾನಿಂದು ಕಂಡೆ ಆ ಹೆಣ್ಣನು
ನಾ ಕಂಡುಕೊಂಡೆ ನನ್ನವಳನು

ಆ ಬೊಗಸೆ ಕಣ್ಣುಗಳನ್ನು ಏನೆನ್ನಲಿ ?
ಜೋಡಿ ನಂದಾದೀಪ ದೇಗುಲದಲಿ
ಹಣೆಯಲ್ಲಿ ಕುಂಕುಮಬೊಟ್ಟು ಉದಯರವಿಯು
ಮೂಗಲ್ಲಿ ಮುತ್ತಿನ ನತ್ತು ಚಂದ್ರಾಮನು

ನಕ್ಕಾಗ ಕೆನ್ನೆಗಳಲ್ಲಿ ಎಂಥಾ ಗುಳಿ !
ಚುಂಬನದ ಆಸೆಗೆ ಸೆಳೆವ ಸುಂದರ ಸುಳಿ
ಅವಳ ದನಿಯೋ ಮಂಜುಳ ರಾಗಮಾಲಿಕೆ
ಅಂಗಾಂಗದ ಬಣ್ಣನೆಯೇಕೆ ? ಶಿಲಾಬಾಲಿಕೆ

ಅವಳ ಹೃದಯ ವಿಶಾಲ ಕಡಲಿನ ಹಾಗೆ
ಅದರಲ್ಲಿ ಮುಳುಗಿದೆ ನಾನು ನಿಧಿ ಶೋಧಕೆ
ಹವಳವೆ? ಮುತ್ತೆ? ಅಲ್ಲಿ, ತಳದಲೇನಿದೆ ?
ಅಲ್ಲುಂಟು ಭಾಗ್ಯಶಾಲಿಗೆ ಪ್ರೀತಿಯ ಸುಧೆ.

- ಬಿ ಆರ್ ಲಕ್ಷ್ಮಣರಾವ್.


ಹದಿಹರೆಯದ ಹಾಡು.... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ
----------------------------------------------------------------
ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು, ಹೊಗೆ, ಗದ್ದಲ

ನಲ್ಲೆ, ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ!
ಎಂಥಾ ಪರಿಮಳ!

ಧೂಳು ಈಗ ಧೂಳಲ್ಲ, ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು

ನೀನ್ನ ಮನೆಯೆ ದೇವಾಲಯ, ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ

ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ, ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತ

ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀ ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ
ಸಿಕ್ಕರೆ,ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆವರೆಗೆ.

- ಬಿ ಆರ್ ಲಕ್ಷ್ಮಣರಾವ್.

ಅಮ್ಮ....... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

-ಬಿ ಆರ್ ಲಕ್ಷ್ಮಣರಾವ್


ಕನಸು..... ಕವನ ಸಂಕಲನ- ಸುಬ್ಬಾಭಟ್ಟರ ಮಗಳೇ.
-----------------------------------------------------
ಏಕೆ ಬಂದೆ ನೀ ನಟ್ಟಿರುಳು
ಕನಸಿನ ಕದ ತೆರೆದು ?
ಏಕೆ ನಿಂತೆ ನೀ ಒಲಿದಂತೆ
ಬಿಗುಮಾನವ ತೊರೆದು ?

ನಗುವೆಯೇಕೆ ಹೊಸ ಹಗಲಂತೆ
ಹೊಂಬೆಳಕನು ಸೂಸಿ ?
ಕರೆವೆಯೇಕೆ ಹಾದಿಯ ತುಂಬ
ಹೂಗಳ ನೀ ಹಾಸಿ ?

ಕೈಗಳಲ್ಲಿ ನೀ ಹಿಡಿದಿರುವೆ
ಒಲವಿನ ಹೂಮಾಲೆ
ಕಂಗಳು ತಿಳಿಸಿವೆ ಇಂಗಿತವ:
"ನಿನ್ನವಳೀ ಬಾಲೆ"

ನಾ ಬಲ್ಲೆನು ಇದು ಕನಸೆಂದು
ಆದರೂ ನಾ ಬರುವೆ
ನೀ ಕರೆದರೆ ನಾ ಬರದಿರಲು
ಸಾಧ್ಯವೇ, ಓ ಚೆಲುವೆ ?

-ಬಿ ಆರ್ ಲಕ್ಷ್ಮಣರಾವ್.


ಹೃದಯ ಮೋಹಿನಿಗೆ....ಕವನ ಸಂಕಲನ - ದೀಪದ ಮಲ್ಲಿ.
----------------------------------------------------
ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?

ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?

ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ -
ಹೃದಯದ ಮರುಳೆ, ನೀನಾರು ?

ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?

ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?

ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?

- ಕೆ ಎಸ್ ಸರಸಿಂಹಸ್ವಾಮಿಯವರು


ಎಲ್ಲ ಮಲಗಿರುವಾಗ..... ಕವನ ಸಂಕಲನ - ನವಿಲ ದನಿ.
-------------------------------------------------------
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,
ಕಣ್ತುಂಬ ಹೊಂಗನಸು ಬೆಳಗಿನಲ್ಲಿ;
ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು
ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.

ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ
ಸತ್ತ ಹೂಗಳ ರಾಶಿ ಲತೆಯ ಕೆಳಗೆ;
ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ
ನಾ ಕಂಡೆ ಹರುಷವನು ಮುಗಿಲ ಕೆಳಗೆ.

ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,
ಬೀಸುತ್ತಲೇ ಇತ್ತು ಮಂದಪವನ;
ಕಿಟಕಿಯನು ಮುಚ್ಚುದರೆ ತೆರೆದಿತ್ತು ಬಾಗಿಲು,
ಬಲು ಸೂಕ್ಷ್ಮ ಜೀವನದ ಚಲನವಲನ!

ಹಾಡಿನೀಚೆಗೆ ನೋವು ಕಾಡುತ್ತಲೆ ಇತ್ತು
ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;
ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,
ನಡೆದದ್ದು ನಿಜವೆಂದು ಪದ್ಯ ಬರೆದೆ.

ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,
ಅವು ನಕ್ಕ ನಗೆ ದೇವರೆಂದುಕೊಂಡೆ;
ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,
ಇವರ ದೇವರು ಒಲವು ಎಂದುಕೊಂಡೆ!

- ಕೆ ಎಸ್ ನರಸಿಂಹಸ್ವಾಮಿಯವರು.

Thursday, December 20, 2007

ಪ್ರೀತಿ - ಜಾತಿ
ಗುರು ಇಲ್ಲದೇ ಹೃದಯ ಕಲಿಸುವ
ಪಾಠ ಈ ಪ್ರೀತಿ....
ಕಾರಣವಿಲ್ಲದೇ ಅಡ್ಡ ಬರುವುದು
ಈ ಜಾತಿ........

ತಾವರೆಯ ಏಸಲು
ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!

ಲವಂಗ
ತುಟಿ ತೊಂದೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ..
ಏಕೆಂದರೆ
ಕಣ್ಣು ಲವ್ ಹುಟ್ಟುವ ಅಂಗ.........

ನಿನದೆ ನೆನಪು.....
ನಿನ್ನುಸಿರು
ಬೆರೆತಿದೆ ಏನೋ
e ಹೂವಿಗೆ
ಪರಿಮಳ ಬೀರಿದಾಗಲೆಲ್ಲ
ನಿನದೆ ನೆನಪು.............

ಕನ್ನಡಿ ಕನ್ನಡಿ
ಪಂಚಟಾರಾ
ಹೊಟೆಲ್ಲುಗಳಲ್ಲಿ
ಎಲ್ಲಿ ನೋಡಿದರಲ್ಲಿ
ಕನ್ನಡಿ ಕನ್ನಡಿ
ನನಗೆ ನೆನಪಾಗುವುದು
ಕ್ಷೋರಡಂಗಡಿ.....

Preethi......
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ...ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...?ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ...ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...?ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ...ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...?ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ...ಸ೦ತೆಯಲ್ಲಿ ನೀನದನ್ನು ಮಾರಾಟಕ್ಕೆ ಇಟ್ತಿರುವೆಯಲ್ಲ ಹೀಗೇಕೆ...?ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ...ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?ನಶ್ವರವಾದ ಈ ಲೋಕದಲ್ಲಿ ಅಮರವಾದರೆ ಈ ಪ್ರೀತಿ...ನೀನದಕ್ಕೆ ಗೋರಿಯನ್ನು ಕಟ್ಟಿರುವುದಾದರು ಎಕೆ...?ನಿಮ್ಮ ಕನಸಿನ ಗೆಳೆಯಾ ವಿಶಾಲ್.....



ಕದ್ದ ಹೃದಯ

ನನ್ನಲ್ಲಿ ಅವಳಿದ್ದಾಳೆ
ಅವಳಲ್ಲಿ ನಾನಿದ್ದೇನೆ
ಆದರೂ,
ಅವಳಲ್ಲಿ ನಾನಿಲ್ಲ
ನನ್ನಲ್ಲಿ ಅವಳಿಲ್ಲ
ಏಕೆಂದರೆ,
ನನ್ನ ಹೃದಯ ಅವಳು ಕದ್ದಿದ್ದಾಳೆ
ಅವಳ ಹೃದಯ ನಾನು ಕದ್ದಿದ್ದೇನೆ.

*

ಕುರೂಪಿ

ಕೇವಲ ಯಾಂತ್ರಿಕವಾಗಿರುವ
ಈ ಜಗತ್ತಿನಲ್ಲಿ ,
ಜನ ಸಾಮಾನ್ಯನ
ಮುಗುಳುನಗೆಯನ್ನೇ
ಕಸಿದುಕೊಂಡಿರುವ
ಈ ಜಗತ್ತಿನಲ್ಲಿ ,
ಕೆಲವರಾದರೂ
ನನ್ನ ಮುಖವನ್ನಾದರೂ ನೋಡಿ
ಮೊದಲ ಬಾರಿ
ಮುಗುಳ್ನಕ್ಕರೆ
ನನಗದೇ ಸಂತೋಷ.

ಆಡುವುದು ಒಂದು...

ಎಲ್ಲರ ಮಾತುಗಳಲ್ಲಿ
ತುಂಬಿರುತ್ತದೆಆಚಾರ
ಮಾಡುವಾಗ ಮಾತ್ರ
ಎಲ್ಲರೂಹಾಕುತ್ತಾರೆ
ಲೆಕ್ಕಾಚಾರ*

ಹೆಣ್ಣಿನಾಸೆಬೇಡ

ನಲ್ಲಬೆಳ್ಳಿ ಬಂಗಾರದ
ಒಡವೆಗಳು ಆದರೆ
ಸಾಕುನಿನ್ನ
ಬೆರಳುಗಳು ನನ್ನ
ಕೈ ಬಳೆಗಳು

*ಹೊಗಳಿಕೆ
ಇದು ತುಂಬಾ
ವಿಚಿತ್ರ ಆದರೂ ಸತ್ಯ
ನೀನು ನಕ್ಕಾಗ ಮಾತ್ರ
ಮಿನುಗುತ್ತದೆನಕ್ಷತ್ರ

*ಸತ್ಯ
ಮನೆಯಲ್ಲಿಸೊಳ್ಳೆ
ಪರದೆಯಿಲ್ಲಅದಕ್ಕೆ
ನಿದ್ರೆಯಾಗಲಿಲ್ಲ
ಎಂಬುದು ಬರಿ ನೆಪ
ರಾತ್ರಿಯೆಲ್ಲಮಾಡುತ್ತಿದ್ದುದು
ನಿನ್ನ ನಾಮದ ಜಪ

*ಬೇಡಿಕೆ
ಗೆಳತಿ ಬರೀ ಕಣ್ಣಿನಿಂದ
ಹೊಡೆಯಬೆಡಗೋಲಿ
ಬಂದಿರು ನನ್ನೆದೆ
ಯಾಳಗೆಹೃದಯವಿದೆ
ಖಾಲಿಹಾಕು ಬಾನನ್ನ
ಮನೆಯಂಗಳದಿ
ರಂಗೋಲಿಆಗು
ಬಾಜೀವನದ
ಇನ್ನೊಂದುಗಾಲಿ

*ಸ್ಥಿತಿ
ನೀ
ಬೇಸಿಗೆಯಲ್ಲಿರದಿದ್ದರೂ
ಆಗುತ್ತದೆ ಚಳಿ
ಎಷ್ಟು ಮಾಡಿದರೂCover
ಉನೀ ಹಾಸಿಗೆಯಲ್ಲಿದ್ದರೆ
ಚಳಿಯಲ್ಲೂಸುರಿಯುತ್ತದೆ
ಬೆವರು

*ಸೆರಗು
ನಲ್ಲೆತಡೆಯಲಾಗುತ್ತಿಲ್ಲ
ಚಳಿಯಎಷ್ಟು ಹೊದ್ದುಕೊಂಡ
ರೂರಗ್ಗುಸೇರಿಕೊಳ್ಳಬೇಕೆನಿಸುತ್ತಿದೆ
ನಿನ್ನ ಸೀರೆಯಸೆರಗು

*ಗಾಯನ
ಕೇಳಿ ಮರುಳಾಗಿದ್ದೆ
ನಿನ್ನ ಗಾಯನ
ಮರೆಯಲಾಗುತ್ತಿಲ್ಲ
ಗಲ್ಲದ ಮೇಲೆಕೊಟ್ಟ
ಗಾಯಾನ

*ರಾಸಲೀಲ
ಕೃಷ್ಣಹದಿನಾರು ಸಾವಿರ
ಕನ್ಯೆಯರ ಜೊತೆ
ಆಡಿ ಕುಣಿದರೆ
ಅದು ರಾಸಲೀಲ
ನಾನು ಇನ್ನೊಬ್ಬಳನ್ನು
ಕಣ್ಣೆತ್ತಿ ನೋಡಿದರೂ
ಹೇಳುತ್ತಾರೆ
ಇವನ ಚರಿತ್ರಸರಿಯಿಲ್ಲ

*ವರದಕ್ಷಿಣೆ
ಹುಡುಗಿಯರೆ
ಎಷ್ಟೇ ಹಾಕಿ ದೇವಸ್ಥಾನದ
ಪ್ರದಕ್ಷಿಣೆ
ಎಷ್ಟೇ ಕೊಡಿ ಪೂಜಾರಿಗೆ ದಕ್ಷಿಣೆ
ಸಿಗುವುದಿಲ್ಲ ಒಳ್ಳೆ ಗಂಡುಇರದಿದ್ದರೆ
ನಿಮ್ಮತಂದೆ ಹತ್ತಿರ
ವರದಕ್ಷಿಣೆ

KANNALLI KANTHI.....
ಬರೆದದೆಷ್ಟು
ವರುಷವಾದವೋಈಗಿರುವುದು
ಬರಿ ಬಯಕೆಯಷ್ಟೇ ...
ಕಣ್ಣಿನಲಿ ಕಾಂತಿ ಇಲ್ಲ ,
ಕಾಂತಿಗೆ ಬೇಕಿರಲು
ಹೃದಯದಲಿ ಪ್ರೀತಿ ಇಲ್ಲ
ಪ್ರೀತಿಗೆ ಬೇಕಿರಲು
ಎದುರಿನಲ್ಲಿ ಅವಳಿಲ್ಲ
ಎಲ್ಲಕ್ಕಿಂಥಳು ಮಿಗಿಲಾಗಿ
ಅವಳೊಳಗೆ ನಾನಿಲ್ಲ
ನನ್ನೊಳಗೆ ಕವಿಯಿಲ್ಲ ....
ಅದರೂ....
ಬಯಕೆ ಬರೆದದೆಷ್ಟು ವರುಷವಾದವೋ
ಈಗಿರುವುದು ಬರಿ ಬಯಕೆಯಷ್ಟೇ .......FRIEND'S10


ಹೀಗೇಕೆ ನೀ ಮಾಡಿದೆ?
-------------------
ಹೀಗೇಕೆ ನೀ ಮಾಡಿದೆ
ಬರುವೆನೆಂದು ಬಾರದೆ
ನನ್ನ ಕಾಯಿಸಿದೆ
ಸೋನೆ ಮಳೆಗೆ ನೆನೆದು
ನಲುಗಿದ್ದೆ
ನೀ ಮಳೆಯಾಗಿ ಬಂದೆಯೆಂದೇ
ನಾ ಭಾವಿಸಿದ್ದೆ.
ಹೀಗೇಕೆ ನೀ ಮಾಡಿದೆ
ನನ್ನ ಕಡೆಗೆ ಬೆನ್ನು ಮಾಡಿ
ನನ್ನ ಪ್ರೀತಿಯ ತೊರೆದೆ
ನನ್ನೆದೆಯ ಮುಟ್ಟಿ, ಭಾವ ತಟ್ಟಿ
ನನ್ನಾಸೆ ಕನಸುಗಳ ಸುಟ್ಟೆ
ಹೀಗೇಕೆ ನೀ ಮಾಡಿದೆ
ಅಂದು ನಾನೇನೂ ಹೇಳದೆ
ನೀನೆ ಎಲ್ಲವ ಅರ್ಥೈಸುತಲಿದ್ದೆ
ಇಂದು ನಾ ಕೂಗುತಲಿದ್ದರೂ
ಕೇಳದೆ ನೀ ಕಿವುಡಳಾದೆ
ಹೀಗೇಕೆ ನೀ ಮಾಡಿದೆ
ಅಂದು ನಾ ಬೇಡವೆಂದರೂ
ನನ್ನಲ್ಲಿ ಒಲವನ್ನು ತಂದೆ
ಇಂದು ನನ್ನೆದೆಯ ಭಾವನೆಗಳ
ಬಡಿದು ಕೊಚ್ಚಿ ಕೊಂದೆ
ಹೀಗೇಕೆ ನೀ ಮಾಡಿದೆ
ಎಂದು ನಾ ಕೇಳುತಲಿದ್ದರೂ
ನೀ ಸುಮ್ಮನೆ ನಡೆದು ಹೋದೆ
ಹೋಗುವುದಾದರೆ ಹೋಗು
ತಿರುಗಿ ನನ್ನೆದೆಗೆ ಬಾರದಿರು
ಈಗ ನಿನ್ನಲ್ಲಿ ಒಲವಿಲ್ಲ, ನನ್ನಲ್ಲಿ
ಭಾವವಿಲ್ಲನೀ ಹೋಗಿಬಿಡು ನನಗೆ ಅಜ್ನಾತವಾಗಿ ಬಿಡು-- ಅರುಣ ಸಿರಿಗೆರೆ


ಒಂದು ಹಾರೈಕೆ...

ಕಾಲ ಚಕ್ರ
ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ
ಮತ್ತೊಂದು ಹೂವ ಸೇರಿಸಿದೆ...
ಎಷ್ಟೊಂದು ನೆನಪುಗಳ
ಹಿಂದೆ ಸರಿಸಿದೆ...

ಇನ್ನಷ್ಟು ಕನಸುಗಳ
ಬಿತ್ತಲು ಅಣಿಯಾಗಿದೆ...
ಒಂದು ವರುಷದ
ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿ
ವನ್ನು ತುಂಬಿ ಮನವ ಮುದಗೊಳಿಸಿದೆ..

ನೆಡೆದು ಬಂದ ದಾರಿಯಲ್ಲಿ
ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...
ಜ್ಯೋತೆಗೆಯೇ ಅವಳ
ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು
ಎದೆಯಾಳದಲ್ಲಿ ಮುದ್ರಿಸಿದೆ...!!.........FRIEND'S 10



ಹೃದಯವೀಣೆ
-------------


ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ
ನೀನಂದುನನ್ನೆದೆಯ
ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ

ನೀನಿಂದುಅದೆಷ್ಟೋ ಕೈಗಳು
ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ
ನುಡಿಸಿದ ರಾಗವನೆಂದೂನೀ ಮೀಟಿದ
ತಂತಿಗಳು ಕಂಪಿಸಿರಲು ಇಂಪಿನಲಿನಾ
ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ
ನನಗೀಗ ಬೇರೆ ರಾಗಗಳ ಅರಿವೇ ಇಲ್ಲ

ನೀ ಮೂಡಿಸುವ ರಾಗಗಳ
ಪರಿವೇ ಎಲ್ಲನುಡಿಸುತಿರು
ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ
ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ
ಆಗಿರಲಿನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ- - ಅರುಣ ಸಿರಿಗೆರೆ



ಸ್ನೇಹ......

ಸ್ನೇಹ......
ಸ್ನೇಹಿತರು ನಿಮ್ಮನು ಪ್ರೀತಿಸುತ್ತಾರೆ, ಅವರು ನಿಮ್ಮ ಪ್ರೇಮಿಯಲ್ಲ ನಿಮ್ಮನು ಆರೈಕೆ ಮಾಡುತ್ತಾರೆ, ಅವರು ನಿಮ್ಮ ಕುಟುಂಬದವರಲ್ಲ ನಿಮ್ಮ ನೋವನು ಹಂಚಿ ಕೊಳ್ಲುತ್ತಾರೆ, ಅವರು ನಿಮ್ಮ ಸಂಬಂಧಿಯಲ್ಲ ಅವರೆಲ್ಲ ನಿಜವಾದ ಸ್ನೇಹಿತರು ತಂದೆಯಂತೆ ಬಯುತ್ತರೆ ತಾಯಿಯಂತೆ ಆರೈಕೆ ಮಾಡುತ್ತಾರೆ ಅಕ್ಕ ತಂಗಿಯರು ಹಾಗೂ ಅಣ್ಣ ತಮ್ಮಂದಿರಾಂತೆ ರೇಗಿಸುತ್ತಾರೆ ಕೊನೆಯಲ್ಲಿ ನಿಮ್ಮ ಪ್ರೇಮಿಗಿಂತ ಜಾಸ್ತಿಯಾಗಿ ಪ್ರೀತಿಸುತ್ತಾರೆ ಅವರೇ ಆತ್ಮೀಯ ಹಾಗೂ ಪ್ರೀತ್ತಿಯ ಸ್ನೇಹಿತರು.