Tuesday, February 26, 2008

ಜಯಂತ್ AVARA MANASSINDA...

ಸೂರ್ಯನ ಸೋಲು
ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿಕಳ್ಳ ಹೆಜ್ಜೆ ಇಡುತ

ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ
ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವುಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ
ಕ್ಕೊಕ್ಕೊಕ್ಕೊ.....ಕ್ಕೋ!!!!

ಈ ಕವನದ ಮೂಲ ಕರ್ತೃ - ಕುಕ್ಕುಟೇಶ.ಹಕ್ಕುಗಳನ್ನು ಹೆಕ್ಕಲಾಗಿದೆ.

2}ಹೊಸ-ಊರು,ರೋಡು
ನೀವು ಬೆಂಗಳೂರಿನವರೇ..?ಬೆಂಗಳೂರಿಗೆ ಹೋಗಿ ಬಂದಿರೇ?ಹೊಸೂರು ರೋಡ್ ಗೊತ್ತಲ್ಲವೇ.?ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..?ಇದು ಹೊಸೂರು ರೋಡು.ಎಲ್ಲಿಂದ ಎಲ್ಲಿ ನೋಡಿದರೂನಿಂತ ಕಾರು,ಬಸ್ಸು,ಲಾರಿ ಲೋಡು.ಹೀಗಿರಲಿಲ್ಲವಂತೆ...!ವರುಷಗಳ ಹಿಂದೆ,ಇಲ್ಲಿ..ಈ ದಟ್ಟಣೆ,ಸಂಘರ್ಷಣೆ.ವೇಗವಾಗಿ ಓಡುತ್ತಿದ್ದವಂತೆಹಲ-ಕೆಲಬಸ್ಸು ಲಾರಿಗಳು.ಹೌದೌದು,,,ಎಲ್ಲ ಹೇಳುವುದದೇಐಟಿ.ಬಿಟಿ ಯ ಬೆಳವಣಿಗೆ,ಅಪಾರವಂತೆ..!!ಇಲ್ಲಿ ಹೀಗೆ ಒಮ್ಮೆಕಾರಿನಲ್ಲಿ ಕುಳಿತಾಗಓಹ್..ಮರೆತೆನೇ..?ಇಲ್ಲಿಯ ಡ್ರೈವಿಂಗ್ ಹೆಸರು"ಬಂಪರ್ ಟು ಬಂಪರ್".ಭಾಗ್ಯಲಕ್ಷ್ಮಿಯಲ್ಲ !!ಇರಕೂಡದು..ನನ್ನ,ಹಿಂದಿನ ಮುಂದಿನಅಕ್ಕ,ಪಕ್ಕದ ಗಾಡಿಗೂಸೆಂಟಿಮೀಟರ್ ಜಾಗ."ಸಮಯಸಾಧಕರಿದ್ದಾರೆ"ಎಚ್ಚರ.ಒಂದು ಸಂಜೆ,ಮುಚ್ಚಿದ ಕಿಟಕಿ,ಅರಚುವ ಬಾನುಲಿ,ಬೊಮ್ಮನಹಳ್ಳಿ ಜಂಕ್ಶನ್.ಐದು,ಹತ್ತು..ಇಪ್ಪತ್ತುನಿಮಿಷಗಳೋ?ಬೋಡುತಲೆಗೆ ತೊಟ್ಟಿಕ್ಕುವತಣ್ಣನೆ ನೀರ ಹನಿಗಳು.ಐದೈದು ನಿಮಿಷಕ್ಕೊಮ್ಮೆಒಂದು.ಒಂದೇ~ ಹೆಜ್ಜೆ ಇಡುತ....ನಡೆದಿತ್ತು.ಎಂಜಿನ್ ನಿಲ್ಲಿಸುವಂತಿಲ್ಲ,ಮುಖದ ಗಂಟೂ ಬಿಡಿಸುವಂತಿಲ್ಲ.ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋಆಫ಼ೀಸೂ - ಬಸ್ಸು.ಬ..ಳ..ಲಿ...ಬೆಂದು,ನಿದ್ರಿಸುವ,ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,ಸಾಫ಼್ಟ್-ವೇರ್ ಎಂಜಿನಿಯರ್ ಗಳು.ನನ್ನ ಕಾರಿಗೂ,ರಸ್ತೆ ವಿ-ಭಜಕಕ್ಕೂ..ಇದ್ದೂದೊಂದೇ ಅಡಿ.ಯಾವುದೋ....ಹಾಡ ಕೇಳುತಮೈಯ್ಯ ಮರೆತವನಎಚ್ಚರಿಸಿದ್ದು,ಸುಂಯ್ಯನೆ ಬಂದು,ಗಕ್ಕನೆ ನಿಂತಸ್ಚೂಟರು..ಮೇಲೊಬ್ಬ ಜೋಕರು.ನಕ್ಕನೊಮ್ಮೆ ನನ್ನ ನೋಡಿನಾನು ನಕ್ಕೆ,ದೇಶಾವರಿ.ಏನು ಟ್ರಾಫ಼ಿಕ್ಕು ಸಾರ್..!ಸರ್ಕಾರ ಅದೇನು ಮಾಡತೈತೋ..?ಅಲ್ಲವೇ..?ಯೋಜನಾ ಆಯೋಗದಲ್ಲಿನಾನಿಲ್ಲವೇ..?ಮತ್ತೊಮ್ಮೆ ನಕ್ಕೆ.ನೀವೂ ಸಾಫ಼್ಟ್ ವೇರಾ..? ಸಾರ್ಹೌದೆಂದೆ.ಬರಿದಾಗದ ಬತ್ತಳಿಕೆ,"ಇನ್ನ ಎಷ್ಟು ವರುಶ ಸಾರ್ ಹಿಂಗೆ..???"ಜಯಂತಬಾಬು

Monday, February 25, 2008

ಅಶೋಕ ತಗಡು ಕಥೆ ಬರೆಯಲಿಲ್ಲ

ರಶ್ಮಿ ಕಣ್ಣು ತೆರೆದಾಗ ಸುತ್ತಲೂ ಒಮ್ಮೆ ನೋಡಿ ಏನೊಂದೂ ತಿಳಿಯದೆ ಮಂಕಾದಳು. ತಾನು ಇಲ್ಲೇಕೆ ಇದ್ದೇನೆ, ಏನು ಈ ನೋವು, ಇದೇನು ಆಸ್ಪತ್ರೆಯೇ.. ಅಯ್ಯೋ ಏಕೆ, ಈ ಡ್ರಿಪ್ ಹಾಕಿದ್ದಾರೆ… ಎಂದುಕೊಳ್ಳುತ್ತಲೇ ಗಾಬರಿಯಾಗಿ ಮತ್ತೆ ಪ್ರಜ್ಞೆ ಕಳೆದುಕೊಂಡಳು. ಯಾರನ್ನಾದರೂ ಕೇಳೋಣ ಎಂದರೆ ಸ್ಪೆಷಲ್ ವಾರ್ಡಿನಲ್ಲಿ ಒಂಟಿ ಬೆಡ್ ಮೇಲಿನ ತಾನು ಮಾತ್ರ. ಪಕ್ಕದಲ್ಲಿ ಹಣ್ಣು-ಎಳೆನೀರುಗಳನ್ನು ಜೋಡಿಸಿಟ್ಟಿದ್ದ ಟಿಪಾಯಿ, ಎದುರಿಗೆ ನೆಟ್ಟಗೆ ನಿಂತಿದ್ದ ಕಬ್ಬಿಣದ ಸರಳಿಗೆ ತಲೆಕೆಳಗಾಗಿ ನೇತುಬಿದ್ದ ಡ್ರಿಪ್ ಸ್ಯಾಚೆ, ಅದರಿಂದ ಸಪೂರ ಕೊಳವೆಯುದ್ದಕ್ಕೂ ಹನಿಯಿಕ್ಕುತ್ತಿದ್ದ ಜೀವ ಜಲ! ಎಲ್ಲವನ್ನೂ ನೋಡುತ್ತಿದ್ದಂತೆ ಅರ್ಥವಾಗತೊಡಗಿತು. ಅಶೋಕನ ನೆನಪಾಯಿತು. ಕನಸಿನಲ್ಲೆಂಬಂತೆ ಅವನ ಹೆಸರನ್ನು ಗುನುಗಿದಳು. ತುಟಿ ಬಿಚ್ಚುತ್ತಿದ್ದಂತೆ ತಲೆಯಲ್ಲಿ ಸಿಡಿಲು ಸಿಡಿದಂತಾಯಿತು. ಅಷ್ಟರಲ್ಲಿ ಅಸಾಧ್ಯ ನೋವು ಆಕೆಯ ಪ್ರಜ್ಞೆಯನ್ನು ಕಿತ್ತುಕೊಂಡಿತ್ತು.
****
ಆಲನಹಳ್ಳಿ ಕೃಷ್ಣರ ಗೀಜಗನ ಗೂಡಿನ ಮುಂದೆ ನೀನೇನು ಕಥೆ ಬರೀತೀಯಾ ಬಿಡೋ ಎಂದು ರಶ್ಮಿ ಹೇಳಿದಾಗ ಅಶೋಕ, ತಗಡು ಕಥೆಗಳನ್ನು ಬರಿಯೋನು ಅನ್ನೋ ಥರ ನನ್ನನ್ನ ಹಂಗಿಸ್ತೀಯಾ. ಆಲನಹಳ್ಳಿ ಗ್ರೇಟ್ ಬಿಡು. ಆದ್ರೆ ನಮ್ಮ ಕಾಲದ ತುರ್ತುಗಳೇ ಬೇರೆ ಅಲ್ವಾ ಎಂದು ಥೇಟು ಅನಂತಮೂರ್ತಿ ಥರ ಡೈಲಾಗ್ ಹೊಡ್ದ. ಮಾತು ಕಥೆಯ ಸುತ್ತ ಸುತ್ತುತ್ತಿದ್ರೂ ಬ್ರಿಗೇಡ್ ರಸ್ತೆಯ ಫುಟ್ಪಾತ್ನಲ್ಲಿ ಹೆಜ್ಜೆ ಹಾಕ್ತಿದ್ದ ಅವರಿಬ್ಬರ ಮನಸ್ಸುಗಳು ಮಾತ್ರ ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದವು.
ಆಕೆಯ ಹೆಗಲ ಬಳಸಿದ ಆತನ ಕೈ ಅವಳ ತೋಳಿನ ಸುತ್ತ ಚಿತ್ತಾರ ಬಿಡಿಸುತ್ತಿದ್ದರೆ, ಅವನ ಸೊಂಟ ಬಳಸಿದ್ದ ಆಕೆಯ ಬೆರಳುಗಳು ಪಕ್ಕೆಲುಬುಗಳ ಜತೆ ಲಾಸ್ಯವಾಡುತ್ತಿದ್ದವು. ಮೂರು ವರ್ಷಗಳ ಹಿಂದೆ ಪಠ್ಯವಾಗಿದ್ದ ತೇಜಸ್ವಿ ಅವರ ಚಿದಂಬರ ರಹಸ್ಯದ ಪಾಠ ಕೇಳುತ್ತಾ, ಕೇಳುತ್ತಾ ಅದರಲ್ಲಿನ ಜಯಂತಿ-ರಫಿ ಜೋಡಿ ನಾವೇ ಎಂದು ಅನ್ನಿಸಿದ ಕ್ಷಣವೇ ಆಚೀಚೆ ಡೆಸ್ಕಗಳ ತುದಿಯಲ್ಲಿ ಕೂತಿದ್ದ ರಶ್ಮಿ- ಅಶೋಕರ ಕಣ್ಣುಗಳು ಕಲೆತಿದ್ದವು.
ಅಂದಿನಿಂದ ರಫಿ ಅಶೋಕನಾಗಿ, ಅಶೋಕ ರಫಿಯಾಗಿ, ರಶ್ಮಿ ಜಯಂತಿಯಾಗಿ, ಜಯಂತಿ ರಶ್ಮಿಯಾಗಿ ಕ್ಯಾಂಪಸ್ಸಿನಿಡಿ ಅವರಿಬ್ಬರ ಜೋಡಿ ಚಿದಂಬರ ರಹಸ್ಯದಂತಹ ಕುತೂಹಲಕ್ಕೆ, ಪ್ರಶಂಸೆಗೆ ಕೊನೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗಿತ್ತು. ಕಲ್ಲು ಬೆಂಚುಗಳಿಂದ ರಸ್ತೆಯಂಚಿನವರೆಗೆ ಚಿದಂಬರ ರಹಸ್ಯವನ್ನು ಪರಸ್ಪರರು ಕೆದಕುವ ಆಟವಾಡುತ್ತಲೇ ಇದ್ದರು. ಕಾಲೇಜಿನ ಸಹಪಾಠಿಗಳಿಂದ ಉಪನ್ಯಾಸಕರವರೆ, ಕ್ಲರ್ಕ್- ಅಟೆಂಡ್ರು ಕೊನೆಗೆ ಕಾಲೇಜ್ ಬಸ್ಸಿನ ಕಂಡಕ್ಟರನ ವರೆಗೆ ಎಲ್ಲರಿಗೂ ಇವರು ಜನುಮದ ಜೋಡಿಯಾಗಿಬಿಟ್ಟಿದ್ದರು.
ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಅಶೋಕ ಭಾಷಾ ವಿಶ್ಲೇಷಕ. ಅವಳು ಬಿಪಿಒ ಎಂಪ್ಲಾಯಿ. ಕೈತುಂಬ ಸಂಬಳ, ಎದೆ ತುಂಬ ಪ್ರೀತಿ-ಪ್ರೇಮದ ಘಮ. ಇನ್ನೇನು ಬೇಕು ಮದುವೆಯ ಬಂಧನಕ್ಕೆ? ಅಶೋಕನೇನೋ ಹೀಗೇ ತುಂಟಾಟವಾಡಿಕೊಂಡು ಇನ್ನಷ್ಟು ದಿನ ಇದ್ದುಬಿಡುವ, ಆಮೇಲೆ ಮದುವೆ-ಗಿದುವೆ ಇದ್ದದ್ದೇ ಎಂಬ ಆಕಾಂಕ್ಷೆಯಲ್ಲಿದ್ದ. ಆದರೆ, ರಶ್ಮಿಯ ಸ್ಥಿತಿ ಬೇರೆಯದೇ ಆಗಿತ್ತು. ಅವಳಿಗೂ ಇಂತಹ ತುಂಟಾಟಗಳ ತುಡುಗಿನ ಹುಡುಗನ ಚೇಷ್ಟೆಗಳಲ್ಲಿ ದಿನ ಕಳೆಯುವುದೇ ಮೋಜು ಎನಿಸುತ್ತಿತ್ತು. ಆದರೆ, ಮನೆಯವರು ಬಿಡಬೇಕಲ್ಲ.
ಪ್ರತಿ ಬಾರಿ ಸಕಲೇಶಪುರಕ್ಕೆ ಹೋದಾಗಲೂ ಮದುವೆಗೆ ಗೊತ್ತು ಮಾಡೋಣ ಎಂಬುದು ಅಪ್ಪ- ಅಮ್ಮನ ವರಾತ. ಜತೆಗೆ ಅಶೋಕನ ಜತೆ ರೋಡ್ ರೋಮಿಯೋ ಆಟ ಅತಿಯಾಗಿರುವುದೂ ಅವರ ಕಿವಿಗೆ ಬಿದ್ದಿದೆ. ಕಾಲೇಜು ದಿನದಿಂದಲೂ ಅನುಮಾನವಿದ್ದ ಅವರಿಗೆ ಈಗ ಎಲ್ಲವೂ ಖಾತ್ರಿಯಾಗಿಬಿಟ್ಟಿದೆ. ಹೋದ ತಿಂಗಳು ಊರಿಗೆ ಹೋದಾಗ ಅವನ್ಯಾರೋ ಲೆಕ್ಷರ್ ಮಗ ಪೆದ್ದುಗುಂಡನಂತಹವನಿಗೆ ತೋರಿಸಿದ್ದರು. ಮೊನ್ನೆ ತಾನೆ ಅಮ್ಮ, ‘ಅವನು ಒಪ್ಪಿದ್ದಾನೆ. ಎಂಗೇಜ್ಮೆಂಟ್ ಮಾಡೋಣ ಅಂತಿದ್ದಾರೆ. ಮುಂದಿನ ವಾರ ನಾಲ್ಕು ದಿನ ರಜೆ ಹಾಕಿ ಬಾ’ ಎಂದಿದ್ದರು. ಅದಕ್ಕೆ ರಶ್ಮಿ ಹೋಗಮ್ಮ, ನನಗೆ ಅವ ಇಷ್ಟವಿಲ್ಲ ಎಂದೂ ಹೇಳಿದ್ದಳು. ಆದರೆ, ಇವರ ರಫಿ-ಜಯಂತಿ ಕಥೆ ಅವರಿಗೆ ಗೊತ್ತಿಲ್ಲದ್ದೇನಲ್ಲವಲ್ಲ, ಹಾಗಾಗೆ ಅವಳು ಹತ್ತನ್ನೆರಡು ಹುಡುಗರನ್ನ ಬೇಡ ಎಂದಿದ್ದು ಎಂಬುದೂ ಅರ್ಥವಾಗಿತ್ತು. ಅದಕ್ಕಾಗೆ ಅವರು ಈ ಸಂಬಂಧವನ್ನು ಹೇಗಾದರೂ ಮಾಡಿ ಗಟ್ಟಿಮಾಡಿಕೊಂಡು ಇವಳನ್ನು ಹೆದರಿಸಿ-ಬೆದರಿಸಿಯಾದರೂ ಒಪ್ಪಿಸಿ ಮದುವೆ ಮಾಡಿಸಬೇಕು. ಮುಂದೆ ದಿನ ಕಳೆದಂತೆ ಎಲ್ಲಾ ಸರಿ ಹೋಗುತ್ತದೆ ಎಂದು ನಿರ್ಧರಿಸಿಯೇ ಆಕೆಗೆ ಫೋನ್ ಮಾಡಿದ್ದರು.
ಅದನ್ನೆಲ್ಲಾ ಅಶೋಕನಿಗೆ ಹೇಳಿದರೆ, ಆತ ಅದಕ್ಯಾಕೆ ಅಷ್ಟೊಂದು ತಲೆ ಬಿಸಿ. ಆಯ್ತು ಬಿಡು. ನಾಡಿದ್ದು ಬುಧವಾರ ನಮ್ಮ ಆಪತ್ಭಾಂಧವ ಇದ್ದಾನಲ್ಲ. ಸಬ್ ರಿಜಿಸ್ಟ್ರಾರ್ ಅವರತ್ರ ಹೋಗಿ ರಿಜಿಸ್ಟರ್ ಆಗಿಬಿಡೋಣ. ಅದಕ್ಕೇನೂ ಏರ್ಪಾಡು ಬೇಕೋ ಅದನ್ನೆಲ್ಲಾ ರಮೇಶ ನಾನೂ ಮಾಡ್ತೀವಿ. ನೀನೇನೂ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದ.
ಅದೇ ಖುಷಿಯಲ್ಲೇ ಆಕೆ, ಈಗ ಬ್ರಿಗೇಡ್ ರೋಡ್ ರೋಮಿಂಗಿಗೆ ಅವನ ಜತೆ ಹೆಜ್ಜೆ ಹಾಕ್ತಾ ಇದ್ದಳು. ಕಣ್ಣ ತುಂಬ ಮದುವೆಯ ಕನಸು, ಅದೂ ಸಂಬಂಧದ ಹೊಸತನವಲ್ಲದಿದ್ರೂ ಬದುಕಿನ ಘಟ್ಟದ ನಿರೀಕ್ಷೆ ಅವಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ದಿತ್ತು.
ಒಂದು ದೀರ್ಘ ಓಡಾಟದ ಬಳಿಕ ಇಬ್ಬರೂ ರಾತ್ರಿ ಎಂಟರ ಹೊತ್ತಿಗೆ ಭೀಮಾಸ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಎಂಜಿ ರಸ್ತೆಯಲ್ಲಿ ಆಟೋ ಹಿಡಿಯಲು ಹೊರಟರು. ಎಂಟು ಗಂಟೆಯ ಟ್ರಾಫಿಕ್ ಬುಸಿಯಲ್ಲಿ ರಸ್ತೆಯ ಆಚೆ ಬದಿಗೆ ದಾಟುವುದೇ ಕಷ್ಟವಾಗಿತ್ತು. ಬರ್ರನೆ ಎರಗುವ ಬಸ್ಸು-ಕಾರುಗಳ ನಡುವೆ ಒಂದಿಷ್ಟು ಜಾಗ ಸಿಕ್ಕಿದ್ದೇ ತಡ ಅಶೋಕ, ರಶ್ಮಿಯ ಕೈ ಹಿಡಿದು ಎಳೆದುಕೊಂಡ ನುಗ್ಗಿದ. ಕ್ಷಣ ಉರುಳುವ ಮೊದಲೇ ಯರ್ರಾಬಿರ್ರಿ ಸ್ಪೀಡಲ್ಲಿ ಬಂದ ಸ್ಕಾರ್ಫಿಯೋ ದಡ್ ಎಂದು ಬಡಿಯಿತು. ಅಶೋಕ ಹಾರಿಬಿದ್ದ. ರಶ್ಮಿ ಸರಕ್ಕನೆ ಹಿಂದಕ್ಕೆ ಜರಿದರೂ ಹಿಂದಿನಿಂದ ಬಂದ ಆಟೋ ತಾಗಿ ಕುಸಿದಳು. ಅಶೋಕನ ತಲೆಗೆ ಬಡಿದ ರೋಡ್ ಡಿವೈಡರ್ ರಕ್ತದ ಮಡುವಲ್ಲಿ ಒದ್ದೆಯಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ಇತ್ತು. ಉಸಿರು ನಿಂತಿತ್ತು.
****
ಆಸ್ಪತ್ರೆಯ ಬೆಡ್ ಮೇಲೆ ರಶ್ಮಿ ಮಲಗಿದ್ದಳು. ಪ್ರಜ್ಞೆಯ ಯಾವುದೋ ಆಳದಲ್ಲಿ ಆಕೆ, ಅಶೋಕ ಜತೆ-ಜತೆಯಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಅಶೋಕ ‘ಅಂತೂ ತಗಡು ಕಥೆ ಬರೆಯಲೇ ಇಲ್ಲ ನೋಡು ನಾನು. ಹ್ಞಾಂ, ಏನಂದ್ಕೊಂಡಿದಿಯಾ ನನ್ನನ್ನ’ ಎಂದು ಛೇಡಿಸುತ್ತಿದ್ದ.

ಸಂಗ್ರಹ ಕವಿತೆಗಳು..

ಅನಾಮಿಕ ಚೆಲುವೆಗೆ,…
ಸವೆಯದ ಹಾದಿಯಲ್ಲೇ ಆಕೆಯ ಒಡನಾಟ
ಜುಳು-ಜುಳಿಸುವ ಮೋಹಕ ಝರಿಯೇ ಸಂಗಾತಿ;
ಆ ಸುಂದರಿಗೆ ಹೊಗಳಿಕೆಯೇ ಕೇಳಿಲ್ಲ!
ಪ್ರೀತಿಯ ಮಾತು ಇನ್ನೆಲ್ಲಿ?

ಹಸಿರು ಹಾವಸೆಗಟ್ಟಿದ
ಕಲ್ಲ ಹಾಸಿನ ಬದಿಯಲ್ಲಿ
ಮಿನುಗುವ ಹೂ
ಕಗ್ಗತ್ತಲ ರಾತ್ರಿಯಲಿ ಮಿಂಚುವ
ಒಂಟಿ ತಾರೆ ಅವಳ ಚೆಲುವು..

ಅನಾಮಿಕಳಾಗೇ ಉಳಿದ
ಆ ಲೂಸಿಯ ಯಾನ ಮುಗಿದಿದೆ
ಸಮಾಧಿಯಲ್ಲಿ!ಈಗುಳಿದಿರುವುದು
ಅವಳ ಹಂಬಲವಷ್ಟೇ!.....

ತಪ್ಪುಗಳ ಪಹರೆಯಲಿ….

ಇಡಿಯಾಗುವುದೊಂದು
ಮೆಲುನಡಿಗೆಯ ಸಾವು.
ನಾನಂದುಕೊಂಡ, ಕನಸಿದ
ಎಲ್ಲವೂ ತದ್ರೂಪದಂತೆ
ನಿಜವಾದರೆ,…..
ಬದುಕೊಂದು ಕೊನೆಯಿಲ್ಲದ
ಯಶಸ್ಸುಗಳ ಹಳಸಲು ಪಲ್ಲವಿ.
ತಪ್ಪು;
ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.
ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ
ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….
ಆದರೂ,
ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,
ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ
ಭ್ರಮೆಯ ಕೂಸು;
ತಪ್ಪಿಗೆ ನಾನೇ ಅಂಜುವ ಪರಿ.
ಕೊನೆಗೂ ತಪ್ಪು-
ನಾನಿರುವ ಪರಿಗೊಂದು ರುಜುವಾತು,
ನಾನಾಗುವ ಸ್ಥಿತಿಗೊಂದು ಕದಲಿಕೆ
ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.
ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ
ನಾನು ಇಂಚಿಂಚೇ ಬೆಳೆದೆ!

ಮಳೆಯೋ ಮಳೆ ಎದೆಯೊಳಗೆ….

ಅವಳ ಕಣ್ಣಿನ ತುಂಬ
ಮಿಂಚು ಮಿನುಗುವ ಬೆಳಕು…
ಹನಿಒಡೆದ ಬಳಿಕದ ಹೊಂಬಿಸಿಲ
ಎಸಳು ಕಿರುನಗೆಯ ಮಂದಲೆ.
ಅವನ ಕುಡಿನೋಟದ
ಸಿಡಿಲ ತಾಕಿದ ಕ್ಷಣ
ಪ್ರೀತಿಯ ಮಳೆ…. ಧೋ…
ಮಳೆ-ಮನಸ್ಸುಗಳ
ಪುಲಕ- ಮೈಯೊಳಗೆ!!
ಜೀವ ಪ್ರೀತಿಯ
ಘಳಿಗೆಗೆ ಹನಿಯ ಬೆಳಗು!!

ಬಾಡಿದ ಹೂ...

ನನ್ನ ತಂಗಿ ತುಮಕೂರಿನ ಸೋಮೇಶ್ವರ ಶಾಲೆಯಲ್ಲಿ ಓದುತ್ತಿದ್ದಾಗ ಅವಳ ಒಬ್ಬರು ಮಿಸ್ ಅವಳಿಗೂ ಅವಳ ಸ್ನೇಹಿತೆಯರಿಗೂ ಬಹು ಪ್ರಿಯವಾಗಿದ್ದರು.ಮಿಸ್ ನ ಬಗ್ಗೆ ದಿನವೂ ಮನೆಯಲ್ಲಿ ಬಂದು ವರದಿ ಒಪ್ಪಿಸುತ್ತಿದ್ದಳು.`ನಂ ಮಿಸ್ ಅಷ್ಟು ಒಳ್ಳೆಯವರು ಇಷ್ಟು ಒಳ್ಳೆಯವರು....,ಮಿಸ್ಸು ಎಷ್ಟು ಚೆನ್ನಾಗಿ ಪಾಠ ಮಾಡ್ತಾರೆ, ಮಿಸ್ಸಿಗೆ ಕೋಪಾನೇ ಬರಲ್ಲ... ಇವತ್ತು ಮಿಸ್ ಏನ್ ಹೇಳುದ್ರು ಗೊತ್ತಾ...,ಮಿಸ್ ನನ್ನ ಇವತ್ತು ಹೊಗಳುದ್ರು...,ಮಿಸ್ ಎಷ್ಟು ಚೆನ್ನಾಗಿದ್ದಾರೆ ..., ಮಿಸ್ ಇವತ್ತು ಹೊಸ ಸೀರೆ ಉಟ್ಟು ಬಂದಿದ್ರು... ಹೀಗೆ...
ಒಟ್ಟಿನಲ್ಲಿ ಅವರ್ಯಾರೋ ಮಿಸ್ಸು ತಮ್ಮ ವಿದ್ಯಾರ್ಥಿಗಳ ಮನದ ತುಂಬಾ ಆವರಿಸಿಕೊಂಡು ಬಿಟ್ಟಿದ್ದರು
ಹೀಗಿರುವಾಗ ಒಮ್ಮೆ `ನಂ ಮಿಸ್ಸಿಗೆ ಮದುವೆಯಂತೆ ಇನ್ನು ಒಂದು ತಿಂಗಳು ಅವರು ಸ್ಕೂಲಿಗೆ ಬರುವುದಿಲ್ಲವಂತೆ' ಅಂತ ತುಂಬಾ ಬೇಜಾರು ಮಾಡಿಕೊಂಡು ಹೇಳಿದಳು ಅವಳ ಬೇಜಾರು ನೋಡಿ `ಮದ್ವೆ ಮಾಡಿಕೊಂದು ವಾಪಸ್ಸು ಬರ್ತಾರೆ ಬಿಡು' ಅಂತ ಅವಳನ್ನು ಸಮಾಧಾನ ಮಾಡುವ ಹೊತ್ತಿಗೆ ಅಮ್ಮನಿಗೆ ಕಲಿತ ಬುದ್ದಿ ಎಲ್ಲಾ ಖರ್ಚಾಗಿತ್ತು
ಮಕ್ಕಳೆಲ್ಲಾ ಕಾದಿದ್ದೂ ಕಾದಿದ್ದೇ... ಮಿಸ್ ಯಾವಾಗ ವಾಪಸ್ಸು ಬರ್ತಾರೆ ಅಂತಾ...ಅಂತೂ ಮಿಸ್ಸು ವಾಪಸ್ಸು ಬಂದರು ನನ್ನ ಅಮ್ಮನನ್ನೂ ಸೇರಿಸಿ ತಂಗಿಯ ಸ್ನೇಹಿತೆಯ ಅಮ್ಮಂದಿರೆಲ್ಲಾ ಸಮಾಧಾನದ ಉಸಿರು ಬಿಟ್ಟರು!
********************
ನಂತರವೂ ಮಿಸ್ ನ ಬಗ್ಗೆ ತಂಗಿ ಆಗಾಗ ಹೇಳುತ್ತಿದ್ದಳಾದರೂ ಯಾಕೋ ಅದರಲ್ಲಿ ಉತ್ಸಾಹ ಇರುತ್ತಿರಲಿಲ್ಲ. ` ಮಿಸ್ ಯಾಕೋ ಸಪ್ಪಗಿದ್ರು...ಮಿಸ್ಸಿಗೆ ತಲೆನೋವು ಬಂದಿತ್ತು ಇವತ್ತು...ಅಂತೇನೋ ಒಂದೆರಡು ಬಾರಿ ಹೇಳಿದ ನೆನಪು `ಒಮ್ಮೆ ಮಿಸ್ ನ ಮುಖ ಕೈಯೆಲ್ಲಾ ಗಾಯ ಆಗಿಬಿಟ್ಟಿತ್ತಮ್ಮಾ'ಅಂತ ಆತಂಕದಿಂದ ಹೇಳಿದ್ದಳು
ಪರೀಕ್ಷೆ ಹತ್ತಿರ ಬರುತ್ತಿದ್ದುದರಿಂದ ಓದಿನಲ್ಲಿ ಸೀರಿಯಸ್ ಆಗಿ ಮಿಸ್ ಬಗ್ಗೆ ಮಾತಾಡುವುದು ಕಡಿಮೆ ಮಾಡಿದ್ದಾಳೆಂದುಕೊಂಡು ಅಮ್ಮ ಸುಮ್ಮನಾಗಿಬಿಟ್ಟರು ನಾವುಗಳೂ ನಂ ನಮ್ಮ ಪರೀಕ್ಷೆಗಳಿಗೆ ಓದುವ ಭರದಲ್ಲಿ ಅವಳ ಹತ್ತಿರ ಅವಳ ಮಿಸ್ ಬಗ್ಗೆ ಕೇಳಲು ಸಮಯ ಇರುತ್ತಿರಲಿಲ್ಲ
ಒಂದು ದಿನ ಬೆಳಗ್ಗೆ ಶಾಲೆಗೆ ಹೋದವಳು ಅರ್ಧಗಂಟೆಯಲ್ಲೇ ಅಳುತ್ತಾ ಮನೆಗೆ ಬಂದಳು. ಅಮ್ಮ`ಏನಾಯ್ತೇ..ಏನಾಯ್ತೇ...ಅಂತ ಕೇಳಿದರೆ ಬಿಕ್ಕಿ ಬಿಕ್ಕಿ ಅಳುತ್ತಾ `ನಂ ಮಿಸ್ಸು...ನಂ ಮಿಸ್ಸೂ.. ಅನ್ನುತ್ತಿದ್ದಳೇ ಹೊರತು ಬೇರೇನೂ ಹೇಳುತ್ತಿರಲಿಲ್ಲ. `ನಿಮ್ ಮಿಸ್ಸು ನಿಂಗೆ ಏನಾದ್ರೂ ಬೈದ್ರೇನೇ...ಹೊಡದ್ರ...ಅಮ್ಮ ಎಲ್ಲಾ ಕೇಳಿ ಆಯಿತು ಯಾವುದಕ್ಕೂ ಉತ್ತರವಿಲ್ಲ...
ಕೊನೆಗೆ ಪಕ್ಕದ ಮನೆಯರು ವಿಷಯ ತಿಳಿಸಿದರು` ವರದಕ್ಷಿಣೆ ಸಾಕಷ್ಟು ಕೊಡಲಿಲ್ಲ ಅಂತ ನಿಮ್ಮ ಮಗಳ ಸ್ಕೂಲಿನ ಮಿಸ್ಸನ್ನ ಅವರತ್ತೆ ಮನೆಯವರು ಸೀಮೆ ಎಣ್ನೆ ಹಾಕಿ ಸುಟ್ಟು ಬಿಟ್ಟರಂತೆ... ಇವತ್ತಿನ ಲೋಕಲ್ ಪೇಪರಲ್ಲಿ ಬಂದಿದೆ...'
***************
ರಾತ್ರಿ ಎಲ್ಲಾ ತಂಗಿಗೆ ಕೆಂಡದಂಥಾ ಜ್ವರ ಏನೇನೋ ಕನವರಿಸುತ್ತಿದ್ದಳು. ಅವಳು ಪೂರ್ತಿಯಾಗಿ ಹುಶಾರಾಗುವ ವರೆಗೂ ಶಾಲೆಗೆ ಕಳಿಸಲು ಆಗುವುದಿಲ್ಲಾ ಅಂತ ಹೆಡ್ಮಿಸ್ಸಿಗೆ ಹೇಳಲು ಅಮ್ಮ ಹೋದಾಗ `ತುಂಬಾ ಮಕ್ಕಳು ನಿಮ್ಮ ಮಗಳ ಹಾಗೇನೇ ಅಪ್ ಸೆಟ್ ಆಗಿಬಿಟ್ಟಿದ್ದಾರೆ ಆ ಮಿಸ್ಸು ಮಕ್ಕಳ ಫೇವರೆಟ್ ಆಗಿದ್ರು' ಅಂತ ಹೆಡ್ಮಿಸ್ಸು ಅಮ್ಮನಿಗೆ ಹೇಳಿದರಂತೆ
ಬೆಂಕಿ ,ಸೀಮೇ ಎಣ್ಣೆ, ಅಯ್ಯೊ ಸುಡ್ ಬೇಡೀ..' ಅಂತೆಲ್ಲಾ ಮಕ್ಕಳು ನಿದ್ದೆಯಲ್ಲೂ ಎಚ್ಚರದಲ್ಲೂ ಪದೇ ಪದೇ ಹೇಳುತ್ತಾ ಭಯ ಪಡುತ್ತಿದ್ದಾರೆಂದೂ ಅಮ್ಮಂದಿರು ಮಾತಾಡಿ ಕೊಳ್ಳುತ್ತಿದ್ದದ್ದು ನನಗೆ ನೆನಪಿದೆ
*****************
ನನ್ನ ತಂಗಿ ಪೂರ್ತಿಯಾಗಿ ಸಮಾಧಾನ ಮಾಡಿಕೊಳ್ಳಲು ಮೂರು-ನಾಲ್ಕು ತಿಂಗಳೇ ಹಿಡಿಯಿತು. ಅವಳ ಸ್ನೇಹಿತೆಯರಿಗೂ ಬಹುಶಃ ಅಷ್ಟೇ ಸಮಯ ಹಿಡಿದಿರಬೇಕು
*****************
ಈ ಎಲ್ಲಾ ಸಂಗತಿ ನಡೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗುತ್ತಾ ಬಂತು
ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಚಿತ್ರ ಸಾಕಷ್ಟು ಬದಲಾಗಿದೆ
ವಿಜ್ಞಾನ ,ತಂತ್ರ ಜ್ಞಾನ,ಸಾಫ್ಟ್ ವೇರು,ಹಾರ್ಡ್ ವೇರು ಅಂತೆಲ್ಲಾ ಪ್ರಗತಿಗಳಾಗಿವೆ
2015 ರ ಹೊತ್ತಿಗೆ ಇಂಡಿಯಾನೇ ಸೂಪರ್ ಪವರ್ ಅಂತೆ ಅಂತ ಯಾರಾದರೂ ಹೇಳಿದಾಗ ಮನಸ್ಸು ಹೆಮ್ಮೆಯಿಂದ ಉಬ್ಬುತ್ತೆ
ಆದರೆ ನನ್ನ ತಂಗಿಯ ಮಿಸ್ಸಿನ ಕಥೆ ಇವತ್ತಿಗೂ ಮತ್ತೆ ಮತ್ತೆ ಮರುಕಳಿಸುತ್ತಿದೆ
********************************
ಎಲ್ಲಿ ಹೆಂಗಸರು ಪೂಜೆಗೊಳ್ಳುತ್ತಾರೋ ಅಲ್ಲಿ ದೇವತೆಗಳು ನೆಲೆಸುವರಂತೆ (ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ...)
ಎಲ್ಲಿ ಹೆಂಗಸರನ್ನು ಸುಡಲಾಗುತ್ತದೋ, ಹುಟ್ಟುವ ಮೊದಲೇ ಹೊಸಕಿ ಹಾಕಲಾಗುತ್ತದೋ ಅಲ್ಲಿ ಯಾರು ನೆಲೆಸುತ್ತಾರೆ???
********************************
ನಾನು ಕಾಣದೇ ಹೋದ ನನ್ನ ತಂಗಿಯ ಮಿಸ್ಸಿಗೆ,
ಮತ್ತು ಅಂಥಹ ನೂರಾರು ಸುಟ್ಟು ಕರಕಲಾದ ಹೂಗಳಿಗೆ,
ಪ್ರಪಂಚಕ್ಕೆ ಕಣ್ನು ಬಿಡುವ ಮೊದಲೇ ಹೊಸಕಲ್ಪಟ್ಟ ನೂರಾರು ಕಂದಮ್ಮಗಳಿಗೆ....

ಅವಳು



ಚಂದವಿದ್ದಳು ಗೆಳೆಯ ಅವಳು
ಒಳ್ಳೆ ಮಜಬೂತು ಕುದುರೆ.
ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು
ಬಿಟ್ಟಾಗ ನಗುವ ನಕ್ಷತ್ರ ಮೀನು.
ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ
ಕಚ್ಚಿ ಹೇರುಪಿನ್ನು, ನಗುವ ಹಾಗೆ
ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,
ತುಂಬು ಕೊರಳಿನ ತುಂಬ ಕಾಡು ಹಾಡು.
ಅವಳ ತಟ್ಟನೆಯ ತಿರುವು ತಿರುವುತ್ತ
ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ
ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ
ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ
ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.
.,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,..,.,.,.,.,.,..,.,.,,.,,.,,.
ನನ್ನ ತೋಳುಗಳಲ್ಲಿ


ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು
ಸೆರೆಯಾಗಿದೆ ಓ ದೇವತೆಯೇ…

ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ
ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.
ನನ್ನ ಬಿಗಿ ಅಪ್ಪುಗೆಯಿಂದ ಮಾತಿಲ್ಲದೆಯೆ
ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ
ಸಂಶಯದೊಂದು ಸಣ್ಣ ನಡುವಿನ ಹುಡುಗೀ..
ನೀ ಕೊಂಕು ಮಾತಾಡುತಿರುವೆ.
ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ
ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ
ಏನೂ ಕೇಳಿಸದೆಯೇ..
ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ
ನನ್ನ ನಯದ ಲಲ್ಲೆಯಾಟಗಳಿಗೆ,
ಯೌವನಕ್ಕೆ, ನಿತ್ಯ ಬೇಟಗಳಿಗೆ,
ಹೂತೋಟದ ಸದ್ದಿಲ್ಲದ ಆಟಗಳಿಗೆ
ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.
ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,
ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,
ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ.

Friday, February 22, 2008

ನಿನ್ನದೇ ಧ್ಯಾನ... ಕಾಲಹರಣಕ್ಕಲ್ಲ, ಬದುಕುವುದಕ್ಕೆ

ಮಾತಿನ ಮಲ್ಲಿಸದ್ಯ ಬದುಕಿ ಬಿಟ್ಟೆ. ಎದುರಿಗೆ ಇದ್ದಿದ್ದರೆ ಹುರಿದು ಮುಕ್ಕಿ ಬಿಡುತ್ತಿದ್ದೆ ಏನೋ? ಮಹಾ ವಾಸ್ತವವಾದಿಯಂತೆ, ತತ್ವಶಾಸ್ತ್ರ ಪಾಠ ಮಾಡುವವಳಂತೆ ಮಾತಾಡಿದೆಯಲ್ಲಾ... ನನಗೆ ಅರಸಿಕ ಆ ನಮ್ಮ ಕನ್ನಡ ಮೇಷ್ಟ್ರು ನೆನಪಾಗಿದ್ದರು.ಹದವಾದ ಮಳೆಯಲ್ಲಿ ನೆನೆದು.... ಮನೆ ಸೇರಿ ಬಿಸಿ ಬಿಸಿ ಚಹಾ ಕುಡಿಯುವಾಗ ಆಗುವ ಅನುಭವ ಇದೆಯಲ್ಲಾ ಅಂಥದ್ದು... ಅದಕ್ಕಿನ್ನು ಮಿಗಿಲಾದ.. ಹೃದಯವನ್ನು ಆನಂದದಲ್ಲಿ ತೇಲಿಸುವ ಅನುಭವ ಆಗುತ್ತಾ ಇರುತ್ತೆ? ಅದು ಈ ಪ್ರೀತಿಯ ಮಾಯೆ...ಕಲ್ಪನೆಗಳೇ ತನ್ನ ತೆಕ್ಕೆಯಲ್ಲಿ ತೂಗುತ್ತಾ ಇರುತ್ತವೆ. ಈ ಸುಳ್ಳು, ಕಪಟ, ಅಪನಂಬಿಕೆಯ ಜಗತ್ತನ್ನು ಎದುರಿಸುವುದಕ್ಕೆ ಅದೂ ಒಂದು ಅಸ್ತ್ರ ಅಂತಾ ನಾನಂದುಕೊಂಡಿದ್ದೀನಿ ಕಣೆ ಹುಡುಗಿ.ಮಲ್ಲೆ ಹೂ ಘಮ್ಮನ್ನುತ್ತೆ ಅಂತಾ ಎಲ್ಲರಿಗೂ ಗೊತ್ತು. ಒಮ್ಮೆ ಮೂಸಿ ನೋಡು. ಗಂಧ ಮೂಗಿಗೆ ಮುಟ್ಟಿ. ಮೈ ಎಲ್ಲಾ ಝುಮ್ಮೆಂದು. ಪುಳಕಗೊಳ್ಳುತ್ತೆ. ಹಾಗೆ ಅದರ ಜೊತೆಗೆ ತಳಕು ಹಾಕಿಕೊಂಡು ಬಳಿ ಬರುವ ನೆನಪುಗಳೂ ಹುಟ್ಟಿಸುವ ಖುಷಿ ಇದ್ಯಲ್ಲ ಅದನ್ನು ಹೇಗೆ ಸ್ವೀಕರಿಸ್ತೀಯಾ? ಹೇಳು.ಕಾಲಹರಣವಲ್ಲ. ಲಾಭಕ್ಕಾಗಿ ಮಾಡುವ ಕಾಯಕವಲ್ಲ. ಬೇಸರ ಹುಟ್ಟಿಸುವ ಗಳಿಗೆ, ಬದುಕು ಸಾಕು ಎನಿಸಿದಾಗ ಜೀವನೋತ್ಸಾಹಕ್ಕೆ ಒಂದು ಟಾನಿಕ್. ನಿನ್ನ ನೆನಪಿನಲ್ಲಿ ಹುಟ್ಟಿಸುವ ಅಸಂಖ್ಯ ಲಹರಿಗಳು.ಸದ್ಯ ಅವುಗಳನ್ನೆಲ್ಲಾ ಹೇಳುತ್ತಾ ಕೂತಿದ್ದರೆ ನನ್ನ ಪಾಡು? ಬಚಾವಾದೆ. ಆದ್ರೂ ಹುಡುಗಿ ನೀನೆಂಥಾ ಸುಂದರಿ ಗೊತ್ತಾ...? ಬ್ರಹ್ಮನಾಣೆ ನಿನ್ನವಂಥವಳು ಇನ್ನೊಬ್ಬಳಿಲ್ಲ.ನಿನ್ನವನುನಿನ್ನ ಕಣ್ಣಿನ ಆ ಬೆಳಕು ನಮ್ಮೊಲವ ದಾರಿಗೆ ಬೇಕು..ಬಾನಿನ ಅಂಚಿಂದ ಬಂದ ಸುಂದರಿಯೇ,ಮತ್ತೆ ಅದೇ ಹೊಗಳೋ ಮಾತು. ಏನ್ಮಾಡ್ಲಿ ಹೇಳು? ನಿನ್ನನ್ನು ನೋಡುತ್ತಿದ್ದಂತೆ ಕಲ್ಪನೆ ನವಿಲನಷ್ಟೇ ಸಹಜವಾಗಿ ಗರಿಗೆದರಿ ನಿಲ್ಲುತ್ತೆ. ನವಿಲಾದರೂ ಸುಮ್ಮನೆ ಗರಿಗೆದರುವುದಿಲ್ಲ. ಅದಕ್ಕೊಂದು ಕಾಲ, ಕಾರಣ ಇರುತ್ತೆ.ಎಲ್ಲೋ ಯಾವುದೋ ಕ್ಷಣದಲ್ಲಿ ನೀನು ನೆನಪಾದಾಗ ಆ ಸಂದರ್ಭಕ್ಕೆ ನೀನು ಭೂಷಣವಾಗಿ, ನನ್ನ ತಳಮಳಕ್ಕೆ ಉತ್ತರವಾಗಿ, ಬೇಗುದಿಗೆ ಸಾಂತ್ವನ, ಎದೆಯ ಬಿರುಬಿಸಿಲಿಗೆ ತುಂತುರಾಗಿರುತ್ತೀಯಾ. ನೋಡು ಅದಕ್ಕೆ.ಅದಕ್ಕೆ ನೀನೆಂದರೆ ಎಷ್ಟೋ ಪ್ರೀತಿಯೋ, ಅಷ್ಟೇ ಅಭಿಮಾನ.ನನ್ನೊಳಗೆ ಪ್ರೀತಿಯ ಹಾಡು ಹುಟ್ಟಿಸುವ ಹುಡುಗಿಯೇ ಮೊನ್ನೆ ರಾತ್ರಿ ಕತ್ತಲು. ಇದ್ದ ದೀಪಗಳೆಲ್ಲಾ ಮಲಗಿಬಿಟ್ಟಿದ್ದವು- ಬೇಸಿಗೆ ಬಂದರೆ ಇನ್ನೇನಾಗುತ್ತೆ ಹೇಳು- ಆಗ ನೆನಪಾಗಿದ್ದೇ ಆ ರಾತ್ರಿ.ನಿಮ್ಮ ಮನೆ ಅಂಗಳದಲ್ಲಿ ಹುಣ್ಣಿಮೆಯ ಬೆಳಕಿನಲ್ಲಿ ಎಷ್ಟೊಂದು ಮಂದಿ ಹರಟುತ್ತಾ ಕೂತಿದ್ದೆವು. ಫಳ್ಳನೇ ಮಿಂಚೊಂದು ಬಾನುದ್ದಕ್ಕೂ ನಿಂತಾಗ ನಿನ್ನ ಕಣ್ಣಲ್ಲಿ ಹೊಳೆದ ಆ ಬೆಳಕ ಮಾಡಿದ ಮೋಡಿ ಎಂಥದ್ದು ಗೊತ್ತಾ? ಮಿಂಚು ಬಾನಿನದೇ ಇರಬಹುದು. ಹೊಳೆದ ಬೆಳಕು ನಿನ್ನ ಕಣ್ಣಿನದು.ಆಗ ನಿನ್ನ ಮುಖದಲ್ಲಿದ್ದ ಬೆರಗು, ಭಯ. ಆಹಾ ಎಂಥಾ ಸೌಂದರ್ಯ! ಪ್ರತಿ ರಾತ್ರಿ ದೀಪ ಆರಿಸಿದರೆ ಅದೇ ಮುಖ! ಅದೇ ಬೆಳಕು ತುಂಬಿದ ಕಣ್ಣಗಳು ನನ್ನ ಮುಂದೆ ನಿಲ್ಲುತ್ತವೆ. ನಿನ್ನ ಬಟ್ಟಲುಗಣ್ಣುಗಳ ತುಂಬ ತುಂಬಿಕೊಂಡ ಆ ಬೆಳಕು ಹಾಗೇ ಇರಲಿ.ನಮ್ಮೊಲವಿನ ದಾರಿಗೆ ಬೇಕು. ನಮ್ಮ ಬದುಕಿಗೆ ಬೆಳಕಾಗಬೇಕು.
-ನಿನ್ನವನು.

ಸಂಜೆಯ ಕೆಂಪಿನಲ್ಲಿ ನಿನ್ನ ನೆನಪಾಗಲಿಲ್ಲ ಗೆಳತಿ…


ಪ್ರೀತಿಯ ಗೆಳತಿ,ಅಂದು ಸಂಜೆಯ ಸೂರ್ಯ ನಮ್ಮಿಬ್ಬರನ್ನೂ ಅದ್ಯಾವುದೋ ವಾತ್ಸಲ್ಯ ತುಂಬಿದ ಕಣ್ಣುಗಳೊಂದಿಗೆ ನೋಡುತ್ತಾ ಕತ್ತಲೆಯ ಮನೆಗೆ ಹೋಗುತ್ತಲಿದ್ದ. ಆಗ ತಾನೆ ಬಿದ್ದಿದ್ದ ತುಂತುರು ಮಳೆಯಲ್ಲಿ ಇಡೀ ಮೈದಾನದ ಮೈ ನೆಂದು ಅಪೂರ್ವವಾದ ವಾಸನೆ ಹೊಮ್ಮುತ್ತಿತ್ತು. ಆಗ ತತ್ ಕ್ಷಣ ನನಗೆ ನೆನಪಾದದ್ದು ಹಿಂದೊಂದು ದಿನ ಕಾಲೇಜಿನ ಫೀ ಕಟ್ಟುವಾಗ ಕ್ಯೂನಲ್ಲಿ ನಿನ್ನ ಹಿಂದೆ ನಿಂತಾಗ ನನ್ನ ಇಂದ್ರಿಯಗಳನ್ನೆಲ್ಲಾ ಮಂತ್ರ ಮುಗ್ಧವಾಗಿಸಿದ ನಿನ್ನ ಮುಡಿಯಲ್ಲಿನ ಹೂವ ಘಮ.ನಮ್ಮ ನೂರಾರು ಕನಸುಗಳ ಸೌಧವನ್ನು ಕಟ್ಟುವಷ್ಟು ವಿಶಾಲವಾಗಿದ್ದ ಮೈದಾನದ ನಡು ನಡುವೆ ಒಂದಷ್ಟು ಮಂದಿ ಹುಡುಗ ಹುಡುಗಿಯರು ಕೈ ಕೈಹಿಡಿದು ಓಡಾಡುತ್ತಿದ್ದರು. ಕೆಲವರು ಆಡುವ ಆಟದಲ್ಲಿ ಎಲ್ಲವನ್ನೂ ಮರೆತು ತಲ್ಲೀನರಾಗಿದ್ದರು. ಮತ್ತೊಂದಷ್ಟು ಮಂದಿ ಪ್ರಕೃತಿಯ ಆ ರಮಣೀಯ ಸೌಂದರ್ಯವನ್ನು ಎಡಗಾಲಲ್ಲಿ ಒದೆಯುವ ಭಾವದಲ್ಲಿ ಕುಳಿತು ಶುಷ್ಕವಾದ ಆಲ್‍ಜೀಬ್ರಾ, ಕ್ಯಾಲ್ಕುಲಸ್‌ಗಳಲ್ಲಿ ಮುಳುಗಿದ್ದರು. ಪ್ರಕೃತಿ ತಾನಾಗಿ ಕೊಡಮಾಡುವ ಇಂತಹ ಅಸಂಖ್ಯ ಆನಂದದ ಅವಕಾಶಗಳನ್ನು ಮರೆತು ಎಂದೋ ಒಂದು ದಿನ ಸಿಗುವ ಡಿಗ್ರಿಗಾಗಿ ಇವರು ಯಾಕಿಷ್ಟು ಪರದಾಡುತ್ತಾರೋ ಅಂದುಕೊಂಡೆ. ನಿನ್ನ ಪ್ರೀತಿಯು ನನ್ನ ಆವರಿಸಿಕೊಳ್ಳುವ ಮುನ್ನ ನಾನೂ ಹೀಗೇ ಇದ್ದೆನಲ್ಲಾ ಎಂಬುದು ನೆನಪಾಗಿ, ಮನಸ್ಸು ಹಿಂದಕ್ಕೆ ಹಿಂದಕ್ಕೆ ಓಡಲಾರಂಭಿಸಿತು.ಪ್ರೀತಿ, ಹಾಗಂದರೇನು ಅಂತ ಎಲ್ಲರೂ ಕೇಳ್ತಾರೆ. ಅದೇನು ಅಂತ ಗೊತ್ತಿಲ್ಲದೆ ಎಷ್ಟೋ ಮಂದಿ ಪ್ರೀತಿಸ್ತಾರೆ, ದ್ವೇಷಿಸ್ತಾರೆ, ಒಂದಾಗುತ್ತಾರೆ, ಬೇರೆಯಾಗುತ್ತಾರೆ. ಮನುಷ್ಯನ ಆಸೆ, ಮಹತ್ವಾಕಾಂಕ್ಷೆ, ಆದರ್ಶ, ಸದ್ಗುಣ, ಶಿಸ್ತು, ಆಧ್ಯಾತ್ಮದಂತೆಯೇ ಪ್ರೀತಿಯೂ ಕೂಡ. ಪ್ರೀತಿಗೆ ಆ ಸ್ಥಾನ ಸಾಕು. ಪ್ರೀತಿ ಜೀವನದ ಒಂದು ಭಾಗವಾದರೆ ಸಾಕು. ಪ್ರೀತಿಸುವ ಜೀವಗಳೆರಡು ನಂತರ ಎದ್ದು ಮನೆಗೆ ಹೋಗಿ ಉಣ್ಣಬೇಕು, ದುಡಿಯಬೇಕು. ಪ್ರೀತಿ ಅವಾಸ್ತವ. ಪ್ರೀತಿ ಬೇಜವಾಬ್ದಾರಿತನ. ಪ್ರೀತಿ ಕಪಟ, ಇಲ್ಲದ ಭಾವಗಳನ್ನು ಒಬ್ಬನೇ ವ್ಯಕ್ತಿಯ ಮೇಲೆ ಪ್ರದರ್ಶಿಸುವುದು, ದೇಹದ ಬಯಕೆ, ಹಸಿವುಗಳನ್ನೇ ದೊಡ್ಡ ದೊಡ್ಡ ಪದಗಳ ನೆರಳಲ್ಲಿ ನಿಲ್ಲಿಸಿ ಸುಳ್ಳು ಭಾವನೆಯಲ್ಲಿ ಸಮಯ ಕಳೆಯುವ ಕಪಟತೆ- ಹೀಗೇ ಏನೆಲ್ಲಾ ಮಾತನಾಡುತ್ತಿದ್ದೆ ನಾನು. ನಿನ್ನ ಸನ್ನಿಧಾನದ ಅನುಭೂತಿಯಲ್ಲಿ ಮಿಂದ ತಕ್ಷಣ ನನ್ನ ಮಾತುಗಳೆಲ್ಲಾ ಒಣಗಿದ ಹೂವಿನ ಪಕಳೆಗಳಂತೆ ಎಷ್ಟು ಅನಾಯಾಸವಾಗಿ ಉದುರಿಹೋದವಲ್ಲ! ಮಾತುಗಳ ಸದ್ದೆಲ್ಲಾ ಅಡಗಿ ಹೋಗಿ ಮೌನ ನೆಲೆಯಾಯಿತಲ್ಲ? ಜೀವನವೇ ನಶ್ವರ ಎಂದು ಭಾಷಣ ಮಾಡಿದ ನಂತರ ತೆರೆ-ತೆರೆಯಾಗಿ ಬೀಸುವ ತಂಗಾಳಿಗೆ ಮೆಲುವಾಗಿ ತಲೆದೂಗುವ ಉಪದೇಶಿಯಂತೆ ನನ್ನ ಪಾಡಾಯಿತಲ್ಲ? ಜಗತ್ತನ್ನೇ ಸುಟ್ಟು ಬಿಡುವ ಭೀಕರತೆಯಿಂದ ಅರಚಾಡುವ ಮಗು ಮಗುವಿನ ಮಡಿಲನ್ನು ಸೇರಿದ ಕ್ಷಣ ತನ್ನ ಅಸ್ಥಿತ್ವವನ್ನೇ ಮರೆತು ಒಂದಾಗಿಬಿಡುವಂತೆ ನಾನು ನನ್ನನ್ನೇ ಕಳೆದುಕೊಂಡೆ. ಇದೇನಾ ಪ್ರೀತಿ ಅಂದರೆ?ಪತ್ರ ಮುಗಿದಿಲ್ಲ,
**************
ಅರ್ಧಕ್ಕೇ ನಿಲ್ಲಿಸಿದ ಪತ್ರವನ್ನು ಬರೆಯಲು ಕೂತಾಗಲೆಲ್ಲಾ ಮನಸ್ಸು ವಿಪರೀತ ಹೋರಾಟಕ್ಕೆ ಬೀಳುತ್ತೆ. ಸಂಜೆಯ ಮಂದ ಬೆಳಕಿನ ಹಿನ್ನೆಲೆಯಲ್ಲಿ ಸುಂದರವಾಗಿ ಕಾಣುವ ಮರಗಳಲ್ಲಿರುವ ಗೂಡು ಸೇರುವ ಪಕ್ಷಿಗಳ ನಿರಾಳತೆಯಲ್ಲಿ ನಿನ್ನ ನೆನಪಾಯಿತು. ಮುಂಗಾರಿನ ಮೊದಲ ಮಳೆ ಹನಿ ಶಾಲೆ ಬಿಟ್ಟ ನಂತರ ಓಡಿ ಬಂದು ತಾಯಿಯ ತೆಕ್ಕೆಗೆ ಬಂದು ಬೀಳುವ ಮಗುವಿನ ಹಾಗೆ ನೆಲದ ಒಡಲನ್ನು ಸೇರುವಾಗ ನೀನು ಬಳಿಯಿರಬೇಕಿತ್ತು. ಭರಿಸಲಾಗದ ದುಃಖವನ್ನು, ಅವಮಾನಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಜಗತ್ತಿನ ದುಃಖವನ್ನೇ ಮರೆಸುವಂತೆ ನಗಿಸಿದ ಚಾಪ್ಲಿನ್‍ನ ‘ದಿ ಸಿಟಿ ಲೈಟ್ಸ್’ ಸಿನೆಮಾ ನೋಡಿ ಭಾವಿಸುತ್ತಿರುವಾಗ ನೀವು ಪಕ್ಕದಲ್ಲಿರಬೇಕಿತ್ತು - ಹೀಗೆ ಎಂದೂ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೇ ಇಲ್ಲ. ಹೀಗಿದ್ದೂ ನಿನಗೆ ಬರೆಯುವ ಪತ್ರದಲ್ಲಿ ಕಾಡಬೇಡ ಕನಸಲಿ ಬಂದು ಎಂದೇಕೆ ಸುಳ್ಳು ಹೇಳಬೇಕು ಅರ್ಥವಾಗುವುದಿಲ್ಲ. ನಾನದೆಷ್ಟೋ ಪ್ರೇಮ ಪತ್ರಗಳನ್ನು ಓದಿದ್ದೇನೆ, ಪ್ರೇಮ ನಿವೇದನೆಯ ಹಾಡುಗಳನ್ನು ಕೇಳಿದ್ದೇನೆ ಆದರೆ ಎಂದೂ ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು…’ ಅಂತ ನಿನ್ನ ಕೈಹಿಡಿದು ಹೇಳಬೇಕು ಅನ್ನಿಸೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿನಗೊಂದು ಸಲ ಅಪರಾತ್ರಿಯಲ್ಲಿ ಫೋನ್ ಮಾಡಿ ‘ಐ ಲವ್ ಯೂ ಕಣೇ…’ ಅಂತ ಹೇಳೋಕಾಗಿಲ್ಲ. ಇಷ್ಟಕ್ಕೂ ನೀನೇಕೆ ನನಗೆ ಇಷ್ಟವಾಗ್ತಿದ್ದೀಯ ಅನ್ನೋದೇ ನನಗಿನ್ನೂ ಗೊತ್ತಾಗಿಲ್ಲ.
ಮೊನ್ನೆ ಹಾಗೇ ಲಹರಿ ಹಿಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ ಒಂದು ವೇಳೆ ನಾನೊಂದು ಮಳೆಯ ಹನಿಯಾಗಿದ್ದರೆ… ಎಂದು ಯೋಚಿಸುತ್ತಿದ್ದೆ. ದೂರದ ಆಗಸದಿಂದ ಗುರಿಯಿಟ್ಟ ಬಾಣದ ಹಾಗೆ ನೆಲೆದೆಡೆಗೆ ಚಿಮ್ಮುತ್ತಾ ಬರುವಾಗ ಸಿಗುವ ಅನುಭವ ಎಂಥದ್ದು, ನನ್ನ ಮನಸ್ಸಿನಲ್ಲಿ ಆಗ ಏನು ನಡೆಯುತ್ತಿರಬಹುದು, ಬಿಟ್ಟು ಬಂದ ಮುಗಿಲಿನ ನೆನಪು ಕಾಡುತ್ತದೆಯೋ ಇಲ್ಲ ಸೇರಬೇಕಾದ ಭುವಿಯ ಒಲವು ನೆನಪಾಗುತ್ತದೆಯೋ ಇಲ್ಲ, ಸುತ್ತ ನನ್ನ ಹಾಗೆಯೇ ಭುವಿಯೆಡೆಗೆ ಬೀಳುವ ಅನೇಕ ಬಿಂದುಗಳೊಂದಿಗೆ ಕುರಿಯ ಮಂದೆಯಲ್ಲೊಂದರಂತೆ ಕಣ್ಣು ಮುಚ್ಚಿಕೊಂಡು ಧುಮುಕಿಬಿಡುತ್ತಿದ್ದೆನೋ… ಕೈಲಿದ್ದ ಕಾಫಿ ಲೋಟ ಸಣ್ಣಗೆ ಹಗುರಾಗುತ್ತಿತ್ತು. ಓದಲೇಬೇಕು ಅಂತ ಲೈಬ್ರರಿಯಿಂದ ತಂದಿಟ್ಟುಕೊಂಡಿದ್ದ ಪುಸ್ತಕ ಮೇಜಿನ ಮೇಲಿತ್ತು. ನನ್ನಾಣೆಗೂ ಆಗ ನಿನ್ನ ನೆನಪಾಯಿತು ಕಣೆ… ಯಾತಕ್ಕೆ ಅಂತೀಯ, ನಾನು ಮಳೆಯ ಹನಿಯಾದರೆ ನೀನೇನಾಗಬೇಕೆಂದಿರುವೆ ಅಂತ ಕೇಳಬೇಕನ್ನ್ಸಿಸಿತು. ಮರುಕ್ಷಣವೇ ನೀನು ನನ್ನ ಈ ಕಲ್ಪನೆಯನ್ನು ಕೇಳಿ ಬೆರಗಾಗಬಹುದು ಅಂದುಕೊಂಡೆ. ಇಲ್ಲ, ಹಿಂದೊಂದು ಬಾರಿ ನಾನು ಹೀಗೆ ಏನೋ ಕೇಳಿದಾಗ ನೀನು ‘ಅದೆಲ್ಲ ನನಗೆ ಇಷ್ಟವಿಲ್ಲ, ನೀನು ನನ್ನನ್ನು ಎಷ್ಟು ಪ್ರೀತಿಸ್ತಿಯ ಹೇಳು’ ಅಂತ ಗಂಟು ಬಿದ್ದಿದ್ದೆ. ನಾನಾಗ ಸುಳ್ಳುಗಾರನಾಗಲೇ ಬೇಕಾಗಿತ್ತು, ಆದರೂ ಮಾತು ಮರೆಸಿ ಹಾಕಿದ್ದೆ ಅವತ್ತು ನಾನು. ನಿನಗೆ ನನ್ನ ಆಲೋಚನೆಗಳಲ್ಲಿ ಆಸಕ್ತಿಯಿಲ್ಲ ಅನ್ನಿಸಿತು, ಇಂತಹದ್ದನ್ನೆಲ್ಲಾ ಹೇಳಿಕೊಳ್ಳಲು ಆಕೆಯೇ ಸರಿ ಅನ್ನಿಸಿತು.
ಆಕೆಯೋ, ಪಾದರಸವೇ ಮೈತಾಳಿ ಬಂದ ಹುಡುಗಿ. ನಿನ್ನ ಮೆಚ್ಚಿನ ಗೆಳತಿ. ಹಾಗೆ ನೋಡಿದರೆ ಆಕೆ ಕ್ಲಾಸಿನ ಎಲ್ಲರಿಗೂ ಒಳ್ಳೆಯ ಗೆಳತಿಯೇ. ನಿನ್ನಷ್ಟು ಸುಂದರವಾಗಿಲ್ಲ ಆಕೆ. ಒಂದು ಸಲ ನೋಡಿದರೆ ಮತ್ತೆ ತಿರುಗಿ ನೋಡಬೇಕು ಅಂತ ಅನ್ನಿಸದ ರೂಪು. ಆದರೆ ಅದೊಂದೇ ಕಾರಣಕ್ಕೆ ಆಕೆಯನ್ನು ಇಷ್ಟ ಪಡದೆ ಇರಲು ಆಕೆಯೇನು ಷೋಕೇಸ್‍ನಲ್ಲಿಟ್ಟ ಬೊಂಬೆಯೇ? ಆಕೆಗೆ ನಿನಗಿಂತ ಮೃದುವಾದ ಮನಸ್ಸಿದೆ. ಎಲ್ಲರನ್ನೂ ಒಳಕ್ಕೆಳೆದುಕೊಳ್ಳುವಷ್ಟು ವಿಶಾಲವಾದ ಹೃದಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಯಲ್ಲಿ ನಿನಗಿರುವ ಅಂದದ ಬಗೆಗಿನ ಅಹಂಕಾರವಿಲ್ಲ. ಅದಕ್ಕೇ ನಾನು ನನ್ನ ತಿಕ್ಕಲು-ತಿಕ್ಕಲು ಆಲೋಚನೆಗಳನ್ನು, ದಿನಕ್ಕೊಂದರಂತೆ ಹುಟ್ಟುವ ಆದರೆ ಅಷ್ಟೇ ಬೇಗ ಸಾಯುವ ಅಲ್ಪಾಯುಷಿ ಕನಸುಗಳನ್ನು ಹಂಚಿಕೊಳ್ಳಲು ನಾನು ನಿನಗಿಂತ ಹೆಚ್ಚಾಗಿ ಆಕೆಯನ್ನೇ ಬಯಸುವುದು. ಆಕೆಯೂ ಅಷ್ಟೇ ಒಮ್ಮೆಯೂ, ‘ನಿನಗೆಷ್ಟು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ?’ , ‘ನೀನೇಕೆ ರೆಗ್ಯುಲರ್ ಆಗಿ ಶೇವ್ ಮಾಡೊಲ್ಲ?’, ‘ಆ ಸ್ಪೆಕ್ಟ್ಸ್ ತೆಗೆದು ಕಾಂಟ್ಯಾಕ್ಟ್ಸ್ ಹಾಕಿಕೊಳ್ಳಬಾರದಾ’, ‘ರೆಡ್ ಟೀ ಶರ್ಟ್ ನಿನಗೊಪ್ಪಲ್ಲ, ಹಾಕಿಕೊಳ್ಳಬೇಡ’ ಅಂತ ಹೇಳೋದೇ ಇಲ್ಲ. ಆಕೆ ಮನಸ್ಸಿನ ಬೇಗುದಿಗಳನ್ನು, ತನ್ನ ರೂಪಿನ ಬಗೆಗಿನ ಕೀಳರಿಮೆಯನ್ನು, ತನ್ನ ಭವಿಷ್ಯದ ಗುರಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ. ನಾನೂ ಕೂಡ ಅಷ್ಟೇ, ನಿನಗೆ ಹೇಳಿದಂತೆ ಆಕೆಗೆ ‘ಅವನೊಂದಿಗೆ ಜಾಸ್ತಿ ಸಲಿಗೆಯಿಂದಿರಬೇಡ’, ‘ಹೆಚ್ಚು ಹಾಟ್ ಆಗಿ ಡ್ರೆಸ್ ಮಾಡ್ಕೋಬೇಡ’ ಅಂತೆಲ್ಲಾ ಹೇಳೋದಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಡ್ರೆಸ್‌ನ್ನು ‘ಓಹ್, ವಂಡರ್‌‍ಫುಲ್’ ಅಂತ ಹೊಗಳುವುದಿಲ್ಲ. ಆಕೆಯೊಡನಿರುವಾಗ ಒಂದು ಸಲವೂ ನನ್ನ ಕ್ರಾಪನ್ನು ತೀಡಿಕೊಳ್ಳಬೇಕು, ಇನ್‍ಶರ್ಟ್ ಸರಿ ಮಾಡಿಕೊಳ್ಳಬೇಕು ಅಂತ ಅನ್ನಿಸೋದಿಲ್ಲ ಗೊತ್ತಾ… ಆಕೆಯೊಂದಿಗೆ ಹಾಗೇ ಕತ್ತಲಾಗುವವರೆಗೂ ಕೂತಿರಬೇಕು ಅನ್ನಿಸೋದೇ ಇಲ್ಲ. ಆಕೆಯನ್ನು ಹೊಳೆಯ ದಂಡೆಯಲ್ಲಿ ಏಕಾಂತವಾಗಿ ಭೇಟಿಯಾಗಬೇಕು ಅಂತ ನಾನು ಆಲೋಚಿಸುವುದೇ ಇಲ್ಲ. ನನ್ನಾಣೆಗೂ ಹೇಳ್ತೀನಿ ಆಕೆಯನ್ನು ಪ್ರೀತಿಸುತ್ತಿದ್ದೀನಾ ಅಂತ ಒಂದೇ ಒಂದು ಬಾರಿಯೂ ನಾನು ಕೇಳಿಕೊಂಡಿಲ್ಲ.
ನೀನು ಅಸೂಯೆ ಪಡ್ತೀಯ ಅಂತ ಗೊತ್ತು ಆದರೂ ಹೇಳ್ತೀನಿ ಕೇಳು, ನನಗೆ ದಿನವೊಂದರಲ್ಲಿ ನಿನಗಿಂತ ಹೆಚ್ಚು ಬಾರಿ ಅವಳೇ ನೆನಪಾಗ್ತಾಳೆ. ಅವಳಿದ್ದಿದ್ರೆ ಈ ಸಿನೆಮಾ ಬಗ್ಗೆ ಏನಂತ ಮಾತಾಡ್ತಿದ್ದಳು, ಅವಳಿಗೆ ಈ ಪುಸ್ತಕ ಇಷ್ಟವಾಗ್ತಿತ್ತಾ ಅಂತ ಪದೇ ಪದೇ ಕೇಳಿಕೊಳ್ತಿದ್ದೆ. ಹಾಗೆ ಆಕೆಯ ನೆನಪಾದಾಗಲೆಲ್ಲಾ ಮಿಂಚಿನ ಹಿಂದೇ ಬರುವ ಗುಡುಗಿನ ಹಾಗೆ ನಿನ್ನ ನೆನಪಾಗುತ್ತದೆ. ನಿನ್ನ ಕಪಟವಿಲ್ಲದ ನಗೆ ನೆನಪಾಗುತ್ತೆ, ನನಗಾಗಿ ಅಂದು ಮಳೆಯಲ್ಲೇ ನೆನೆದು ಮನೆಯವರೆಗೂ ಬಂದು ಊಟ ಕೊಟ್ಟುಹೋದ ಘಟನೆ ನೆನಪಾಗುತ್ತೆ. ಆದರೆ ಮೊದಲೇ ಹೇಳಿದೆನಲ್ಲಾ, ಇವೆಲ್ಲಾ ಒಂದೇ ಕ್ಷಣ, ಮರುಘಳಿಗೆ ಟಿವಿಯಲ್ಲಿ ನೋಡಿದ ಅಧ್ಭುತವಾದ ಸಿನೆಮಾ, ರಸ್ತೆಯ ತಿರುವಲ್ಲಿ ಸಿಕ್ಕ ಹೈಸ್ಕೂಲ್ ಹುಡುಗಿ, ಆರ್ಕುಟ್ಟಿನಲ್ಲಿ ಅಕಸ್ಮಾತಾಗಿ ಭೇಟಿಯಾದ ಹಳೆಯ ಗೆಳತಿಯ ಚಿತ್ರ ಮನಸ್ಸನ್ನಾವರಿಸುತ್ತೆ. ಹೀಗಿರೋವಾಗ ನಿನ್ನ ನೆನಪು ನನ್ನ ಕಾಡುತಿದೆ ಅಂತ ಹೇಗೆ ಹೇಳಲಿ…
ಪತ್ರದ ಅಂತ್ಯ ಇನ್ನೂ ದೂರವಿದೆ,

ಇದೇನಾ ಸ್ನೇಹ…?

`ನೀನು ಗೆದ್ದಾಗ ಜಗತ್ತೇ ನಿನ್ನ ಬೆನ್ನು ತಟ್ಟುತ್ತಿರುತ್ತದೆ, ಹೆಗಲ ಮೇಲೆ ಹೊತ್ತುಕೊಂಡಿರುತ್ತೆ. ಆದರೆ ನೀನು ಸೋತು, ಜರ್ಜರಿತನಾಗಿದ್ದಾಗ ಆಸರೆಗಾಗಿ ಹೆಗಲು ಕೊಡುವುದಕ್ಕೆ ಉಳಿಯುವುದು ಒಬ್ಬನೇ ಒಬ್ಬ ಅವನೇ ನಿನ್ನ ಗೆಳೆಯ’ ಎಂಬ ಮೆಸೇಜು ನನ್ನ ಮೊಬೈಲ್‍ನ ಬುಟ್ಟಿಗೆ ಬಂದು ಬಿದ್ದಿತ್ತು. ಅದನ್ನು ಓದಿ ಕಣ್ಣು ಹೊರಳಿಸುವಷ್ಟರಲ್ಲಿ ಗೆಳೆತನದ ನವಿರು ನವಿರು ಅನುಭವದ ಅಸಂಖ್ಯ ನೆನಪುಗಳು ಮನಸ್ಸಿನ ಪರದೆಯ ಮೇಲೆ ಮೂಡಿ ನಿಂತವು.ನನ್ನ ಪ್ರಕಾರ ಮನುಷ್ಯ ಸಂಬಂಢಗಳಲ್ಲಿ ಅತ್ಯಂತ ಗಟ್ಟಿಯಾದದ್ದು, ನಿಸ್ಪೃಹವಾದದ್ದು ಸ್ನೇಹ. ತಾಯಿ ಮಗುವಿನ ಸಂಬಂಧದಲ್ಲಿರುವ ಮಮತೆ, ತ್ಯಾಗ, ಅವಲಂಬನೆ, ಗುರು ಶಿಷ್ಯರ ನಡುವಿನ ನಂಟಿನಲ್ಲಿರುವ ಮಾರ್ಗದರ್ಶನ, ಪ್ರೇರಣೆ, ಶರಣಾಗತಿ, ಪ್ರೇಮಿಗಳ ನಡುವಿರುವ ಆರ್ದ್ರತೆ, ಪೊಸೆಸಿವ್‍ನೆಸ್, ನಂಬಿಕೆಗಳೆಲ್ಲವನ್ನೂ ನಾವು ಗೆಳೆತನದ ಬಂಧದಲ್ಲಿ ಕಾಣಬಹುದು. ಅದೂ ರಕ್ತ ಸಂಬಂಧ, ಹಣದ ಲೇವಾದೇವಿ, ದೇಶ ಭಾಷೆಗಳ ಪರಿಧಿಯಿಲ್ಲದೆ.ಎಲ್ಲೋ ಹುಟ್ಟಿ, ತಮ್ಮ- ತಮ್ಮ ಸಂಸ್ಕಾರಗಳಲ್ಲಿ, ಪರಿಸರಗಳಲ್ಲಿ ಬೆಳೆದ ವಿಭಿನ್ನ ಸ್ವಭಾವದ ಇಬ್ಬರು ವ್ಯಕ್ತಿಗಳು ಹಾಗೆ ಯಾವ ಅಪೇಕ್ಷೆಯೂ ಇಲ್ಲದೆ ಒಬ್ಬರಿಗೊಬ್ಬರು ಬಂಧಿಸಲ್ಪಡುವ ಬಗೆಯನ್ನು ನೆನೆದು ನಾನು ಅದೆಷ್ಟೋ ಬಾರಿ ವಿಸ್ಮಯಗೊಂಡಿದ್ದೇನೆ. ಯಾವುದೇ ಕಲ್ಮಷಗಳಿಲ್ಲದ ಗೆಳೆತನವನ್ನು ನಾವು ಕಾಣಬೇಕಾದರೆ ಚಿಕ್ಕ ಮಕ್ಕಳನ್ನು ಗಮನಿಸಬೇಕು. ಮೇಲು ಕೀಳುಗಳೆಂಬ ಜಾತಿಯ ಚೌಕಟ್ಟಿಲ್ಲದೆ, ಬಡವ ಧನಿಕನೆಂಬ ಬೇಧಗಳನ್ನು ಮನಸ್ಸಿನಲ್ಲಿ ತಾರದೆ, ಹೆಣ್ಣು ಗಂಡು ಎಂಬ ಲಜ್ಜೆಯಿಲ್ಲದೆ ಮುಕ್ತವಾಗಿ ಯಾವ ಸ್ವಾರ್ಥವೂ ಇಲ್ಲದೆ ನಲಿಯುವ ಮಕ್ಕಳ ಸನ್ನಿಧಾನದಲ್ಲಿ ನಮಗೆ ಗೆಳೆತನದ ನಿಜವಾದ ಚಿತ್ರಣ ಸಿಕ್ಕೀತು.ಸ್ನೇಹವೆಂಬುದೂ ಪ್ರೀತಿಯ ಹಾಗೆ ಅಮೂರ್ತವಾದದ್ದು. ಅದಕ್ಕೆ ಗುಣ ಲಕ್ಷಣಗಳನ್ನು ಪಟ್ಟಿ ಮಾಡುತ್ತಾ ಕೂರುವುದು ಅಸಾಧ್ಯ. ಗೆಳೆತನದ ಯಾವ ಗುಣಲಕ್ಷಣವನ್ನೂ ಹೊಂದಿರದ ಸಂಬಂಧ ಕೂಡ ನಮ್ಮನ್ನು ತೀರಾ ಆಪ್ತವಾಗಿ ಆವರಿಸಬಹುದು ಇಲ್ಲವೇ ಶ್ರೇಷ್ಠವಾದ ಗೆಳೆತನ ಎಂದು ಗುರುತಿಸಿದ ಸ್ನೇಹದಲ್ಲಿ ಯಾವಾಗ ಬೇಕಾದರೂ ಬಿರುಕುಂಟಾಗಬಹುದು. ಯಾವುದು ಗೆಳೆತನ, ಯಾವುದು ಗೆಳೆತನವಲ್ಲ, ಯಾರು ನಿಜವಾದ ಗೆಳೆಯ, ಯಾರು ಸಮಯ ಸಾಧಕ ಅಂತ ವರ್ಗೀಕರಿಸುವುದು ಅಸಾಧ್ಯ. ಒಂದೊಮ್ಮೆ ಕೇವಲ ಆವಶ್ಯಕತೆಗಳಿಗಾಗಿ ಸ್ಥಾಪಿತವಾದ ಸಂಬಂಧ ಮುಂದೊಂದು ದಿನ ಬಿಟ್ಟಿರಲಾರದ ಬಂಧವಾಗಿ ರೂಪುಗೊಳ್ಳಬಹುದು. ಎಂದೋ ಕ್ಲಾಸಿನಲ್ಲಿ ನೋಟ್ಸ್ ಕೇಳಿದ ಸಹಪಾಠಿ ಜೀವ ಗೆಳೆಯನಾಗಿ ಬೆಳೆಯಬಹುದು. ಚಿಕ್ಕಂದಿನಿಂದ ಇದ್ದ ಸ್ನೇಹದ ಬಂಧ ಬೆಳೆಬೆಳೆಯುತ್ತ ಸಡಿಲವಾಗಿ ಸಂಬಂಧ ಮುರುಟಿಹೋಗಿಬಿಡಬಹುದು. ಒಟ್ಟಿನಲ್ಲಿ ಸ್ನೇಹವೆಂಬುದು ಒಂದು ಅಮೂರ್ತ ಪ್ರಕ್ರಿಯೆ. ಅದರ ಹುಟ್ಟು, ಅಂತ್ಯಗಳು ಗುರುತಿಸಿ ನೋಡಲಾಗದಷ್ಟು ಸಂಕೀರ್ಣ.ನಾನು ಬೆಳೆದ ಮನೆಯ ಪರಿಸರದಿಂದಲೋ ಇಲ್ಲವೇ ನನ್ನ ಒಳಮುಚ್ಚುಗ ಸ್ವಭಾವದಿಂದಲೋ ನನಗೆ ಚಿಕ್ಕಂದಿನಲ್ಲಿ ಅಷ್ಟಾಗಿ ಗೆಳೆಯರ ಗುಂಪು ಇರಲಿಲ್ಲ.ಆದರೂ ಮನೆಯ ಅಕ್ಕಪಕ್ಕದ ಹುಡುಗ-ಹುಡುಗಿಯರೊಂದಿಗೆ ಕೂಡಿ ಆಡಿದ ಆಟಗಳ, ನಲಿದ ಕ್ಷಣಗಳ ನೆನಪು ಮಾಸಿಲ್ಲ. ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಒಂದು ಸ್ಲಂ ಇದ್ದದ್ದರಿಂದ ಮನೆಯಿಂದ ಹೊರಗೆ ಹೋಗಿ ಆಡುವುದು ನಮಗೆ ನಿಷಿದ್ಧವಾಗಿತ್ತು. ಹಾಗಾಗಿ ಮನೆಯ ಸುತ್ತ ಮುತ್ತ ಸಿಗುತ್ತಿದ್ದ ನಮ್ಮದೇ ವಯಸ್ಸಿನ ಗೆಳೆಯ-ಗೆಳತಿಯರೇ ನಮ್ಮ ಆಸ್ತಿ. ಆಟವಾಡಲು ನಮ್ಮ ಗುಂಪು ನೆರೆದಾಗಲೆಲ್ಲಾ ಯಾವ ಆಟ ಆಡುವುದು ಎಂಬ ಸಮಸ್ಯೆ ಎದ್ದು ನಿಲ್ಲುತ್ತಿತ್ತು. ನಮ್ಮ ಗುಂಪಿನಲ್ಲಿ ಒಂದಿಬ್ಬರು ಉಡುಗಿಯರಿದ್ದರೆ ಅಡುಗೆ ಆಟ, ಟೀಚರ್ ಆಟ ಅಂತ ತೀರ್ಮಾನವಾಗುತ್ತತ್ತು. ಇಲ್ಲದಿದ್ದರೆ ಐಸ್‍ಪೈಸ್, ಬುಗುರಿ, ಗೋಲಿ ಆಡುತ್ತಿದ್ದೆವು. ಚಿನ್ನಿ ದಾಂಡು ಸಭ್ಯರ ಆಟವಲ್ಲ ಎಂದು ನಂಬಿದ್ದರಿಂದ ಅದನ್ನು ಆಡುತ್ತಿರಲಿಲ್ಲ. ರಸ್ತೆಯಲ್ಲಿ ಕೆಲವು ಸ್ಲಮ್ಮಿನಹುಡುಗರು ಓಡಾಡಿದರೆ ಸಾಕು ನಾವು ಆಟ ನಿಲ್ಲಿಸಿ ಮನೆಯೊಳಕ್ಕೆ ಬಂದು ಬಿಡುತ್ತಿದ್ದೆವು.ಅವರು ನಿಮ್ಮ ಅಂಗಿ-ಚಡ್ಡಿ, ಬುಗುರಿಗಳನ್ನು ಕಿತ್ತುಕೊಂಡು ಹೋಗುತ್ತಾರೆ ಅಂತ ಮನೆಯಲ್ಲಿ ಹಿರಿಯರು ಸುಮ್-ಸುಮ್ಮನೇ ಹೆದರಿಸಿದ್ದರಿಂದ ಆ ಎಚ್ಚರಿಕೆ. ಆ ಹುಡುಗರು ಗುಂಪಾಗಿ ರಸ್ತೆಯಲ್ಲಿ ನಡೆದು ಬರುತ್ತಿದ್ದರಂತೂ ಮನ್ಎಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಅವರ ಗುಂಪು ದೂರ ಹೋಗುವವರೆಗೂ ಕಿಟಕಿಯಲ್ಲಿ ಇಣಕಿ ನೋಡುತ್ತಾ ಕುಳಿತಿರುತ್ತಿದ್ದೆವು.ದೀಪಾವಳಿಯ ಸಂಭ್ರಮದಲ್ಲಿ ಒಂದು ವಿಚಿತ್ರವಾದ ಸಂಗತಿ ನಡೆಯುತ್ತಿತ್ತು. ಯಾರ ಮನೆಯಲ್ಲ್ಲಿ ಹೆಚ್ಚು ಪಟಾಕಿ ತಂದಿರುತ್ತಾರೋ ಅವನಿಗೆ ಹೆಚ್ಚೆಚ್ಚು ಗೆಳೆಯರು ಹುಟ್ಟಿಕೊಳ್ಳುತ್ತಿದ್ದರು. ಆತ ಎಡಗೈಲಿ ಊದಿನ ಕಡ್ಡಿ ಬಲಗೈಲಿ ಪಟಾಕಿಯ ಡಬ್ಬಿ ಹಿಡಿದು ಹೊರಬಂದರೆ, ಅವನ ಪಟಾಕಿಯ ಮದ್ದ್ ಕಿತ್ತುಕೊಡುವುದಕ್ಕೆ, ಎರಡೆರಡನ್ನು ಜೋಡಿ ಮಾಡಿ ಹಚ್ಚು, ಆ ನಾಯಿ ಕಾಲ ಹತ್ತಿರ ಹಚ್ಚು, ಈ ಡಬ್ಬಿಯೊಳಗೆ ಇಟ್ಟು ಹಚ್ಚು ಅಂತ ಉಪದೇಶ ಕೊಡುತ್ತಾ ಅಲೆಯುವವರ ಗುಂಪು ನೆರೆದುಬಿಡುತ್ತಿತ್ತು. ಮಧ್ಯೆ ಮಧ್ಯೆ ಅವರು ಅವನ ಪಟಾಕಿಯ ಪಟ್ಟಣದಿಂದ ಒಂದುರೆಡು ಪಟಾಕಿ ತೆಗೆದು ಜೇಬಿಗೆ ಹಾಕಿಕೊಂಡು ಬಿಡುತ್ತಿದ್ದರು. ನನಗೆ ಇಂತಹ ‘ಸಮಯ ಸಾಧಕ’ ಗೆಳೆಯರನ್ನುಕಂಡರೆ ಆಗುತ್ತಿರಲಿಲ್ಲ ಆದರೂ ಹೆಚ್ಚೆಚ್ಚು ಮಂದಿ ನನ್ನ ನೆರೆದಷ್ಟೂ ನನ್ನ ಅಹಂ ಉಬ್ಬಿ ಉಬ್ಬಿ ಆಕಾಶದೆತ್ತರಕ್ಕೆ ವ್ಯಾಪಿಸುತ್ತಿತ್ತು.ಹೀಗೆ ನಾವು ದೀಪಾವಳಿಯ ದಿನ ಹೊಚ್ಚ ಹೊಸ ಬಟ್ಟೆಯನ್ನು ತೊಟ್ಟುಕೊಂಡು ಪಟಾಕಿ ಹಚ್ಚಲು ಅಣಿಯಾಗುತ್ತಿದ್ದರೆ, ಅತ್ತ, ಹಿಂದಣ ರಸ್ತೆಯ ಸ್ಲಮ್ಮಿನ ಮಕ್ಕಳು ಮೊದಲ ಪಟಾಕಿಯ ಸದ್ದಿಗೆ ಕಾದು ಕುಳಿತಿದ್ದವರಂತೆ ಚಂಗನೆ ಹಾರಿ ನಮ್ಮ ಮನೆಯ ಬೀದಿಗೆ ಬಂದು ಬಿಡುತ್ತಿದ್ದರು. ಅವರೇ ನಮ್ಮ ಬಳಿ ಬರಲು ಹೆದರುತ್ತಿದ್ದರೋ ಅಥವಾ ನಾವೇ ಅವರನ್ನು ಬಳಿಗೆ ಬರಲು ಬಿಡುತ್ತಿರಲಿಲ್ಲವೋ, ಒಟ್ಟಿನಲ್ಲಿ ಅವರು ಬೀದಿಯಲ್ಲಿ ನಮ್ಮ ಮನೆಗಳಿಂದ ಮಾರು ದೂರದಲ್ಲಿ ನಿಂತು ನಾವು ಪಟಾಕಿ ಹಚ್ಚುವುದನ್ನು ಕುತೂಹಲದ ಕಣ್ಣುಗಳಿಂದ ಕುಳಿತು ನೋಡುತ್ತಿದ್ದರು. ನಾವು ಪಟಾಕಿಯ ಮದ್ದಿಗೆ ಬೆಂಕಿ ಕೊಡುವಾಗ ಅವರೇ ಬೆಂಕಿಕೊಡುವವರಂತೆ ರೋಮಾಂಚಿತರಾಗುತ್ತಿದ್ದರು, ಪಟಾಕಿಯ ಮದ್ದಿಗೆ ಅಂಟಿಕೊಂಡ ಕಿಚ್ಚು ಸಾಲಲ್ಲಿ ಸಾಗುವ ಇರುವೆಯಂತೆ ಪಟಾಕಿಯ ಹೊಟ್ಟೆಯ ಬಳಿಗೆ ಸಾಗುತ್ತಿದ್ದಷ್ಟು ಹೊತ್ತು ಅವರ ಕಣ್ಣುಗಳಿಂದ ಮುಂದೇನಾಗುವುದೋ ಎಂಬ ಕಾತರ ತುಳುಕುತ್ತಿರುತ್ತಿತ್ತು. ಒಂದು ಸಲ ಕಿಚ್ಚು ಪಟಾಕಿಯ ಹೊಟ್ಟೆಗೆ ನುಗ್ಗಿ ಅದು ಎಣ್ಣೆಯಲ್ಲಿ ಬಿದ್ದ ಪೂರಿಯಂತೆ ಮೈ ಉಬ್ಬಿಸಿಕೊಂಳ್ಳುತ್ತಾ ಹೋದಂತೆಲ್ಲಾ ಅವರ ಕಣ್ಣುಗಳಲ್ಲಿನ ಕಾತರ ಹೆಚ್ಚುತ್ತಿರುತ್ತಿತ್ತು. ಒಮ್ಮೆಗೇ ಅದು ‘ಢಂ’ ಎಂದು ಸಿಡಿದು ಚೂರಾದರೆ ಅವರ ಕಣ್ಣುಗಳಲ್ಲಿ ಸಂಭ್ರಮ ಕುಣಿಯುತ್ತಿರುತ್ತಿತ್ತು. ಅದು ಸಿಡಿಯದೆ ಟುಸ್ಸೆಂದರೆ ನಮ್ಮ ಕಡೆಗೊಮ್ಮೆ ನೋಡಿ ಮುಸಿ-ಮುಸಿ ನಗುತ್ತಿದ್ದರು. ನಾವು ಅತ್ತಿತ್ತ ನೋಡುವಷ್ಟರಲ್ಲಿ ಓಡಿ ಹೋಗಿ ಬಾಗಿ ಸಿಡಿಯದ ಪಟಾಕಿಯನ್ನು ಜೇಬಲ್ಲಿ ಹಾಕಿಕೊಂಡು ಓಡಿಬಿಡುತ್ತಿದ್ದರು. ಅವರು ಹಾಗೆ ಅದನ್ನು ‘ಕದ್ದೊ’ಯ್ಯುವುದನ್ನು ಕಂಡು ನಮ್ಮ ಮೈಯುರಿಯುತ್ತಿತ್ತು. ಓಡಿ ಹಿಡಿಯೋಣ ಅಂದರೆ ನಮಗೆ ಅವರ ಸಮನಾದ ವೇಗದಲ್ಲಿ ಓಡುವ ನಮ್ಮ ಸಾಮರ್ಥ್ಯದ ಬಗ್ಗೆಯೇ ವಿಶ್ವಾಸವಿರಲಿಲ್ಲ. ಮೇಲಾಗಿ ಅವರು ತಿರುಗಿ ನಿಂತುಬಿಟ್ಟರೆ ಎಂಬ ಭಯ ಬೇರೆ. ಆಗ ನನ್ನ ಸುತ್ತ ಇರುತ್ತಿದ್ದ ಗೆಳೆಯರು, ‘ಮರ್ಯಾದೆ ಇಲ್ಲದೋರು’ ಎಂದು ತಮ್ಮ ಅಸಮಧಾನ ಸೂಚಿಸುತ್ತಿದ್ದರು. ಒಮ್ಮೆ ಹೀಗೆ ಒಬ್ಬ ನನ್ನ ವಯಸ್ಸಿನವನೇ ಆದ ಹುಡುಗ ಸಿಡಿಯದ ಪಟಾಕಿಯೊಂದನ್ನು ಚಡ್ಡಿಯ ಜೇಬಲ್ಲಿ ಹಾಕಿಕೊಂಡು ಓಡುವಾಗ ಅದು ಸಿಡಿದು ಬಿಟ್ಟಿತು. ಆತನಿಗಾದ ಗಾಬರಿ, ಭಯ, ದುಃಖವನ್ನು ಕಂಡು ನನ್ನನ್ನೂ ಸೇರಿದಂತೆ ನನ್ನ ಗೆಳೆಯರಿಗೆ ತಡೆಯಲಾರದ ನಗು ಬಂದಿತ್ತು. ‘ತಕ್ಕ ಶಾಸ್ತಿಯಾಯ್ತು’ ಅಂತಲೇ ನಮಗೆಲ್ಲಾ ಅನ್ನಿಸಿತು. ಅವನ ಸುಟ್ಟು - ಹರಿದ ಚಡ್ಡಿ ನಮಗೆ ಅಪಹಾಸ್ಯದ ವಸ್ತುವಾಯಿತೇ ವಿನಃ ಅನುಕಂಪಕ್ಕೆ ಆಸ್ಪದವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ನನ್ನಪ್ಪ, ನಮ್ಮನ್ನು ಗದರಿಸಲಿಲ್ಲ ಬದಲಾಗಿ ಆ ಹುಡುಗನನ್ನು ಬಳಿಗೆ ಕರೆದರು. ಆತ ಏನಾಗುವುದೋ ಎಂಬ ಆತಂಕದಲ್ಲಿಯೇ ಅಪ್ಪನ ಬಳಿಗೆ ಹೋದ. ಅಪ್ಪ ಅವನ ಸುಟ್ಟ ತೊಡೆಗೆ ಬರ್ನಾಲ್ ಹಚ್ಚಿ, ನನ್ನ ಪಟಾಕಿಯ ಡಬ್ಬಿಯಿಂದ ಕೊಂಚ ಪಟಾಕಿ ತೆಗೆದು ಆತನ ಕೈಗಿಟ್ಟು ಕಳುಹಿಸಿದರು. ನನಗೆ ಅಪ್ಪನ ವರ್ತನೆಯನ್ನು ಕಂದು ಮೈಯುರಿದುಹೋಯ್ತು. ಯಾವನೋ ಬೀದಿ ದಾಸಯ್ಯನಿಗೆ ನನ್ನ ಪಟಾಕಿ ಕೊಟ್ಟರಲ್ಲಾ ಅಂತ ಕೋಪ ಬಂದಿತು. ಆದರೂ ಏನೂ ಮಾಡಲಾಗದೆ ಸುಮ್ಮನೆ ನಿಂತಿದ್ದೆ.ಅಪ್ಪನಿಂದ ಪಟಾಕಿ ಪಡೆದ ಆ ಹುಡುಗನನ್ನು ನಾನು ಅಸೂಯೆ, ಅಸಹ್ಯ ಬೆರೆತ ಕಣ್ಣುಗಳಿಂದಲೇ ನೋಡುತ್ತಿದ್ದೆ. ನನ್ನ ಸುತ್ತ ಇದ್ದ ಗೆಳೆರಲ್ಲಂತೂ ಅಸೂಯೆ ನೂರ್ಮಡಿಯಾಗಿತ್ತು. ಆ ಪಟಾಕಿಯನ್ನು ನಮಗಾದರೂ ಕೊಟ್ಟಿದ್ದರೆ ಒಂದು ಅರ್ಥವಿರುತ್ತಿತ್ತು ಎನ್ನುವ ವಾದ ಅವರ ಮುಖಭಾವದಲ್ಲಿತ್ತು. ಆ ಹುಡುಗ ಬಳಿಯಲ್ಲೇ ಇದ್ದ ಊದಿನ ಬತ್ತಿ ತೆಗೆದುಕೊಂಡು ಒಂದೆರೆಡು ಪಟಾಕಿಯನ್ನು ಹಚ್ಚಿ ಸಂಭ್ರಮಿಸಿದ. ಕೊನೆಗುಳಿದ ಅರ್ಧದಷ್ಟು ಪಟಾಕಿಯನ್ನು ಎರಡು ಭಾಗ ಮಾಡಿ ಒಂದನ್ನು ತನ್ನ ಚಡ್ಡಿಯ ಇನ್ನೊಂದು ಜೇಬಿನಲ್ಲಿ ತುರುಕಿಕೊಂಡು ಮತ್ತೊಂದು ಭಾಗವನ್ನು ಹಾಗೇ ಕೈಲಿ ಹಿಡಿದುಕೊಂಡ. ಅದನ್ನೇನು ಮಾಡುತ್ತಾನೋ ಅಂತ ನಾವೆಲ್ಲಾ ಕುತೂಹಲದಿಂದ ಎದುರು ನೋಡುತ್ತಿದ್ದೆವು. ಆ ಪಟಾಕಿಗಳನ್ನು ಕೈಲಿ ಹಿಡಿದುಕೊಂಡು ಆತ ನೇರವಾಗಿ ನನ್ನ ದಿಕ್ಕಿನಲ್ಲೇ ಬರಲಾರಂಭಿಸಿದ. ಏನು ಮಾಡುವನೋ ಎನ್ನುವ ಕಾತರದಿಂದ ನನ್ನ ಎದೆಬಡಿತ ಹೆಚ್ಚಾಗುತ್ತಿತ್ತು. ಆತ ನನ್ನ ಬಳಿ ಬಂದವನೇ ಆ ಪಟಾಕಿಗಳನ್ನು ನನ್ನ ಕೈಗೆ ಕೊಟ್ಟು ತನ್ನ ಮಸಿಯಾದ ಹಲ್ಲುಗಳನ್ನು ತೋರಿ ನಗುತ್ತಾ ‘ಥ್ಯಾಂಕ್ಸ್’ ಅಂತ ಹೇಳಿ ಓಡಿ ಹೋಗಿ ತನ್ನ ಗೆಳೆಯರನ್ನು ಸೇರಿಕೊಂಡ. ನಾನು ಮೂಖ ವಿಸ್ಮಿತನಾಗಿ ನೋಡುತ್ತಲೇ ಇದ್ದೆ. ತನ್ನ ಗೆಳೆಯರ ಗುಂಪನ್ನು ಸೇರಿದ ಆತ ತನ್ನ ಜೇಬಲ್ಲಿದ್ದ ಪಟಾಕಿಗಳನ್ನು ತೆಗೆದು ಅವನ್ನೆಲ್ಲಾ ತನ್ನ ಗೆಳೆಯರಿಗೆ ಹಂಚಿಬಿಟ್ಟ. ನಾನು ನೋಡುತ್ತಲೇ ಇದ್ದೆ.ನನ್ನ ಗೆಳೆಯರಲ್ಲೊಬ್ಬ, ‘ನೋಡು ಅವನಿಗೆಷ್ಟು ಧಿಮಾಕು, ನಿನ್ನ ಪಟಾಕಿಯನ್ನು ನಿನಗೇ ಕೊಟ್ಟು ದೊಡ್ಡ ಉಪಕಾರ ಮಾಡಿದೋನಂಗೆ ಹೋಗ್ತಾ ಇದ್ದಾನೆ’ ಅಂದ.ಇನ್ನೊಬ್ಬ, ‘ಅಂತವರಿಗೆ ನಾಚಿಕೆ ಇರೊಲ್ಲ. ಅದ್ಕೆ ಅವರ್ಜೊತೆ ಸೇರ್ಬೇಡ ಅಂತ ನಮ್ಮ ಹೇಳೋದು’ ಅಂದ. ಅವರ ಮಾತುಗಳು ನನ್ನ ಕಿವಿಯೊಳಕ್ಕೆ ಇಳಿಯುತ್ತಲೇ ಇರಲಿಲ್ಲ. ನನ್ನ ಕಣ್ಣು-ಮನಸ್ಸಿನ ತುಂಬ ಆ ಹುಡುಗನ ಮುಖದ ಮೇಲಿದ್ದ ಸಂಭ್ರಮ, ವಿನಂತಿ, ಕೃತಜ್ಞತೆ, ನಾನು ನಿನ್ನವನು ಎಂಬ ಆಸರೆಯೇ ಕವಿದಿತ್ತು.ಗೆಳೆತನ ಎಂದರೇನೆಂಬ ಅನುಭವ ನನಗಾಗಿತ್ತು.
.

Saturday, February 16, 2008

ನಾಗು ಅವರ ಹೃದಯದ ಹಾಡು




ಯಾಕೋ ಬೇಸರವೆನಿಸಿದೆ……. ನನಗಲ್ಲ
ನಿನ್ನ ಹೆಸರ ಕೂಗಿ ಕರೆಯದನನ್ನ ಬಾಯಿಗೆ…
ನೀನಾಡೋ ಮಾತುಗಳ ಕೇಳದನನ್ನ ಕಿವಿಗಳಿಗೆ…
ನಿನ್ನ ಮುಂಗುರುಳ ನೇವರಿಸದನನ್ನ ಬೆರೆಳುಗಳಿಗೆ…
ನಿನ್ನನ್ನು ತೋಳುಗಳಲಿ ಸೇರಿಸಿಕೊಳ್ಳದಈ ತಬ್ಬಲಿ ಕೈಗಳಿಗೆ…
ಎಲ್ಲಕ್ಕಿಂತ ಮಿಗಿಲಾಗಿನಿನ್ನನ್ನು ಕನಸಲ್ಲೂ ಕಾಣದಪಾಪಿ ಕಣ್ಣುಗಳಿಗೆ…
ಅರ್ಥವಾಗದೆ ನಿನಗೆ… ನಿನ್ನ ಮನಸಿಗೆ…ಹೃದಯದ ನೋವು….

----------------------------------------------------------------------

ರೆಪ್ಪೆಗಳ ತಪ್ಪಿಲ್ಲ….

ರೆಪ್ಪೆಗಳ ತೆರೆದೊಡನೆ
ಕಣ್ಣುಗಳುಅವಳನ್ನೇ ಹುಡುಕುತವೆ….….
ಮುಚ್ಚಿದರೂ ಭಾರವೆ
ಅಲ್ಲೂ ಅವಳ ಕನಸನ್ನೇ
ಕಂಡಿವೆಕಂಗಳನ್ನು ಕಿತ್ತಿಡಲೇ…
ಅಷ್ಟೊಂದು ಕೋಪವಿಲ್ಲ!!
ಕಾಣಲಿ ಅವಳ ನಲಿವನ್ನಾದರೂ
ನನ್ನಲ್ಲಿ ನಲಿವಿನ ಸುಳಿವೆ ಇಲ್ಲ…. ~ನಾಗು….
-----------------------------------------------------------------

ಗೆಳೆಯಾ ನಾಗುರವರ್ ಹೃದಯಾಲದ ಮಾತುಗಳು ..


ಹೃದಯದ ಬಡಿತ…
ಮನದ ಮಿಡಿತ…
ಪ್ರತಿ ಕ್ಷಣವೂ
ನಿನ್ನ ಕಾಣುವ ತುಡಿತ…
ಪ್ರಿಯಾ… ನನ್ನೆ ನಾ ಮರೆತೆ
ನಿನ್ನ ನೆನೆ ನೆನೆಯುತಾ….
~ನಾಗು
______________________________________________________--

ಗೊತ್ತಿಲ್ಲದ ಗೆಳೆಯ ಗೆಳತಿಯರೆ….
ನಂಗೊತ್ತು…. ನಿಮಗೂ ಗೊತ್ತು: “ಮನಸು - ಕನಸು” ಇಲ್ದೇ ನೀವು, ನಾನು, ಯಾರೂ ಇಲ್ಲ, ಮತ್ತು ಇರಕ್ಕಾಗಲ್ಲ.!
ಏನಂತೀರಿ….?
ನಿಮ್ಮ ಮನಸಿಗೆ ಇಷ್ಟ ಆಗೋ ಎಷ್ಟೋ ವಿಷಯಗಳು ಈ ಭೂಮಿ ಮೆಲೆ ಇವೆ , ಇರಲಿ.
ಆ ಎಷ್ಟೋ ವಿಷಯಗಳಲ್ಲಿ ಇದು ಅಂದ್ರೆ ಈ Blog ಕೂಡ ಇರಲಿ, ಇದೊಂದು ಸವಿನಯ ಕೋರಿಕೆ.
ನಿಮಗೆ ಮನಸಿದೆ ಅಂದ ಮೇಲೆ ಕನಸು ಇರುತ್ತೆ ಅಲ್ವಾ….
ಆ ಕನಸಲ್ಲಿ ನಿಮ್ಮ ಹುಡುಗಿನೋ/ಹುಡುಗಾನೋ…. ಬರುತ್ತಾರೆ, ಬಂದು ಕಾಟ ಕೊಡ್ತಾರೆ ತಾನೆ, ಕೊಡ್ಲೇ ಬೇಕು ಬಿಡಿ.
ಕೊಡ್ಲಿಲ್ಲ ಅಂದ್ರೆ ಅವರ ಮನಸಿಗೆ ಸಮಾಧಾನ ಎಲ್ಲಿಂದ ಸಿಗ್ಬೇಕು….!!!?
ಆ ರೀತಿ ಕಾಟ ಕೊಟ್ಟವರ ಬಗ್ಗೆ, ಅಥವಾ ಆ ಕಾಟದ ಬಗ್ಗೆ ಕಾಟಾಚಾರವಾಗಿ ಬರೆಯದೆ ಮನಸಿಟ್ಟು ಬರೆದು ಈ Blogಗೆ Post ಮಾಡಬಹುದು….ಮಾಡಿ….
ನನಗೆ ಬೇಜಾನ್ ಬೆಡಗಿಯರು ಕಾಡ್ತಾರೆ…. ಯಾವ್ ಪಾಟಿ ಕಾಡ್ತಾರೆ ಅಂದ್ರೆ ಅವರ ಕಾಟ ತಾಳಲಾರದೆ ಈ Blog ಎಂಬ ಪುಟ್ಟ ಗೂಡಿಗೆ ಬಂದು ಸೇರಿಕೊಂಡು ಬಿಟ್ಟಿದಿನಿ…
ನೀವು ನನ್ನ ಹಾಗೆನೆ ಶ್ಯಾನೆ ಕಷ್ಟಪಟ್ಟಿದ್ರೆ ಮುಲಾಜಿಲ್ಲದೆ ಈ ಮನಸಿನ ಗೂಡಿಗೆ ಒಂದು ಮುದ್ದಿನ “ಗುಬ್ಬಿ” ಆಗಿಬಿಡಿ….
ಈ ಗೂಡು ನಿಮಗಾಗಿ ಸದಾ ತೆರೆದ ಬಾಗಿಲನಲ್ಲಿ ಕಾಯುತ್ತಿರುತ್ತದೆ….
—–ನಾಗ….{ಒಳ್ಳೆ ಹುಡುಗ….. ನಿಮ್ಮ ತರಾನೆ…!!!!}

ತಪ್ಪು ಮಾಡಿದೆ… ರೆಪ್ಪೆ ತೋಯ್ದಿದೆ…!!


ತಪ್ಪೇ ಮಾಡದೇ ಹೋದರೇ…ರೆಪ್ಪೆ ತೋಯದೇ ಹೋದರೆ..ಪ್ರೀತಿ ಎಂಬುದು ಎಲ್ಲಿದೆ…?..…….ಪ್ರಿಯಾ… ಹೇಗಿವೇ ಈ ಸಾಲುಗಳು..? ನಿಜಕ್ಕೂ ನಾ ಬರೆದದ್ದಲ್ಲ.. ಕವಿ..ಕಲ್ಯಾಣ್ ಬರೆದದ್ದು!!ಹೇಗಿವೇ..? ನಿಂಗೇನಾದ್ರೂ ಅರ್ಥ ಆಯ್ತಾ? ಅರ್ಥ ಆದ್ರೆ ಸಂತೋಷ.. ಆಗಲಿಲ್ಲ ಅಂದ್ರೂ.. ಸಂತೋಷಾನೇ..! ಯಾಕ್‍ಹೀಗೆ ಅಂತೀಯಾ… ನಾ ಅರ್ಥ ಮಾಡಿಸಬಹುದಲ್ಲ ಅಂಥ!! ಇರಲಿ ಬಿಡು..ಮತ್ತೆ ಯಾಕ್ ಪತ್ರ ಬರೀತಾ ಇದೀನಿ ಗೊತ್ತಾ…?ಮೇಲೆ ಇದಾವಲ್ಲ ಸಾಲುಗಳು .. ಅವು ತುಂಬಾ ಕಾಡ್ಬಿಟ್ವು ಕಣೇ.. ಅದಕ್ಕೆ!!ನಾನ್ ಆ ತಪ್ಪು ಮಾಡಿದಿನಿ.. ರೆಪ್ಪೆಗಳನ್ನು ಕೂಡ ತೋಯಿಸಿದಿನಿ.. ಆದ್ರೆ ನೀನ್ ಇನ್ನಾ .. ತಪ್ಪು ಮಾಡಿಲ್ಲ… i mean ಪ್ರೀತಿ ಮಾಡಿಲ್ಲ..(ಅಥವಾ ಅದು ಹುಟ್ಟಲೇ ಇಲ್ಲ…!!) ರೆಪ್ಪೆಗಳನ್ನ ಮಾತ್ರ ತೋಯಿಸಿದ್ದೀಯಾ.. ಆದ್ರೆ ನಿನ್ನದಲ್ಲ… ನನ್ನದು.. thanks for that ಕಣೇ!!ಜಗತ್ತಲ್ಲಿ ತಪ್ಪು ಮಾಡಿ ಕೂಡ.. ಸಂತೋಷವಾಗಿ ಇರೋವರು ಅಂದ್ರೆ ಪ್ರೇಮಿಗಳು ಮಾತ್ರ ಅನ್ಸುತ್ತೆ!! ಹ್ಹ…ಹ್ಹ… Again ಅವರಲ್ಲಿ..ನಾನೂ ಒಬ್ಬ!!ಪ್ರಿಯಾ.. ಒಂದ್ ಸತ್ಯ ಹೇಳಲಾ…? ನೀನ್ ಬ್ಯಾಡಾ ಅಂದ್ರೂ ಹೇಳ್ತೀನಿ ಕೇಳು..ನಿನಗಿಂತ ನಿನ್ ಹೆಸರನ್ನ ಜಾಸ್ತಿ .. ತುಂಬಾನೇ ಜಾಸ್ತಿ ಪ್ರೀತಿಸ್ತೀನಿ ಕಣೆ!, ನೀನು ನಾ ಕರೆದೊಡನೆ..ಬರೋದಿಲ್ಲ..ಆದ್ರೆ ನಿನ್ ಹೆಸರು.. ಹೂಂ.. ನಿಜವಾಗ್ಲೂ ಕರೆದ ತಕ್ಷಣ ಬರುತ್ತೆ.. ನನ್ನೊಳಗಿಂದ..ನನ್ನ ಮನದೊಳಗಿಂದ..!! ನನ್ನ ನಿನ್ನ ತುಟಿಗಳೆರೆಡು “ಭೇಟಿ” ಆಗೋದೇ ಇಲ್ಲ.. ಆದ್ರೆ ನಿನ್ನ ಹೆಸರ ಆರಂಭದ ಅಕ್ಷರ ಕರೆದೊಡನೆಯೇ.. ನನ್ನವೇ ಎರಡು ತುಟಿಗಳು ಎಷ್ಟು ಜಲ್ದಿ ಒಂದಾಗ್ತವೇ ಗೊತ್ತಾ..? ಬೇಕಿದ್ರೆ ನಿನ್ನ ಹೆಸರನ್ನ ನೀನೆ ಕರೆದುಕೊಂಡು ನೋಡು.. thatz y, i luv ur Name more than u…!! Sorry ನಿನ್ನ ಹೆಸರನ್ನೇ ನಿನ್ನ ಸವತಿಯನ್ನಾಗಿ ಮಾಡಿದ್ದಕ್ಕೆ!ಇನ್ನು ಒಬ್ರು ಸವತಿ ಇದಾರೆ..!! ಅವರು ಯಾರು ಗೊತ್ತಾ… ??? ಅದು ಕೂಡಾ ನಿನ್ನದೇ ಕಣೇ… ಗೊತ್ತಾಗಲಿಲ್ವಾ…? ಅವೇ ನಿನ್ನ “ನೆನಪುಗಳು…”ನಿಜವಾಗ್ಲೂ ಅವುಗಳು ಕೂಡ.. ನಿನಗಿಂತ ಎಷ್ಟೋ ವಾಸಿ.. ನೋಡು.. ನಿನ್ನನ್ನ ನಾ ಎಷ್ಟು ಗೋಗರೆದು ಕರೆದರೂ ನೀ ಬರೋಲ್ಲ.. ಆದ್ರೆ ನಿನ್ನ ನೆನಪುಗಳನ್ನ ನಾ ಕರೆಯೋದೇ ಬೇಡ.. ತಾವಾಗಿಯೇ.. ಮನದ ನೆಲದಲಿ ಮುತ್ತಿಡಲು ಬರುತ್ತವೆ.. ಮಳೆ ಹನಿಗಳು ಈ ಇಳೆಯ ಚುಂಬಿಸೋ ಹಾಗೆ! ನಿನ್ನಾಣೆಗೂ ಬರ್ತವೇ.. ಅದಕ್ಕೆ ನಾ ಹೇಳಿದ್ದು ನಿನಗಿಂತ ಅವೇ ಎಷ್ಟೋ ವಾಸಿ ಅಂಥ!! ನಮ್ ಕಾಲೇಜ್ ರೋಡಲ್ಲಿರೋ “ಪ್ರಿಯಾ ಬೇಕರಿ” ನೋಡಿದಾಗ.. ಅಲ್ಲಲ್ಲಿ ಕಾಣೋ…”ಪ್ರಿಯಾ ಸೀಮೆಂಟ್” Advertise ನೋಡಿದಾಗ.. ಟಿ.ವಿ..ಲೀ ಬರೋ..”Priya Gold” biscuits Ad ನೋಡಿದಾಗ ತಕ್ಷಣ ನಿನ್ ನೆನಪಾಗುತ್ತೆ ಕಣೆ..!! (ನನ್ನನ್ನ ಎಂಥಾ ಹುಚ್ಚನನ್ನಾಗಿ ಮಾಡ್ ಬಿಡ್ತೇ ನಿನ್ ಹೆಸರು..ನಿನ್ ನೆನಪು…!!?) ಅದಕ್ಕೆ ಹೇಳೋದು “ನೆನಪುಗಳ ಮಾತು ಮಧುರ..” ಅಂಥ!
ಹಾಗೆ.. ನಿನಗೆ ಗೊತ್ತಿಲ್ಲದೇ ನೀನು ಕೊಡೋ ನೋವಿಗಿಂತ ನಿನ್ನ ನೆನಪುಗಳು ನೀಡೋ ನೋವು..mmm!!.. ನಿಜಕ್ಕೂ ಅತೀ ಮಧುರ..!!ಅವು ಏನಾದ್ರೂ ಕಣ್ಣಿಗೇ ಕಾಣೋ ಹಾಗಿದ್ರೆ.. ಕೈಗೆ ಸಿಗೋ ಹಾಗಿದಿದ್ರೆ ಅವುಗಳನ್ನೇ ಕಟ್ಕೋಂಡ್‍ಬಿಡ್ತಿದ್ದೆ!! .. ನಗು ಬಂತಾ..!!?ಅದೇ ನನಗೂ ಬೇಕಾಗಿರೋದು.. ಅದೇ ನಿನ್ ನಗು..just.. be haPy.. keeP smiliNg..! I wanna leave..!! ನಿನ್ನ ನಗುವಿಲ್ಲದೆ ಹೂ..ಹೂಂ i cant!!… ನಾನ್ ಬದುಕಕ್ಕೆ ಆಗಲ್ಲ!
ಆ “ತೀರ” ಕಾಣದ ಕಡಲಲಿ..ಕ್ಷಣದಲಿ ಮರೆಯಾಗೋ ಅಲೆಗಳಲ ಮೇಲೆ..ಮನದ ಸಾಲುಗಳ ತುಂಬಿ ಪ್ರೀತಿಯ ದೋಣಿಯ ಕಳುಹಿಸಿದವ….. ನಾ(ಗು)ವಿಕ!!

ಗೆಳೆಯಾ ನಾಗೆಶನ್ ಹೃದಯದಿಂದ.....ಪ್ರೀತಿಸಿದ ಹುಡುಗಿ..


ಹಾಯ್..ಹೃದಯವಿದ್ದರೂ ಪ್ರೀತಿಸಲು ಬರದ ಹುಡುಗಿ.. ಪ್ರಿಯಾ..!!ಹೇಗಿದ್ದೀಯಾ…?
ಬಿಡು ನೀನ್ ಚೆನ್ನಾಗೇ ಇರ್ತೀಯಾ.. ನಿಂಗೇನು ದಾಡಿ.ಓಹ್ ನೋಡು ನಿಂಗೆ Exam ಇರೋದ್ ಮರ್ತೇ ಹೋಯ್ತು ನಂಗೆ, Sorry ಕಣೇ Disturb ಮಾಡ್ತೀರೋದಕ್ಕೆ: ನೀನು ನನ್ನ Disturb ಮಾಡಿರೋದ್ರ ಮುಂದೇ ಇದು ಯಾವ ಲೆಕ್ಕ ಬಿಡು.ಸದ್ಯಕ್ಕೆ ನಿನಗೆ Disturb ಮಾಡ್ತೀರೋದಕ್ಕೆ ಕಾರಣ… ಕಾರಣ… ಹೇಳಲಾ ಬೇಡವಾ..? ಅಂಥ ಭಯ ಆಗ್ತಿದೇ ಕಣೇ…! ಆದ್ರೂ ಹೇಳ್ತಿನಿ ಕೇಳು..ನಾನು ಇವಾಗಿವಾಗ ತುಂಬ ತುಂಬಾನೇ.. Disturb ಆಗಿದಿನಿ.. ನಿನ್ನಿಂದ ಅಲ್ಲ.. ನಿನ್ನ ನೆನಪುಗಳಿಂದಾನೂ ಅಲ್ಲ… Iam sorry to say tizZ!! ಆದ್ರೂ ನಾನು ಹೇಳಲೇಬೇಕು… ನೀನ್ ಕೇಳಲೇಬೇಕು..
ಹೌದು.. ನಿಜ… ಈಗೀಗ ನಿನ್ನ ನೆನಪಾಗ್ತ ಇಲ್ಲ… ಕನಸಂತೂ.. ಕಾಣ್ಟಾನೇ ಇಲ್ಲ… ನಿನ್ನ ಕಣ್ಣಾಣೆಗೂ…ಎದುರಿನ ಮನೆಗೆ ಹೊಸತಾಗಿ ಬಾಡಿಗೆ ಬಂದಿರುವ Police ಅಂಕಲ್ ಮಗಳು ಆ ಪಾಟಿ ಮೋಡಿ ಮಾಡಿದಾಳೆ… ಅಥವಾ.. ನಾನ್ ಅವಳ ನಗುವಿನ ಬಲೆಗೆ ಬಿದ್ದೀದಿನಿ ಅಂತಿಟ್ಕೋ..ಅವಳ ಹಸನ್ಮುಖ, ಆ ಹುಬ್ಬು ಸಾಲುಗಳು…ಅವಳು ಇಡೋ ಪ್ರತಿ ಹೆಜ್ಜೆಯ ಶೈಲಿ.. ಅವಳು ನಗೋದ್ ನೋಡ್ತಾ ಇದ್ರೆ… ಎಂಥಾ ಹನುಮಂತನಿಗೂ ಪ್ರೀತಿ ಹುಟ್ಟದೇ ಇರದು…ಅವಳನ್ನ ಜಾಸ್ತಿ ಹೋಗಳ್ತಾ ಇದಿನಿ ಅಂಥ ಬೇಜಾರ್ ಮಾಡ್ಕೋಬೇಡ…ಏನ್ ಮಾಡ್ಲಿ… ನಾನ್ ಅವಳ ಬಗ್ಗೆ ಬರೀಯೋದ್ ಬೇಡ, ಹೇಳೋದಂತೂ ಬೇಡ್ವೇ ಬೇಡಾ..ಅಂಥ ಅನ್ಕೋಂಡೆ..Control ಮಾಡ್ಕೊಂಡೇ.. ಉಹೂಂ… ಆಗ್ಲಿಲ್ಲ… Am Sorry ಕಣೇ…!!ನೀನು ನನ್ನ ಸೋಲಿಸಿದ್ದಕ್ಕಿಂತ ಜಲ್ದಿ.. ಇವಳು ನನ್ನ ಸೋಲ್ಸಿಬಿಟ್ಟಳು.. ಮತ್ತೊಮ್ಮೆ… ಮಗದೊಮ್ಮೆ… Sorry ಕಣೇ…ಇನ್‍ಮುಂದೇ… ನಿನ್ನ ನೆನಪು ಅನ್ನೋದ್ ಆಗದೇ ಇಲ್ವೇನೋ…? ನನ್ ಮೇಲೆ ಕ್ಷಮೆ ಇರಲಿ…ನನ್ನ ಮನದ ಬಂಜರು ನೆಲದಲ್ಲಿ.. ಒಲವ ಹೂವಿನ ಗಿಡ ಬೆಳೆಸಿದೋಳು ನೀನು… ಆದ್ರೆ ಇವತ್ತು ಅದೇ ಗಿಡದಲ್ಲಿ… ಬೇರೆ ಯಾವುದೋ ಮೊಗ್ಗಿದೆ… ಜೊತೆಗೆ ಸಿಗ್ಗಿದೆ…!!ಅವಳು ಆ ಗೌಡರ ಮನೆಗೆ ಬಂದ ಮೂರನೇ… ದಿನಕ್ಕೆ ಹುಟ್ಟಿದಬ್ಬ ಇತ್ತು.. ಏನ್ ಜೋರಾಗ್ Celebrate ಮಾಡಿದ್ರೂ… ಅಬ್ಬಬ್ಬ…! ನಮ್ಮಂತ MiddleClass ಹುಡುಗರಿಗೆ.. ಅದೇ Super Rocking Party..!!ಅವಳ ಹೆಸರು… ಸುಮ.. ನಿನ್ನ ಹೆಸರಷ್ಟು ಚೆಂದ ಇಲ್ಲ.. ಆದ್ರೂ.. ಚೆಂದ ಇದೆ..!!
ಸುಮ…happy birthday to you… ಅಂದೆ… ನಿನ್ನ ಹುಟ್ಟಿದಬ್ಬಕ್ಕೆ ನಿನಗೆ ಕನ್ನಡದಲ್ಲಿ… “ಜನುಮ ದಿನದ ಶುಭಾಶಯಗಳು” ಅಂಥ ಚಿನ್ನಕನ್ನಡದಲ್ಲಿ ಹೇಳ್ದಾಗ ನೀನೆಷ್ಟು ಮುದ್ದಾಗಿ Thank u ಕಣೋ.. ಅಂದೇ ನೋಡು.. ಥೇಟ್ ಅದೇ Style ಅಲ್ಲಿ… ಇಳಿಬಿದ್ದ ಮುಂಗುರುಳು ನೇವರಿಸ್ಕೊಂಡು.. ಹೇಳ್‍ದ್ಲು ನೋಡು.. ನಾನ್ ಅಲ್ಲೇ ಬೋಲ್ಡು…!!
ಎಲ್ಲರ ಎದುರು… ನನ್ನ ನಿನ್ನ ತೋಳಲ್ಲಿ ಎತ್ಕೋ… ಅಂದ್ಲು… ನಿನ್ನ ಕೆನ್ನೆಗೆ ಒಂದೇ.. ಒಂದು “ಪಪ್ಪಿ” ಕೊಡ್ಬೇಕು… ಅಂದ್ಲು.. ಆ ಐದನೇ ವರ್ಷದ ಹುಟ್ಟು ಹಬ್ಬ Celebrate ಮಾಡ್ಕೊಳ್ಳುತ್ತಿದ್ದ… ಹುಡುಗೆ.. ನಿಜವಾಗ್ಲು.. ಅಂದಿದ್ದೇ ತಡಾ.. ಮುಗಿಲನ್ನೆ ಮುಟ್ಟಿಸೋ ಹಾಗೆ.. ಎತ್ಕೋಂಡ್ ಒಂದೇ.. ಒಂದು.. ಹೂ ಮುತ್ತಿಟ್ಟೇ… ಅವಳು … ಅಣ್ಣಾ… ನಿನ್ನ ಕೆನ್ನೆಗೆ ಒಂದು ಪಪ್ಪಿ ಕೊಡ್ಬೇಕು ಅನಿಸ್ತಾ ಇದೆ.. ಆದ್ರೆ ನಿನ್ನ ಗಡ್ಡ.. ಅಡ್ಡ ಬಂದು ಚುಚ್ಚುತ್ತೆ… ಅಂದ್ಲು.. ನೋಡು…ಅಲ್ಲಿದ್ದ ಎಲ್ಲರೂ… ನಾನು ಸೇರಿ.. ನಕ್ಕು..ನಕ್ಕು… ಸುಸ್ತಾಗಿಬಿಟ್ವಿ… ಕಣೇ…
ನಿಜವಾಗ್ಲೂ.. ಅವಳು ಜೊತೇಲಿ ಯಾವಗ್ಲೂ ಇರ್ತಾಳೆ.. ನಿನ್ನಷ್ಟು ಹಠ ಮಾಡಲ್ಲ.. ಆದ್ರೆ ನಿನ್ನಷ್ಟೇ ಚೆಂದವಾಗಿ ಮುನಿಸಿಕೊಳ್ತಾಳೆ.. ನಗ್ತಾಳೆ… ಇಂತದ್ರಲ್ಲಿ ನಿನ್ನ ನೆನಪಾಗೋದು ದೂರದ ಮಾತು…ನೋಡು… ವಿಧಿ ಅಂದ್ರೆ .. ಇದೇ ಇರ್ಬೇಕು.. ಅವಳಿಗೆ ಅವರಪ್ಪ ನಾಳೆ.. ನಾನು…ನೀನು ಓದಿರೋ ಅದೇ.. ಸ್ಕೂಲಲ್ಲಿ L.K.Gಗೆ Admission ಮಾಡಿಸ್ತಾ ಇದಾರೆ..ಅವಳು ಇನ್ಮೇಲೆ.. A.B.C.d..,one two thre.. ಓದ್ಬೇಕು.. ಹೇಳ್ಕೊಡು..ಅಂತಾಳೆ.. ಅವಳಿಗೆ ಹೇಳ್ಕೋಡೋಷ್ಟರಲ್ಲಿ ಸಾಕು ಸಾಕಾಗುತ್ತೆ… ಅವೆಲ್ಲರ ಮದ್ಯೆ.. ನಿನ್ನ ನೆನಪು.. ತಿಂಗಳಿಗೊಮ್ಮೆ ಬರೋ “ಹುಣ್ಣಿಮೇ”ನೇ..ಸರಿ..
ಒಕೆ.. ಕಣೇ.. ಬೇಜಾರ್ ಮಾಡ್ಕೋಂಡಿದ್ರೆ.. ನನ್ ಮೇಲೆ ಕ್ಷಮೆ ಇರಲಿ… ಅಚ್ಚರಿಯಾಗಿದ್ರೆ.. ಮೊಗದ ಮೇಲೆ ಹೂ ನಗುವಿರಲಿ…ನೀನ್ ಅದೆಲ್ಲೋ ನಕ್ಕರೆ, ನನಗಿಲ್ಲಿ ಖುಷಿ ಆಗುತ್ತೆ.. ನಾನು ನಗ್ತೀನಿ.. ಸುಮ್..ಸುಮ್ನೇ…!ಮತ್ತೆ ಯಾವಾಗ್ ಬರಿತಿನೋ.. ಗೊತ್ತಿಲ್ಲ…(ನಿಮ್ಮಪ್ಪ..ನಿನ್ಗೆ ಅದ್ಯಾವಾಗ mobile ಕೊಡಿಸ್ತಾಣೋ… ನಿನ್ನ ಅಮ್ಮನಿಗೇ ಗೊತ್ತು,,,!!..ನಾನ್ ನಿನಗೆ Sms, misscall, call ಮಾಡೋದ್ ಯಾವಾಗೋ..ಗೊತ್ತಿಲ್ಲ)
ಒಕೆ.. ಟಾಟಾ.. ಕಣೇ… ಅವಳು ಅವರ ಮನೆ ಕಾಂಪೌಂಡಲ್ಲಿ ನನಗೋಸ್ಕರ ಕಾಯ್ತಾ ಇದ್ದಾಳೆ.. ಅವಳ ಜೊತೆ.. ಅವಲಕ್ಕಿ…ಬುವಲಕ್ಕಿ… ಆಡ್ಬೇಕು… ಬರ್ತೀನಿ…Bye..!! take care.
be haPPy… keeP smiliNg..!
……….. ನಿನ್ನ ನಗುವ ಬಯಸೋ… ನಾಗು!!

ಕಂಪ್ಯೂಟರ್ ಪ್ರೇಮ ಪತ್ರ..


ಇದೊಂದು ಪಕ್ಕಾ Technical Love Letterru…!ಒಬ್ಬ Computer Engineer ಬರೆದದ್ದು(ಕೊರೆದದ್ದು…!)———————————————————————————————————-ಹಾಯ್ …!
Monitor ಮಾದೇವಿಯೇ…! CPU ಶ್ರೀದೇವಿಯೇ…! ಹೇಗಿರುವೆ…? ಎಲ್ಲಿರುವೆ..?
ನನ್ನ ಹೃದಯದ HardDisk ನಲ್ಲಿ, ನಿನ್ನ ಕನಸುಗಳೆಂಬ Files ಗಳ save ಮಾಡಿ, ನೆನಪುಗಳೆಂಬ (ಸಿಹಿ) Virus ತುಂಬಿ, ಹೇಳದೇ ಕೇಳದೆ ಎಲ್ಲಿಗೆ ಹೋದೆ..!??
ಕ್ಷಮೆ ಇರಲಿ ಈ ಮಾತ್ ಹೇಳ್ತಾ ಇರೋದಕ್ಕೆ…,ನನ್ನ ಈ ಹೃದಯವೆಂಬ HardDisk ಕೇವಲ ನಿನಗಾಗಿ ಮೀಸಲಲ್ಲ ಕಣೇ…! ಅದು ನನ್ನ ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಬಂದು ಮಿತ್ರರೆಲ್ಲರಿಗೂ ಸೇರಿದೆ..!ಅದರಲ್ಲಿ ಮೂರಾರು Partition ಮಾಡಿ, ಹಂಚಿ, ಒಬ್ಬೊಬ್ಬರಿಗೂ ಮೀಸಲಿಟ್ಟಿದ್ದೇನೆ..! ಅದು ಸರಿಯಾ ನಂಗೊತ್ತಿಲ್ಲ…! ಆದ್ರೆ ತಪ್ಪಾಗಿರಲಾರದು…!
Ofcorse..,ನನ್ನ ತಾಯಿ-ತಂದೆ ನಂತರದ ಸ್ಥಾನ ನಿನಗೇನೆ…! ನಿನಗೆ ವಸಿ ಜಾಸ್ತಿಯೇ Space ಮೀಸಲಾಗಿದೆ..!ಅದು ಎಷ್ಟು GB ಯೋ ನಾ ಹೆಳಲಾರೆ..! ಆದ್ರೆಆದ್ರೆ, ತಿಳ್ಕೋ ನಿನಗಾಗಿ ಮೀಸಲಿಟ್ಟಿದ್ದ ಜಾಗ ಪೂರ ಇಂದು.. ಬರಿ ನಿನ್ನ ನೆನಪುಗಳೆಂಬ Virusಗಳಿಂದ Attack ಆಗಿದೆ..!ಯಾವ AntiVirus(ಬೇರೆ ಹುಡುಗಿಯರು…!) ಕೂಡ install ಆಗ್ತಿಲ್ಲ, ಅದ್ರೂ ಆ Virusಗಳನ್ನ Remove ಮಾಡಿ Delete ಮಾಡಲಿಕ್ಕೆ ಆಗ್ತಿಲ್ಲ..!ಇದಕ್ಕೆ Admisnistrator(ಆಡಳಿತಗಾರ್ತಿ…!) ಅಂದ್ರೆ ನಿನ್ನ ಜರೂರತ್ ಇದೆ..!ಅವೆಲ್ಲವನ್ನ ನಿನ್ನ ‘ನಗು, ಪ್ರೀತಿ .. ‘ ಎಂಬ Software install ಮಾಡಿ ಸರಿಪಡಿಸಬೇಕು…!ನೀನು ನನ್ನ ಪಾಲಿಗೆ ಕೇವಲ “ನೆನಪು” ಆಗ್ಬೇಡ.. ಬಾಳಿನ ಉದ್ದಗಲಕ್ಕೂ ಬದುಕೋ “ಕ್ಷಣ”ಗಳಾಗಬೇಕು…!
ಮೆದುಳೆಂಬ Processor On ಆಗಿ, Run ಆಗ್ತಿರೋ ತನಕ, ಮಿನುಮಿರುಗೋ Mionitor ಆಗ್ಬೇಕು.. ನನ್ನ ಬಾಳೆಂಬ Taskಗೆ ಬೆಳಕಾಗಬೇಕು..!ಅದು ಹೇಗೆ, ಎಲ್ಲಿ, ಯಾವಾಗ ನಂಗೊತ್ತಿಲ್ಲ..!
ಈ ಪ್ರೀತಿ ಎಂಬ ಅಂತರ್ಜಾಲ.. Sorry ಮಾಯಾಜಾಲದಲ್ಲಿ, ನಾನಂತು ಸಿಕ್ಕಿ ಒದ್ದಾಡುತಿದ್ದೇನೆ..!ಇಲ್ಲೇ ಬಿದ್ದಿರ್ಲಿ Bloody Heart Hacker ಅಂಥ ಸುಮ್ಮನಾಗ್ತಿಯೋ.., ಅಥವಾ ನನ್ನ Love software ನ ನಿನ್ನ ಎದೆಗೂಡಿನ Heart ಎಂಬ Hardiskನಲ್ಲಿ install ಮಾಡ್ಕೋತಿಯೋ ನಿಂಗ್ ಬಿಟ್ಟಿದ್ದು…!
ಮಾತಾಡೋಕ್ಕೆ ಮನಸಾದ್ರೆ Mailನಲ್ಲಿ ಮುನ್ಸೂಚನೆ ಕಳಿಸು..!, ಆದ್ರೆ ಅದರಲ್ಲಿ ಬರಿ “ಮೌನದ” Attachment ಬೇಡ..!ಕನಸಾಗಿ ಕಾಡಬೇಕೆನಿಸಿದರೆ ಒಂದೊಳ್ಳೆ Greeting ಕಾರ್ಡು ಕಳಿಸು.., ಅದ್ರಲ್ಲಿ ನಿನ್ನ ” image ” ಹಾಕದೆ ಇರಬೇಡ..!
ಒಟ್ಟಿನಲ್ಲಿ ಈ ಜೀವ Shut Down ಆಗೋ ಮುನ್ನ, ಪ್ರೀತಿಯ Software ನ, ನಿನಗೋಸ್ಕರ್ ಅಂತಲೇ ಮೀಸಲಿಟ್ಟಿರೋ Spaceನಲ್ಲಿ install ಮಾಡು..!ಇಲ್ಲವಾ, Restart ಮಾಡು.. ಇನ್ನೊಂದ್ ಜನ್ಮ ಇದೆ ಅನ್ನೋದಾದ್ರೆ Wait ಮಾಡು…!
Love me Or Hate me…!Kiss me Or Kill me..!
Oh Darling, Plz Do Something to me…!
ಹಾಗೆ ಸುಮ್ಮನೆ ಮಾತ್ರ ಇರಬೇಡ….!
ಇಂತಿ,ನಿನಗೆ ಪ್ರೀತಿಯ Invitation ಕಳ್ಸಿ Approval ಗೆ ಕಾಯ್ತಾ ಇರೋ…,{ಸಂಗ್ರಹ.. ಗೆಳೆಯನ ಹೃದಯದಿಂದ..}

ನಿನ್ನ ಪ್ರೀತಿಗೆ ಅದರ ರೀತಿಗೆ..ಕಣ್ಣ ಹನಿಗಳೇ ಕಾಣಿಕೆ!!



#143, ನನ್ನ ಹೃದಯದೂರು..
ನಾ ಬಚ್ಚಿ. ಮುಚ್ಚಿಡೋ ಪತ್ರ(…ಪ್ರೇಮಪತ್ರ!!)ಗಳ ಸಾಲಿಗೆ ಮತ್ತೊಂದು, sorry ಕಣೇ ಇದುವರೆಗೂ ನಾ ಬರೆದ ಪತ್ರಗಳನ್ನ ನಿನಗೆ ಕೊಡದಿದ್ದಕ್ಕೆ, ನೀ ಅದನ್ನ ಓದದ್ದಕ್ಕೆ!! ಅಷ್ಟಕ್ಕೂ ನಾನು ನೀ ಓದಲಿ ಅಂಥ ಬರೆದಿಲ್ಲ, ಬರೀತಾ ಇಲ್ಲ.. ನಾ ಬರೆಯೋ ಪತ್ರಗಳು, ಅದರೊಳಗಿನ ಸಾಲುಗಳು ನಿನಗೋಸ್ಕರ ಮಾತ್ರ ಬರೆದಿದ್ದಲ್ಲ…ಅವು ನನಗೋಸ್ಕರ, ನನ್ನೊಳಗಿನ ನಿನಗೋಸ್ಕರ ಮತ್ತೊಮ್ಮೆ ಹೇಳ್ತಾ ಇದಿನಿ ಕೇಳು…ನನ್ನೊಳಗಿನ ನಿನಗೋಸ್ಕರ..!!, ನಾ ನಿನ್ನ ನೆನಪಲಿ ಕಳೆದ sorry “ಬದುಕಿದ” ಕ್ಷಣಗಳಿಗೋಸ್ಕರ.. ನಿನ್ನ ನೆನಪಲಿ ತೇಲೋದಕ್ಕೆ ಸಾಥ್ ಕೊಟ್ಟ ಆ ಗಾಳಿಗೋಸ್ಕರ, ನಾ ಏಕಾಂತದಲಿ ಗುನುಗಿದ ಹಾಡುಗಳಿಗೋಸ್ಕರ..ನೋವಿದ್ದ ಸಾಲುಗಳಿಗೋಸ್ಕರ..
ಇರಲಿ ಬಿಡು…ಮತ್ತೆ ಉತ್ತರ ಬಾರದ ನಿನ್ನೆಡೆಗೆ ಮತ್ತೊಂದು ಪ್ರಶ್ನೆ..! ಈ ಜಗತ್ತಲ್ಲಿ.. ನಾವು ಅಂದ್ರೆ ಮನುಷ್ಯರು ಪ್ರೀತಿ ಯಾಕ್ ಮಾಡ್ತೀವಿ, ಅಥವಾ ಪ್ರೀತಿಯ ಬಲೆಗೆ ಯಾಕ್ ಬೀಳ್ತೀವಿ ಗೊತ್ತಾ..? sorry ನಿನಗದು ಗೊತ್ತಿರಲಿಕ್ಕಿಲ್ಲ ಬಿಡು.. ನನ್ನ ಪ್ರಕಾರ..ಕೆಲವರು ತಾವು ಬದುಕಿಷ್ಟು ದಿಸ ಸಿಕ್ಕದ ಸಂತೋಷಕ್ಕೋಸ್ಕರ, ತಾವು ಪಡೋ ಸಂತೋಷಕ್ಕೆ ಒಂದು ಹೆಸರಿಡೋಗೋಸ್ಕರ…ಇನ್ನು ಕೆಲವರು ತಮ್ಮಲ್ಲಿರೋ ಸಂತೋಷವನ್ನ ಅಂಚಿಕೊಂಡು ಬದುಕಕ್ಕೆ.. ಕೆಲವರು ನಮ್ UPPI ಹೇಳೋ ಹಾಗೆ ಕ್ಷಣಿಕ ಸುಖಕ್ಕಾಗಿ.. ಪಾಪ ಇನ್ನು ಕೆಲವರು ಗೊತ್ತಿಲ್ಲದೇ ತಪ್ಪು ಮಾಡ್‍ಬಿಡ್ತಾರೆ…!!
ಆದ್ರೆ ನಾನ್ ಇವುಗಳಲ್ಲಾವುದರ ಗುಂಪಿಗೂ ಸೇರದವನು… ನಾನು ನೋವಿಗಾಗಿ ಪ್ರೀತಿಸಿದವನು.. ಪ್ರೀತಿಸುತ್ತಿರುವವನು!! ಅಂಥವರೊದೊಂದು ಗುಂಪು ಅನ್ನೋದ್ ಇದ್ರೆ..ಅವ್ರಲ್ಲಿ ನಾನೂ ಒಬ್ಬ!! ಅವರು ಕೈಗೆ ಸಿಗದ ಚಂದಮಾಮನ ನೋಡಿ ತಾಯಿ ನೀಡೋ ತುತ್ತು ತಿನ್ನೋ ಮುಗುದ ಮಕ್ಕಳ ಹಾಗೆ.. ಗಾವುದ ದೂರದಲ್ಲಿ ಮೂಡಿದ ಬಣ್ಣದಬಿಲ್ಲಿನ ಮೋಡಿಗೆ ಗರಿಗೆದರಿದ ನವಿಲಿನ ಹಾಗೆ!!
ಅವರಿಗೆ ಗೊತ್ತಿದ್ದೋ, ಗೊತ್ತಿಲ್ದೇನೋ ತಮಗೆ ಒಲಿಯದ, ನಲಿಯದ ಪ್ರಿತಿಗಾಗಿ ಅರೆಕ್ಷಣವಾದ್ರು ತುಡಿಯುತ್ತಿರುತ್ತಾರೆ, ಮಿಗಿಲಾಗಿ “ಪ್ರೀತಿಸದ” ಹೃದಯವನ್ನ ಪ್ರೀತಿಸುತ್ತಿರುತ್ತಾರೆ!! ಇವರನ್ನ “ಹುಚ್ಚರು” ಅನ್ನೋ ಮುದ್ದಾದ label ಹಾಕಿ ನಗುತ್ತದೆ ಈ ಲೋಕ!!
ಪ್ರಿಯಾ…ನಾ ಅಂಥವರಲ್ಲಿ ಒಬ್ಬ.!!ನನಗೊತ್ತು ನೀ ಪ್ರೀತಿಸೋಲ್ಲ.. ಪ್ರೀತಿಸಿದರು ನನ್ನ.. ಉಹೂಂ ಪ್ರೀತಿಸೋದೇ ಇಲ್ಲ, ಆದ್ರೂ ಪ್ರಿಯಾ ನಾ ನಿನ್ನ ಪ್ರೀತಿಸ್ತಿನಿ.. ಯಾಕಂದ್ರೆ ನಾನು ಬದುಕಬೇಕು! ಪ್ರೀತಿ ಇಲ್ಲ ಅಂದ್ರೆ ಬದುಕಲಾಗುತ್ತ…? ಬದುಕಿದರೂ ಅದು ಒಂದು ಬಾಳಾ… ಬದುಕಾ…? ಪ್ರಿಯಾ ಹೇಳ್ತಿನಿ ಕೇಳು.. ಕೆಲವೊಂದು ಸಲ ಅನ್ಸುತ್ತೆ ಈ ಜಗತ್ತಲಿ…ನನ್ನೊಷ್ಟು ಖುಷಿಯಿಂದ ಯಾರೂ ಬದುಕ್ತಾ ಇಲ್ಲ ಅಂಥ… ಆದ್ರೂ ನಾನು ಪ್ರೀತಿಸ್ತಾ ಇದಿನಿ.. ನೋವಿಗಾಗಿ..ನೋವೊಳಗಣ ’ನಲಿವಿಗಾಗಿ’ ; Being haPPy always is a kiNd of BoriNg…. thatz why am iN luv..with u!!
” ಪ್ರೀತಿಯಿಂದ ಸಂತೋಷ ಬಯಸೋರು ಬೇಜಾನ್ ಜನ… ಆದ್ರೆ ಅದು ಸಿಗೋದ್ ಕಡಿಮೆ ಮಂದಿಗೆ…
ಪ್ರೀತಿಯಿಂದ ನೋವು ಬಯಸೋರು.. ತುಂಬಾನೇ ಕಮ್ಮಿ… ಆದ್ರೆ ಅದು ಬೇಜಾನ್ ಜನಕ್ಕೆ ಸಿಗುತ್ತೇ…” ವಿಪರ್ಯಾಸ ಅಂತಾರಲ್ಲ.. ಇದೇ ಇರಬೇಕು…!!
ಪ್ರಿಯಾ.. ನಿನ್ನನ್ನ ತುಂಬಾ ಪ್ರೀತ್ಸೋರು ನಿನ್ನ..ತಂದೆ..ತಾಯಿ ಅಕ್ಕ..ಅಣ್ಣಾ.ತಾಂಗಿ..ಇನ್ನು ಎಷ್ಟೋ ಮಂದಿ ಇದಾರಲ್ಲ… ಅವರಿಗಿಂತ ಜಾಸ್ತಿ ನಿನ್ನ ಪ್ರೀತಿ ಮಾಡ್ತೀನಿ ಅಂಥ ನಾ ಹೇಳಲ್ಲ.. ನಿನ್ನ ಪ್ರೀತ್ಸೋರ ಸಾಲಲ್ಲಿ.. Atleast ಲಾಸ್ಟ್ ನಲ್ಲಿ ನಿಂತಿರಿತ್ತೀನಿ ಪ್ರಿಯಾ.. ಕಂಬನಿ ತುಂಬಿದ ಕಣ್ಣುಗಳ ಕಾಣಿಕೆಯೊಂದಿಗೆ… ಮರೆತಾದ್ರೂ, ಗೊತ್ತಿಲ್ಲದೆ ನನ್ನೆ ಕಡೆ ಒಮ್ಮೆ ನೋಟವಲ್ಲದ ನೋಟ…ಎಸೆ.. ನನ್ನ ಕಂಗಳು ಅದಕ್ಕೋಸ್ಕರ ಕಾಯ್ತಾ ಇರ್ತವೆ..ನಾನೂ ಕೂಡ!!
ಪ್ರಿಯಾ ಪ್ರೀತ್ಸೇ..ನನ್ನಲ್ಲದಿದ್ದ್ರೂ.. ಇನ್ಯಾರನ್ನೋ… ಅದು ಬೇಡ atlest ನಿನ್ನನ್ನ…ಪ್ರೀತ್ಸು!! ನಿನ್ನ ಬಾಳೊಂದು ಬರಿಯ ಬಿಳಿ ಮೋಡ ತುಂಬಿದ ಮುಗಿಲಾಗದಿರಲಿ… ಮಳೆ ಸುರಿಸೋ ಕಾರ್ಮೋಡಗಳನ್ನ ಹೊತ್ತ ಮುಗಿಲಾಗಲಿ… (ಪ್ರೀತಿಯ)ಮಳೆಗೆ ಕಾದು ಬೆಂದ ಎಷ್ಟೊ ನೆಲಗಳಿವೆ…ಬರಿದಾದ ಎದೆಗಳಿವೆ.. Ofcorse ಅವರಲ್ಲಿ..ನಾನೂ ಒಬ್ಬ ಇರುತ್ತೀನಿ ಕಣೇ!!! ಕರುಣೆ ಇರಲಿ…
ಈ ಪತ್ರ ಎಲ್ಲೋ, ಹೇಗೋ… ಓದಿ..ನೀ ನಾಲ್ಕು ಹನಿ ಕಣ್ಣ್ರೀರು ಸುರಿಸಿದರೆ(ಮೊಸಳೆ ಕಣ್ಣೀರಾದರೂ…!!) ನಿಜಕ್ಕೂ..ಸಂತೋಷ..ತಪ್ಪು ತಿಳಿಯಬೇಡ , ತಾವು ಪ್ರೀತ್ಸೋರ ಕಣ್ಣಲ್ಲಿ ನೀರು ಬಯಸೋರು ಇರಲ್ಲ..ಆದ್ರೆ ನಾ ಬಯಸ್ತಾ ಇದಿನಿ..ನನ್ನ ಬರಡಾದ ಮನ ಬಯಸ್ತಾ ಇದೆ.. plz..
” ನನ್ನ ಪ್ರೀತಿಗೆ..ಅದರ ರೀತಿಗೆ.. ನೀ ಕೊಡಬಹುದಾದ ಕಾಣಿಕೆ…ನಿನ್ನ ಕಣ್ಣ ಹನಿಗಳೇ…!!”
ನಿನ್ನ ನೋಯಿಸಿದ್ದಕ್ಕೆ ಕ್ಷಮೆ ಇರಲಿ…ನಿನ್ನ ನೆನಪುಗಳು ಮನದ ಕದ ತಟ್ಟಿ ಕಾದು ಕುಳಿತವೆ.. ಅವುಗಳೊಡಾನೆ ಮನದಂಗಳದಲಿ ಕಣ್ಣಾಮುಚ್ಚಾಲೆ..ಆಟ ಆಡ್ಬೇಕು… ರೇಡಿಯೋದಲ್ಲಿ ಬರ್ತಾ ಇರೋ..ಕೆ.ಎಸ್.ನ..ರ…” ನಿನ್ನ ಪ್ರೀತಿಗೆ ಅದರ ರೀತಿಗೆ… ಕಣ್ಣಹನಿಗಳೇ..ಕಾಣಿಕೆ…” ಹಾಡು ಕೇಳ್ಬೇಕು… ಜೊತೆಗೆ ಹಾಡ್ಬೇಕು..ಇನ್ನು ಏನೇನೋ… ಬರಲಾ..
ಅಗೋ ಇನ್ನೊಂದ್ ಹಾಡ್ ಕೇಳ್ತಾ ಇದಿಯಾ… “…ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ, ಈ ತಿರುಗೋ ಭೂಮಿ ತಿರುಗದೆಂದೂ ಒಂದೂ ಕ್ಷಣಾ…!!
…… ಅಟ್ಟದ ಮೇಲೆ ಎತ್ತಿಡೋದಕ್ಕೆ ’ಪ್ರೇಮಪತ್ರ’ ಬರೆದ.. ಕೆಟ್ಟ ಪ್ರೇಮಿ…!!
ಮರೆತೆ.. be haPPy keeP smiliNg…!!
ನಿನ್ನ ನಗುವ ಬಯಸೋ….ವಿಶಾಲ್ ಹೃದಯದ ಪ್ರೇಮಿ..

Tuesday, February 5, 2008

ರಶ್ಮಿ ಪೈ and ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ

ವಿಚಿತ್ರ
- ಡಾ ಶ್ರೀಕೃಷ್ಣ ಭಟ್ ಅರ್ತಿಕಜೆ

ಇಂದು ಈ ಲೋಕದಲಿ ಎಲ್ಲವೂ ವಿಚಿತ್ರ
ಕಾಣದಾಗಿದೆ ಯಾವುದರ ಬಗೆಗೂ ಸ್ಪಷ್ಟ ಚಿತ್ರ
ತಲೆಕೆಳಗು ಕಾಲು ಮೇಲೆ ಬಲು ವಿಪರೀತ
ದೊರೆಯದಾಗಿದೆ ಬದುಕಿನ ವಿವರ ಸಚಿತ್ರ
ನೋಡಿದರೆ ಇಲ್ಲಿ ಎಲ್ಲವೂ ಹಿಂದು ಮುಂದು
ಕಂಡ ಕಂಡಲ್ಲಿ ಕಾಣುತಿದೆ ಬಹಳ ಕುಂದು
ಸರಿಯಾಗಲಾರದಿದು ಎಂದೆಂದು
ದೇವರೇ ಯತ್ನಿಸಿದರು ಧರೆಗಿಳಿದು ಬಂದು
ವಿಚಾರಿಸಿದರೆ ಇಲ್ಲಿ ಎಲ್ಲವೂ ತಿರುಗು ಮುರುಗು
ಪ್ರತಿಯೊಬ್ಬರಿಗು ಅವರವರದೇ ಕೊರಗು
ಯೋಚಿಸಿ ನೋಡಿದರರೆ ಎಲ್ಲಡೆಯು ಅತಿ ಬೆರಗು
ತಿಳಿಯಲಾರದು ಕೆಲವರ ಒಳಗು ಹೊರಗು
ಯಾವುದು ನಾವು ನೆನೆದಂತೆ ಇಲ್ಲ
ಕ್ಷಣ ಮಾತ್ರದಲ್ಲಿ ಭಗ್ನ ನಮ್ಮ ಹೊಂಗನಸೆಲ್ಲ
ವರುಷಗಟ್ಟಲೆ ಶ್ರಮಿಸಿ ಮಾಡಿದ ಯೋಜನೆಗಳೆಲ್ಲ
ನೀರ ಮೇಲಿನ ಹೋಮ ಯಾವುದೇ ಫಲವಿಲ್ಲ
ಸರಿತಪ್ಪು ನ್ಯಾಯಾನ್ಯಾಯ ನಿರ್ಧರಿಪರಾರು?
ಅರ್ಹತೆ ಅನರ್ಹತೆಯ ತಿಳಿಸುವವರಾರು?
ಯೋಗ್ಯತೆ ಅಯೋಗ್ಯತೆಗೆ ಬೆಲೆ ಕಟ್ಟುವವರಾರು?
ಅಯೋಗ್ಯ ಅನರ್ಹ ಜನರಿಂದ ತುಂಬಿರಲು ಊರು
ಎಲ್ಲಿ ಹೋದರು ಅಲ್ಲಿ ನಡೆದಿದೆ ಲಂಚಾವತಾರ
ಯಾವುದೇ ಕ್ಷೇತ್ರವನು ಬಿಟ್ಟಿಲ್ಲ ರಾಜಕೀಯ ಜಾತಿ
ಮತ ವರ್ಗಕ್ಕೆ ಮೇಲ್ಮಣೆ ನೀತಿಗಭಾವ ಸುಶಿಕ್ಷಿತ
ಜನರೆ ತೋರುವರು ಭೇದಭಾವ ಎಲ್ಲಿ ನೋಡಿದರಲ್ಲಿ
ಮೆರೆದಿದೆ ಭ್ರಷ್ಟಾಚಾರ ಇಲ್ಲ ಯಾರಲೂ ಸತ್ಯ
ನ್ಯಾಯ ಶಿಷ್ಚಾಚಾರ ಶ್ರದ್ಧೆ ಪ್ರಾಮಾಣಿಕತೆ
ಸಾಗಿಹುದು ಬಲು ದೂರಇದುವೆ ಆಧುನಿಕ ಜನ
ಜೀವನದ ಸಾರಬರಬಹುದು ಬೇಗದಲೆ ಮುಂದೊಂದು ಸುದಿನ
ಎಲ್ಲವೂ ಸರಿಯಾಗಿ ನಡೆವ ಆ ಶುಭದಿನ ಬುದ್ಧ
ಗಾಂಧಿಯ ತೆರದಿ ಬರಲಿ ಯುಗಪುರುಷ
ತುಂಬಲೆಲ್ಲರ ಮನಕೆ ಶಾಂತಿ ನೆಮ್ಮದಿ ಹರುಷ..........................
.,.,.,..,.,.,.,.,.,.,.,.,.,.,.,..,.,..,.,.,.,.,.,..,.,.,.,.,.,..,.,.,.,.,.,.,..,.,.,.,..,.,.,.,.,.,..,..

ಕಿಂಡಿಗಳು ಮುಚ್ಚಿವೆ !
- ರಶ್ಮಿ ಪೈ
ನಾವು,
ಬಳಲಿ ಬೆಂಡಾದವರು ಬೆವರು ನೀರ
ಸುರಿಸಿ ಎದೆಗೂಡನುಬ್ಬಿಸಿ
ಮೂಳೆ ಮುರಿತದ ಹೊತ್ತಲೂ
ಸತ್ತು ಬೇಸತ್ತನಾವು ಕೂಲಿಯವರು 1

ಚಿತ್ರ
ವಿಚಿತ್ರ ಛಾಯೆಗಳು ಅಸ್ಪಷ್ಟ
ಬದುಕ ಚಿತ್ರದ ಮೇಲೆ
ಚಿತ್ತಾರ ಬರೆದಿರಲು
ಮಬ್ಬು ಕತ್ತಲೆಯಲಿ ಕಣ್ಣು
ಮಿಟುಕಿಸುವ ನಾವು ಕೂಲಿಯವರು 2

ಬದುಕು-ಬವಣೆಯ
ನಡುವೆ ಹರಿದ-ಕರಿದ
ಬೆಂದ ರೊಟ್ಟಿಗಳ
ಒಳಗೆ ರಕ್ತ ಮಡುಗಟ್ಟಿ
ಎದೆಗುಂದದೆ ಈಸಿ ಜೈಸುವ
ನಾವು ಕೂಲಿಯವರು 3

ಬಂದು ಕೊಂದು
ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ
ಹೆಜ್ಜೆಯದುನಾತ ಬೀರುವ
ಕೊಳೆತ ಅಸ್ಥಿಮಜ್ಜೆಯೆಡೆಯಲ್ಲಿ
ಹಗಲಿರುಳೆನ್ನದೆ ದುಡಿವ
ನಾವು ಕೂಲಿಯವರು 4

ಹಬ್ಬ ದಿಬ್ಬಣದಿ
ಹಿಟ್ಟಿರದ ಬರಿ ಹೊಟ್ಟೆ
ಮುರುಕಲು ಗುಡಿಸಲ
ಹಳೆ ಮಂಚದಲಿ
ಗೆದ್ದಲು ಕೆಡವಿ ಬಣ್ಣ ತೊಯ್ದ ಉಡು
ಬಟ್ಟೆಆದರೂ ಗಟ್ಟಿಯಿದೆ
ನಮ್ಮ ರಟ್ಟೆನಾವು ಕೂಲಿಯವರು 5

ಕನಸುಗಳ ಹೆಣೆಯುವೆವು ಆ
ಒಣದೇಹದ ಬತ್ತಿದಾ ಹೃದಯದಲಿನ
ಭವ ಚುಂಬಿಸಿ, ತಾರೆಗೀಳಲು ಸದಾ
ಬಯಸುವೆವು ಮೇಲೆ ಬರಲೆಂದೂ
ನಾವು ಕೂಲಿಯವರು 6

ಏಳ ಬಯಸುವೆವು
ಶಿರವೆತ್ತಿ ದೊಡ್ಡ ಪಾದಗಳ
ದಮನ ತುಳಿತಗಳಡಿಯಿಂದ
ರವಿ ರಶ್ಮಿಯ ಮುಂದೆ
ದೀವಟಿಗೆ ಹಿಡಿದು
ಚಂದಿರನ ಮಡಿಲಲ್ಲಿ ಜೋ
ಹಾಡಲಿರುವ ನಾವು ಕೂಲಿಯವರು 7

ನಾವು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ
ಕಣ್ಣೀರು?ರಕ್ತ ಹಿಂಡಿದರೆ
ರಕ್ತವೂ ಖಾಲಿಜೀವನದ ಗೋಳೇ
ನಮ್ಮ ಈದ್, ಹೋಳಿ !
ನಾವು ಕೂಲಿಯವರು 8

ಎಂದೆನಿತು ಬಾಯ್ತೆರೆದರೆ,
ಪ್ರತಿದನಿ ಇಲ್ಲಹಣತೆ ಬೆಳಕ
ಹೊರ ಸೂಸುವುದೂ ಇಲ್ಲ
ಕಣ್ತೆರೆದ ಜನರಾವರಿಸಿದೆ
ದರ್ಪದಾ ಪೊರೆಭೋರ್ಗರೆವ
ದುಃಖದಲ್ಲಡಗಿದೆ ನಮ್ಮ ಕರೆಇದೇನು ಮಹಾ?
ಕಿಂಡಿಗಳು ಮುಚ್ಚಿವೆಯಲ್ಲಾ!!!! 9
,.,.,.,.,.,..,.,.,..,.,.,.,.,.,.,.,.,.,.,.,.,.,.,.,.,.,.,..,.,..,.,.,..,..,.,.,.,.,.,.,.,..,.,.,.,.

ನಿರೀಕ್ಷೆ....
- ರಶ್ಮಿ.ಪೈ
ಕಾದು ಕುಳಿತಿರುವೆ ಕವಿತೆಗಾಗಿ
ಮುಂಜಾನೆಯ ಇಬ್ಬನಿಯಲಿ
ಮೈನೆನೆವ ಹಸಿರು ಹುಲ್ಲುಗಳ ನೋಡಿ...
ಕವಿತೆ ಬರೆಯ ಬೇಕೆಂದೆನಿಸಿತು
ಆದರೆ ಅವು, ನನಗೆ ಕಂಬನಿಗಳಂತೆ ಕಂಡವು
ಮನಸ್ಸಿನಲ್ಲಿ ದುಗುಡ, ಕೈ ನಡುಗಿತು
ಬರೆಯಲಾಗದು ನನ್ನಿಂದ ಕವಿತೆ....

ಎಳ ಬಿಸಿಲ ಹೊಂಗಿರಣ
ದಿನಗುವ ಸೂರ್ಯಕಾಂತಿಯ ನೋಡಿ
ಬರೆಯ ಬೇಕೆನಿಸಿತು ಕವಿತೆ..ಮತ್ತೊಮ್ಮೆ,
ಅದೇ ಯೋಚನೆಮುಸ್ಸಂಜೆಗೆ ಮುದುಡಿ
ಹೋಗುವ ಈ ಸುಮದ ಬದುಕು, ಅದೇ
ನಡುಕಎಂದೆನಿತು ಕವಿತೆ ಬರೆಯಲೇನು?

ಉರಿಯುವ ಮಧ್ಯಾಹ್ನದ ಬೇಗೆಯಂತೆ
ಮನದಾಳದ ಯಾತನೆ...ಮುಸ್ಸಂಜೆಯಲಿ
ಬಿರಿಯುವ ಬಯ್ಯ ಮಲ್ಲಿಗೆ, ಗೂಡು ಸೇರುವ
ಹಕ್ಕಿಚುಕ್ಕಿಯಂತೆ ನಭದಲ್ಲಿ ತೋರುತಿರಲು
ಕವಿತೆಗಾಗಿ ಹುಡುಕಿದರೆ ಪದ ಪುಂಜಗಳು
ಸಿಗಲೇ ಇಲ್ಲ....ಏನ ಬರೆಯಲಿ ನಾ?

ಬಿರಿದ ಬಾನಂಗಳದಿ
ನಸುನಗುವ ಚಂದಿರ, ಇ
ಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ
ತಾರೆಗಳತ್ತ ದೃಷ್ಟಿ ಹಾಯಿಸಿರೆ...
ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ
ಜೀವನದಿ ಕಷ್ಟ ಸುಖಗಳ ದ್ವಂದ್ವ..
ಒಂದೆರಡು ಸಾಲು ಬರೆಯಲು ತಡಕಾಡಿದರೆ
ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?
,.,.,..,.,.,.,..,.,..,.,...,..,,..,.,..,.,.,.,..,.,..,.,.,.,,..,.,..,.,..,.,..,.,..,.,..,...,.,.,.

ಸಂಗ್ರಹ ಕವಿತೆಗಳು...

ಈಗೀಗ ರಾತ್ರಿಗಳಲ್ಲಿ
ಈಗೀಗ ರಾತ್ರಿಗಳಲ್ಲಿ
ಅವನು ಸೂತ್ರಗಳನ್ನು
ಸಡಿಲಗೊಳಿಸುತ್ತಿರಬೇಕು
ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ
ಧಪ್ ಎಂದು ಮನೆಯಂಗಳದಲ್ಲಿ
ಬೀಳುತ್ತಿವೆ ; ಪಂಜುಗಳಾಗುತ್ತಿವೆ.
ಸ್ವಲ್ಪ ಮಿಸುಕಾಡಿದರೂ ಸಾಕು
ನಾನು ಹೊತ್ತಿಕೊಳ್ಳುತ್ತೇನೆ.
ಜೊತೆಗೆ ನನ್ನ ಗುಡಿಸಲು,
ಸುತ್ತಲಿನ ಕಪ್ಪು ಭೂಮಿ.
ಸಂಜೆಗಳಲ್ಲಿ ಮೂಲೆ ಸೇರಿ
ಬಿಡುತ್ತೇನೆ,ಏಳುವುದೇ ಇಲ್ಲ.
ಚುಕ್ಕಿಗಳು ಬೀಳುತ್ತಲೇ ಇವೆ.
ನನಗೆ ತಲೆಭಾರ.
ಈಗೀಗ ರಾತ್ರಿಗಳಲ್ಲಿ
ನಾನು ಅರೆ ಹುಚ್ಚಿ.,.,.,.,.,.,.,.,.,.,.,.,.,.,.,,.


ತಿಳಿದಿರಲಿಲ್ಲ
ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು
ದಾಟಿಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು
ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು,.,..,.,..,..,,.,.,.,..,,.,,.


ಚುಕ್ಕಿಗಳ ನಡುವೆ
ಬೆಳಗಿನಂಗಳದಲ್ಲಿ
ಸಾಲು ಚುಕ್ಕಿಯನಿಟ್ಟು
ರಂಗೋಲಿ ಇಡುವಾಗ
ಮೊದಲ ಚುಕ್ಕಿಗಳಲ್ಲಿ
ಅವನ ಕಣ್ಣು ಮೂಡಿ
ನನ್ನ ನೋಡುವುದೇಕೆ?

ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?

ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ
ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?.,.,.,.,.,.,.,.,,.,.


ನೀನೊಮ್ಮೆ ನನ್ನ ನೋಡಬಾರದೇ?
(ಆತನ ಹಂಬಲ)
ಕೇರಿಯ ಗೆಳತಿಯರೊಂದಿಗೆ ನಗುತ
ಕೊಡಪಾನವ ಹೊತ್ತು
ಬಾವಿಕಟ್ಟೆಗೆ ಬಂದು
ಮತ್ತೆ ನಗುತಲೆ
ಬಂಡಿಗೆ ಹಗ್ಗವ ಹಾಕಿಕೊಡದ
ಕುತ್ತಿಗೆಗೆ ನುಣಿಕೆಯ ಕಟ್ಟುತ್ತ
ನೀರೊಳಗೆ ಕೊಡವ ಬಿಟ್ಟು
ಏನನ್ನೋ ಹೇಳಿ ನಗುವಳು
ಹಗ್ಗವ ಎತ್ತಿ, ಬಿಡುತ್ತ
ನೀರು ತುಂಬಿತೇ? ಎಂದು ನೋಡುವಳು

ತುಂಬಿದ ಕೊಡವನೆತ್ತಿ
ಸೊಂಟದ ಮೇಲೆ ಇಡುತ್ತ
ಮನೆಯತ್ತ ಸಾಗುವಳುಆಯಿತೇನೆ?
ಎಂದು ಗುಂಪಿನಿಂದ ಕೂಗಿದರೆ
ಇನ್ನೊಂದು ದಾರಿ ಎಂದು ಅವಳನ್ನಲು
ಅಬ್ಬ ಎನ್ನುವುದು ನನ್ನೆದೆ
ಇಲ್ಲೆ ನಿಂತಿರುವೆ,ಇಲ್ಲೆ ನಿಲ್ಲುವೆ
ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ?...................

!ಒಳಗೆ- ಹೊರಗೆ
ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!

ಹೊರಗೆ ಉದಯ
ಒಳಗೆ ಅಸ್ತ
ಹೊರಗಿನ ಬೆಳಕಿನೊಡನೆ
ಬೆಳಗಲೊಒಳಗೆ
ಬೆಳಕನ್ನು ಅರಸಲೊ
ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ

ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ
ಹೊರಗೆ ತುಂತುರಿನ ತನನ
ಒಳಗೆ ಬತ್ತಿದೆ ಮನ
ಹನಿಯೊಡನೆ ಹನಿಯಲೊ
ಮರುಭೂಮಿಯಾಗಲೊ
ಮನವ ಬಿಟ್ಟು ಲೋಕವಿಲ್ಲ
ಲೋಕದಲ್ಲಿ ಮನವಿಲ್ಲ
ಎತ್ತ ಕಿವಿಗೊಡಲಿ?ಎಲ್ಲಿ ಮನವಿಡಲಿ!..............

Tuesday, January 8, 2008

Kelavu geleyaru rachisida cHuTuKuGaLu

ಇವಳ ತ೦ಗಿ
ಅವಳ ಪ್ರೀತಿಸಿದವನಿಗೆ
ತಿಳಿಯಿತು ಅ೦ದು
ಇವಳ ತ೦ಗಿ ಇನ್ನೂ
ಚೆನ್ನಗಿದ್ದಾಳಲ್ಲಾ ಎ೦ದು ... ..... ಬುದ್ದಿಯೇ ಬರಲಿಲ್ಲ
ಹೀಗೆ ಒಂದು ಹುಡುಗ ಹುಡುಗಿ;
ಅವಳೆಂದಳು,
'ನನ್ನ ಅಪ್ಪಿಕೊಬೇಡ'ಆತ ಅಪ್ಪಿಕೊಳಲಿಲ್ಲ,
ಆಕೆ ಅಂದಳು,
'ನನಗೆ ಮುತ್ತು ಕೊಡಬೇಡ'ಆತ ಮುತ್ತು ಕೊಡಲಿಲ್ಲ,
ಆಕೆ ಎದ್ದು ಹೋದಳು,,ಪಾಪ ಅವನಿಗೆ ಬುದ್ದಿಯೇ ಬರಲಿಲ್ಲ...........
ಸೈಡಿಗ್ ಬನ್ರಿ
ಬಾ ಎಂದು ಹಂಬಲಿಸಿದವಳು,
ಬಾಗಿಲಲ್ಲಿ ನಿಂತಿಹಳು,
ಓಡಿ ಬಂದ ಪತಿಯ ಕಂಡು,
ಗುಡುಗಿದಳು ಸತಿ ದೇವಿ
,"ಸೈಡಿಗ್ ಬನ್ರಿ"
ಹಾಲಿನವನು ಬರುವನೆಂದು.............

ನೀ....ಬರುವವರೆಗೆ.......
ನನ್ನ ನೀನು ಬಿಟ್ಟು
ಹೋಗುವ ಮುನ್ನ
ಒಮ್ಮೆ ತಿರುಗಿ ನೋಡಿ
ಬಿಡು ಚಂದ್ರನ ಮುಗುಳು
ನಗೆಯನ್ನೊಮ್ಮೆ ಕವಟುಗ
ಲೊಳಗೆ ಭದ್ರವಾಗಿ ಇಟ್ಟು ಕೊಳ್ತೇನೆ
ಎಲ್ಲ ಕಳೆದು ಮತ್ತೆ ನೀ....ಬರುವವರೆಗೆ....... ...

ಪ್ರೀತಿಯ ಸಾವು,,,
ಜಗತ್ತಿನಲ್ಲಿ ಅತಿ ಭೀಕರವಾದ ಸಾವು
ನಮ್ಮ ಸಾವಲ್ಲ..
ನಮ್ಮ ಆಪ್ತರದ್ದು ಅಲ್ಲ..
ಮನಸ್ಸುಗಳ ನಡುವಿನ ಪ್ರೀತಿಯ ಸಾವು,,,
ನಂಬಿಕೆಯ ಸಾವು...
ಕೊನೆವರೆಗೂ ಭೂತವಾಗಿ
ಕಾಡುತ್ತಲೇ ಇರುತ್ತದೆ....
ಕೊಲ್ಲುವ ಮುನ್ನ ಒಮ್ಮೆ ಯೋಚಿಸಿ,,, ....

ಅರ್ಥವಾಗುತ್ತಿಲ್ಲ
ಕಂಡೆ ಅವಳನ್ನು ಅದೊಂದು ದಿನ..
ಬೆಳೆಸಿದೆ ಅವಳೊಡನೆ ಗಾಢವಾದ ಸ್ನೇಹನ..
ಅನಿಸುತಿದೆ ನನಗೆ ತುಂಬಾ ಹತ್ತಿರ ಅವಳ ಮನ...
ಅರ್ಥವಾಗುತ್ತಿಲ್ಲ ನನಗೆ ಇದು ಸ್ನೇಹನ ಪ್ರೀತಿನಾ?.......

ಕವಿತೆ
ಎಸ್ಟು ಬರೆದರೂ
ಮೂಡಲಿಲ್ಲ ಕವಿತೆ
ಏಕೆ೦ದು ಕೇಳಿದರೆ
ಕಲ್ಪನೆಯ ಕೊರತೆ .......

ಹೃದಯಕ್ಕೆ ಮೋಸ
ಮುಖದಲ್ಲಿ ಸಾವಿರ ಭಾವನೆಗಳನ್ನ
ವ್ಯಕ್ತಪಡಿಸಬಹುದು,,
ಆದರೆ ಅದರಲ್ಲಿ ಹೃದಯದ ನೋವುಗಳನ್ನ
ತೋರಿಸದೇ ಮುಚ್ಚಿಹಾಕಬಹುದು..
ಜಗತ್ತಿಗೆಲ್ಲ ನೀವು ನೋವು
ಮುಚ್ಚಿಟ್ಟು ನಗು ಮುಖ ತೋರಿಸಬಹುದು....
ಆದರೆ...
ನಿಮಗೆ ನೆನಪಿರಲಿ...
ನಿಮ್ಮ ಮುಖದಿಂದ ನಿಮ್ಮ
ಹೃದಯಕ್ಕೆ ಮೋಸ ಮಾಡ್ತಾ ಇದ್ದೀರಾ ಅನ್ನೋದು........


ನೆನಪಾಗಿ ಉಳಿದವರು ...
ನೆನಪಾಗಿ ಉಳಿದವರು
ನೆನಪಲ್ಲಿ ನೆನಪಾಗಿ
ನೆನೆದಾಗ ಬ೦ದವರು
ನೆನೆಯದೆಯೂ ನೆನಪಾಗಿ
ನೆನಪಿಗೇ ಬರುವವರು
ನಿಜ ಅವರು ನೆನಪಾಗಿ ಉಳಿದವರು ......

ನಲ್ಲ
ಬೇಡ ಬೇಡವೆ೦ದರೂ
ಬಿಡದೇ ಬರೆದು ಒ೦ದು
ಪ್ರೇಮ ಪತ್ರ ತಿಳಿದೋ
ತಿಳಿಯದೇಯೋ ಕೊಟ್ಟು
ಕಳುಹಿಸಿದ್ದ ನನ್ನ ಗ೦ಡನ ಹತ್ರ ........

ಸ್ವಾರ್ಥ
ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನ
ತನವಪರರ ಆಸೆಗಳ ಸಾರ್ಥಕತೆಯಲಿ....

ಅರುಣ ಸಿರಿಗೆರೆ
ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ......

ಗುರುಜೀ.....
ಗುರುವೇ ಗುರುವೇ ಹೇಗೆ ಬಣ್ಣಿಸಲಿ
ಈ ಗುರುಜಿಯ ಚಟ
ತಿಳಿಯಲಿಲ್ಲ ಈ ಸ್ವಾಮಿಯದು
ಯಾವ ಮಠ
ಜೊತೆಗೆ ಈ ಗುರುವಿಗ್ಯಾಕೆ
ನನ್ನ ಮೇಲೆ ಚುಟುಕ ಬರೆಯುವ ಹಠ .... ..........

ಮುಕ್ತಿ - ಭಕ್ತಿ
ಮಲಗುವಾಗ ನೆನೆ ನೆನೆದು
ಕೈ ಮುಗಿದರೆ ಗುರುವಿಗೆ
ಅದು ಭಕುತಿ ಶಾಶ್ವತವಾಗಿ ಕ
ಣ್ಮುಚ್ಹುವಾಗ ದೇವನೊಲಿದರೇ
ಅದೇ ಮುಕುತಿ ತಿಳಿಯೋ
ಮ೦ಕು ತಿಮ್ಮ ಎ೦ದ ಸರ್ವಜ್ಞ....

ಅವಾ೦ತರ
ಮುತ್ತು ಕೊಟ್ಟ ನಲ್ಲ
ಮಾತೇ ಆಡಲಿಲ್ಲ
ಕೇಳದೇ ಮುತ್ತಿಕ್ಕಿದ್ದಕ್ಕೆ
ಉದುರಿಸಿದ್ದೆ ಅವನ ಹಲ್ಲ ...!

ಒಮ್ಮೊಮ್ಮೆ ಹೀಗೇ .........
ಹೀಗೊಮ್ಮೆ ನೆನಪಾಯಿತು
ನೋವು ನಲಿವಿನ
ಹಿ೦ದಿನ ದಿನಗಳು
ಅಸ್ಟರಲ್ಲೇ ಕ೦ಬನಿಯಿ೦ದ
ಮ೦ಜಾಗಿದ್ದವು
ಈ ನನ್ನ ಕಣ್ಗಳು .......

" ಮರೆಗುಳಿ "
ಮೊನ್ನೆ ಮೊನ್ನೆ
ನೋಡಿದ ಹಾಗಿದೆ ನಿಮ್ಮನ್ನಾ
ಏಲ್ಲೋ ಕೇಳಿದ ಹಾಗಿದೆ
ಈ ನಗುವನ್ನಾ
ನೀವು ಅವರೇ ..ss
ಇಲ್ಲಾ ಇವರೇ ...sss**
ಓ ನೆನಪಾಯಿತು
ಬಿಡಿನೀವು ನಮ್ಮ ಮನೆಯವರೇ...

ಪ್ರತಿ--ಕ್ರಿಯೆ
ಯಾವಾಗಾ
ನಾ ನಿನ್ನ
ಪ್ರೀತಿ ಮಾಡಿದೆನೋ
ಪ್ರಿಯೆ ಅ೦ದಿನಿ೦ದ ಯಾವುದಕ್ಕೂ
ಇಲ್ಲ ನನ್ನ ಪ್ರತಿಕ್ರಿಯೆ ..........

ಹೆಚ್. ಡು೦ಡಿರಾಜ್
ನಮ್ಮ ನಾಡು
ಸುಕದ ಬೀಡು
ನಿಸ್ಟೆಯಿ೦ದ ದುಡಿದರೆ .........
ಎ೦ದ ನಮ್ಮ ಮುಖ್ಯಮ೦ತ್ರಿ
ನಿಸ್ಟೆಯಿ೦ದ ದುಡಿದರೇ ???

Tuesday, January 1, 2008

SNEHADA KURUHU....

ಒದ್ದೆಯಾದ ಕಣ್ಣು ಮತ್ತೆ ಕದ್ದು ಅಳುತ್ತಲೇ ಇದೆ
ಹ್ರದಯದಾಳದಲ್ಲೆಲ್ಲೋ ಅಳಲ ಬಚ್ಚಿಟ್ಟುಕೊಂಡು
ಮಂದ ಬೆಳಕಿನ ಆ ಸಂಜೆ ಕಣ್ಮುಚ್ಚಿ ಕುಳಿತೇ ಇದ್ದೆ
ಮರುದಿನ ಇಬ್ಬನಿ ಚುಂಬಿಸುವವರೆಗೂ..
ಮುಚ್ಚಿದ್ದ ಕಣ್ಣು ತೆರೆದು ಸುತ್ತಲೂ ದಿಟ್ಟಿಸಿದೆ
ಕಂಡಿತು ಆ ಹಳೆ ನೆನಪು ಸಾಲು ಸಾಲಾಗಿ
ಅಂದು ನೀನಿರೆ ಆ ಮಧುರ ಉದ್ಯಾನದಿ
ಅದೆಷ್ಟೋ ಹೊತ್ತು ತಿಳಿಯದೆ ಸರಿದವು
ಆ ಉದ್ಯಾನದ ಮೊಗ್ಗು, ಹೂವುಗಳ ನಡುವೆ
ನಮ್ಮ ಸ್ನೇಹದ, ಮೌನ ಭಾಷೆಯ,
ಆತ್ಮೀಯತೆಯ ಸವಿನೆನಪಿನ ಹಸಿರು
ಹೂವಾಗಿ ನನ್ನಲ್ಲಿದೆ ಇಂದು
ಮರೆಯದೆ ಜೊತೆಗೊಯ್ಯುವೆ
ಯಾವಾಗಲೂಇದೇ ತಾನೆ ನನ್ನ ನಿನ್ನ ಸ್ನೇಹದ ಕುರುಹುಗಳು. .....ANAMIKA...

ಪ್ರೀತಿ ಪ್ರೇಮದ ಬಗ್ಗೆ ಕೆಲ ಸ್ನೇಹಿತರು ರಚಿಸಿದ ಕವನಗಳು.....

ಪ್ರೇಮಕ್ಕೆ ನಿಮ್ಮ ಪರಿಭಾಷೆ ಏನು... ?
ಗದ್ದಲ ಗಳಲ್ಲಿ
ಕಳೆದು ಹೋದ ಸದ್ದಲ್ಲವೀ
ಪ್ರೇಮ ಹೃದಯದ
ಪಿಸುಮಾತುಗಳ ಕಣ್ಣಲೆ
ಹೇಳುವ ಮಧುರ ಕಲೆ ಪ್ರೇಮ.......
ಒಂದೇ ನೋಟದಲ್ಲಿ
ಅಡಗಿ ಕುಳಿತ ಕಾಮಾನೆಯೋ
ತಿಳಿಯದು ಜೀವನ
ನೌಕೆಯ ಮಧುರ ಪಯಣಕೆ
ನಾವಿಕನೆ ಪ್ರೇಮ ...........

ಹೃದಯದ ಹಿಮ
ಬಂಡೆಯ ಕರಗಿಸುವ
ಬಿಸಿ ಕಾವೇ ಪ್ರೇಮ......
ಸುಪ್ತ ಮನ-ಭಾವದ
ಅಭಿವಕ್ತಿಯೇ ಪ್ರೇಮ

ಮೌನ ತಾಲ್ಮೆಗಳ
ಮಿಲನ ತ್ಯಾಗದ ಇ
ಟ್ಟಿಗೆಯ ಸೌಧ ಸಂವತ್ಸ್ಸ
ರ ಗಳಿಗೆ ಚೈತ್ರ ಕಾಲವೀ ಪ್ರೇಮ........MALINI


ಅದರ ಪ್ರೀತಿಯ ಚಿಂತನೆ ಬಹು ಸುಮದುರ..!
ಬಾನಲಿ ಬೆಳ್ಳಕ್ಕಿ ಮುಗಿಲ ಚುಂಬಿಸೆ ಪ್ರೇಮ..
ಅಂಗೈಯಲಿ ಅಸುಗೊಸು ಅಳುತ ಮುಸುನಕ್ಕೊಡೆ ಪ್ರೇಮ..
ಹೊವಿನೊಳು ಮಕರಂದವ ಹೀರುವ ಧುಂಬಿಯಲಿ ಪ್ರೇಮ..
ಪ್ರಕ್ರುತಿಯ ಸೌಂದರ್ಯವ ಸವೆವ ಕಂಗಳಲಿಹಿದು ಪ್ರೇಮ..
ಪರಿ ಪರಿಯ ಪರಿಚಯ ಪ್ರೇಮಕ್ಕೆ..!

ಪ್ರಾಂತ್ಯವದು ಇರದು ಈ
ಅನುಭವಕೆನೊಂದ ಮೊಗದಲು
ಮಲ್ಲಿಗೆಯ ಮೊಗ್ಗರಳಿದಣಿದ ಉಸಿರಿನಲಿ
ಅಕ್ಕರೆಯು ನಲಿಯುತಲಿನಾಚುವ
ತುಟಿಗಳಲಿ ತಂಪಾದ ಮುತ್ತಿಡುತ..
ಅಮ್ರುತದ ಸವಿಯ ಸದಾಸೊಸುವುದರಲ್ಲೆ ಪ್ರೇಮ..!! -ಯುವಪ್ರೇಮಿ

Padagalige nilukada "Kaavya" Prema...
ಮುಸೂಕಿದ ಮಬ್ಬನು ಸೀಳಿ
ಭೂಮಿಗಿಲಿದ ಮೊದಲ
ಬೆಳ್ಳಿಕಿರಣ
ಅರಳಿನಿಂಥ ಹೂವಿಗಿತ್ಟಾ
ಇಬ್ಬನಿಯ ಮುತ್ತುಪ್ರೇಮ.....

ಬಿಸಿಲಿನಿಂದ ಬೆಂಡು
ಕೆಂಪಾದ ಧಾರೆಗೆ
ತಂಪೆರೇದ ಮಳೆ
ಹನಿ ಇಂದಹೊಮ್ಮಿಡ
ಮಣ್ಣಿನ ಘಮಪ್ರೇಮ......

ಕೇಕ್ಚಲಲ್ಲಿ ಕಾರು
ಹಾಲುನ್ಣುತಿರಲು
ತೀರು ತಿರುಗಿ ನೊಾಡುವ
ಆಕಲ ಕಣ್ಣಲ್ಲಿಚಿಮ್ಮುವ
ಮಮತೆಪ್ರೇಮ.....

ಹಾಳುಗಲ್ಳ ಹಸುಳೆ,
ಕಿಲಕಿಲನ ನಗುತ
ತೋಡಳ ಮಾತಲಿ ಕರೆದ
"ಅಮ್ಮ" ಎಂಬ ಕೂಗುಪ್ರೇಮ.....

ನೋಾಟಗಳು
ಬೆರೆತಾಗ ತುಟಿಯಂಚಲಿ
ಮಿಂಚಿ, ವಿನಿಮಯ
ವಾದಒಲವಿನ ಮುಗುಳ್ನಾಗೆಪ್ರೇಮ....

ಪದಗಳಿಗೆ ನಿಲುಕಡೆ
ಎದೆಯಲ್ಲೇ ಉಳಿದ
ನೂರು ಮಾತುಗಳ
ಬೆಚ್ಚಾಗಿನ ಭಾವ ಲಹರಿಪ್ರೇಮ......ANAMIKA

*ಪ್ರೀತಿಯೆಂದರೆ* ...
ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,ಹತ್ತಾರು
ಮುಗ್ಧಜೊಂಡುಗಳನ್ನು
ಮುಳುಗಿಸುತ್ತಾಸಾಗುವ ತೊರೆ!

ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!

ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು
ನೀನೆಅದರ ತಾಯಿ ಬೇರು! .....SHANKAR


ಹೃದಯ ಗೀತೆ..!
ನೀ ಅಲ್ಲೆ ನಿಂತು
ಹಾಡೆ ಒಮ್ಮೆ ನಾ
ಇಲ್ಲೆ ಕೇಳಿ ನಲಿಯುವೆ..!
ನೀ ಹಾಡೊ ರಾಗ
ಕೇಳದಿರೇನ್..!
ನಿನ ಬಾವ ಈ
ಹೃದಯ ಮುಟ್ಟದೆ..!!

ಸಾಗರ ನಮ್ಮಿಬ್ಬರ
ಸರಿಸಿದರೇನ್ಭುವಿಯ
ಮೇಲೆ ಇರುವೆವು ನಾವು..!
ನಿನ ನೆನೆಪೆ ನಿತ್ಯ
ದೈವ ಧೊಪನಾ ದಿನವು
ನೆನೆದು ಹಚ್ಚಿಹೆ...!

ಪ್ರೀತಿ ನೀನು,
ಕ್ರಾಂತಿ ನೀನು
ಈ ಬದುಕ ರೊಪಗಾರ್ತಿ
ನೀನುಶಕ್ತಿ ನೀನು,
ಯುಕ್ತಿ ನೀನುಈ ದೇಹಕೆ
ಉಸಿರಾದೆ ನೀನು
ನೀ ಹಾಡಲು ಪದ
ಸಿಗದಿರ್ದೊಡೆನಮ್ಮ
ಪ್ರೇಮ ಮಾತನೊಮ್ಮೆ ನೆನೆ..!

ನಿನ ಬಡಿವ ಕಣ್ಣ
ರೆಪ್ಪೆಯೆ ರಾಗನಾ ನೀಡಿದ
ಚುಂಬನವದುವೆ ತಾಳ..!
ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಸವಿದು ತಣಿವೆನು-,........ಯುವಪ್ರೇಮಿ


ಶಾಪ..!
ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ
ಸೋತುಕನಸ ಕಣೊ
ಪರಿಯ ರೊಪನನ್ನ
ಮನಕೆ ಅದುವೆ ಕೊಪಾ.. ಅ..ಅ.

.ಅಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...
ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.

ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಯಾಕೇ ಪ್ರಾಣ ಕಸಿದು ಹೋದೇ..ಎ..ಎ..ಎ.

ಅಂದವೆಲ್ಲ ಈ ಅಂಗಾಂಗ
ಕಲ್ಲಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆ
ನೇನಾ ನೋಡದೆ ನಡೆದೆ ಎಕೇ...ಎ..ಎ..ಎ.

ಜೀವ ಭಾರ, ಹೃದಯದ
ಗುರಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ
.ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..-....ಯುವಪ್ರೇಮಿ


ನನ್ನ-ನಿನ್ನ ನಡುವೆ..!

ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಳ್ಳಿ ನಲಿದಿಹುದು,!
ವರುಷಗಳೆ ಉರುಳಿದರೊ
ಹರುಷವದು ದಿನೆ ಬೆಳೆದಿಹುದು..!

ನೀ ಮುಡಿದ ಹೊವದು..!
ಕೊಗಿ ನನ್ನ ಕರೆದಿಹುದು
ಓರೆ ನೋಟದ ಆ ನಯನ
ನನ್ನಲ್ಲೇನೊ ಗೊಣಗಿಹುದು..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಉಕ್ಕಿ ಹರಿದಿಯುದು
ಯುಗಗಳೆ ಉರುಳಿ ಒರಳಿದರೊ
ಹರುಷವು ಚಿಮ್ಮಿ ಬೆಳೆದಿಹುದು..!
ನಿನ್ನ ನುಡಿಯೊ ಬಲುಚಂದ..!

ಸವಿದಂತೆಲ್ಲ ಸವಿ ಸಿರಿಗಂಧ.!
ಮಾತು ಮಾತೆ ಮತ್ತೆ ಮೊಡಿ
ಹುದುನಿನ್ನ ಕೊಡಿದ ಆ ಕ್ಷಣದಿಂದ..!
ನಿನ್ನ ನಗು ಎಂತ ಮಾಯೆಯೊ
ಆ ಮಾಟದಾಟ ನನ್ನ ಕಾಡಿಹುದು
ಹಾಗೆ ನಕ್ಕು ನೀ ತಿರುಗಿದೊಡೆ
ಲೊಕವನ್ನೆ ಮರೆ ಮಾಚಿಹುದು
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಂಧ ಬಾಡದಂತಹದು
ಇತಿಹಾಸವೆ ಅಳಿಸಿ ಹೋದರೊ
ಈ ಪ್ರೀತಿಯಂದು ಶಾಶ್ವತವೊ..!
ನಿನ್ನ ಆ ನುಲಿವ ನಡೆ..!
ನನ್ನ ಸದಾ ಕುಣಿಸಿಹುದು
ನಿನ್ನ ಗೆಜ್ಜೆಯ ದನಿಯದೊ
ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..!
ನನ್ನ ನಿನ್ನ ಮನವದೊ...!
ಸರಿಸಲಾಗದಂತೆ ಬೆರೆತಿಹುದು
ಬೆರೆತು ನುಡಿವ ಪ್ರೇಮ ಮಾತದೊ
ಜೀವ ಭಾವದ ಪ್ರಣಯದಾಟವೊ..!-.......ಯುವಪ್ರೇಮಿ


ಕನಸುಗಳು
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.

ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ

ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು .....ANaMIKA


ಕ್ಲಾಸ್ ರೂಮ್ ಎಂಬ ನಾಲ್ಕು.....
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.
ಚಿಲಿಪಿಲಿಗುಡುವ ಗೂಡಿನ ಗುಬ್ಬಚ್ಚಿಗಳಂತೆ
ಚಿಣ್ಣರ ಕಲರವ ಸುತ್ತಲೂ ಧ್ವನಿಸುತ್ತಿದೆ.
ರಜೆಯಲ್ಲಿ ಗರಿಗೆದರಿ ಹಾರಿದ್ದ ಮಕ್ಕಳೆಂಬ ಹಕ್ಕಿಗಳು
ಮತ್ತೆ ಮಳೆಗಾಲಕ್ಕೆ ಬೆಚ್ಚಗಿನ ಗೂಡು ಸೇರಿವೆ.
ಕ್ಲಾಸ್ ರೂಮ್ ಎಂಬ ಮಾಯಾಲೋಕದಲ್ಲಿ ಎಷ್ಟೋ
ಮನಸುಗಳು ಅರಳುತ್ತವೆ ಮತ್ತೆಷ್ಟೋ ಮುದುಡುತ್ತವೆ.
ಒಮ್ಮೊಮ್ಮೆ ಈ ಭಯಂಕರ ಲೋಕ ಎಷ್ಟೋ
ಬಾಲ್ಯಗಳ ಕೊಂದು ಹಾಕುತ್ತದೆ.
ಅದೆಷ್ಟೋ ಬಣ್ಣದ ಕನಸುಗಳು ಜೀವ ತಳೆಯುತ್ತವೆ
ಮತ್ತೆ ಹಲವರ ಭವಿಷ್ಯಕ್ಕೆ ಭಾಷ್ಯ ಬರೆಯುತ್ತದೆ.
ಅರಿವೇ ಮೂಡದ ಕುರಿಗಳನ್ನು ಕಟ್ಟಿ ಹಾಕಿ
ಕೆಲ ಕಂಠಗಳು ಏನೋ ಗಿಳಿಪಾಠ ಹೇಳಿಸುತ್ತಿವೆ.
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.- ...........Reshma narayan


gelathi..
ಬೇಡ ಗೆಳೆಯಾ ಇಷ್ಟು ದೊಡ್ಡ ತ್ಯಾಗ
ಕ್ರುರ್ ಹೃದಯದ ಹುಡುಗಿ,
ಘಶಿಯಾದನೋವು ,
ತ್ಯಾಗದ ದುಖ , ಸಾಕು
ಒಂದೇ ಯಾರದೇ avalu ಕೊಟ್ಟ ಸುಖ .....

ಆರಿಯಲಿಲ್ಲ ಏಕೆ ನೀನು ,
ನೆನಪು ಹೋಯಿತೇ avalu
ಹೇಳ್ಳುತಿದ್ದಳು ನೀನು ಪ್ರಾನಸಖ
ಅಂತ ನಿನ್ನ ಪ್ರಾಣ ಹಿರುವರೆಗೂ
ನೀನೆ ಸಖ ಆದದ್
ಮೇಲೆ ನಿನ್ನ ಸಹವಾಸ್ ಅವಲ್ಲಿಗೆ ಬೇಕ .......

-ಧೀರೇಂದ್ರ ನಾಗರಹಳ್ಳಿ mattu anekara sangraha....

ದ್ರೋಹ...!-----------
ದ್ರೋಹವೆಂದರೆನೆಂದು
ನಿನ್ನಿಂದಲೇ ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ
ಒಂದುಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ "ಪ್ರೀತಿಸಿಲ್ಲ" ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ
ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ! -ಧೀರೇಂದ್ರ ನಾಗರಹಳ್ಳಿ


ಮುಗಿಯದ ಮಾತು...!
ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.
ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ
ಮತ್ತೊಬ್ಬರ ತೆಕ್ಕೆಯಲಿ ಮಿಂದು. - ಧೀರೇಂದ್ರ ನಾಗರಹಳ್ಳಿ


ಓ! ಗೆಳತಿ!---------
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ
,ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ! -ಧೀರೇಂದ್ರ ನಾಗರಹಳ್ಳಿ


ಇನ್ನೇನು ಬೇಕು?
ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ 'ಪ್ರೀತಿ'ಗೆಆ
'ಚಡಪಡಿಕೆ'ಗೆ ಇನ್ನೇನು ಬೇಕು? -ಧೀರೇಂದ್ರ ನಾಗರಹಳ್ಳಿ


ಎನ್ನ ಮನದನ್ನೆ
ಎನ ನಲ್ಲೆಯ ಬಗ್ಗೆ
ಏನೆಂದು ವಿವರಿಸಲಿಸರಳ
ಸುಂದರತೆಯ ಸಾಕಾರ ಇವಳು

ಒಲ್ಲದಿಹ ಮಾತಿಗೆ
ಸನ್ನೆಯಲೇ ನಕಾರಪ್ರೀತಿ
ಬಯಸುತಿಹ ಜೀವಕೆ
ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ
ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ
ಜಡೆಯ ಮನ ಕದ್ದ ಒಡತಿ

ಜತೆಗೂಡಿ ನನ್ನೊಡನೆ
ಎಲೆಯಡಿಕೆ ಮೆಲ್ಲು
ತಲಿಸುದ್ದಿ ಕಂತೆಯ
ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ
ಬಿಡಿಕೊನೆಯಲ್ಲಿ ನನ್ನ
ಬಾಯ್ಮುಚ್ಚಿಸುವಳೇ ಇವಳು!



ಎನ್ನ ಮನದನ್ನೆ,
ಸೊನ್ನೆಯ ಮೊಗದವಳು
ಕಪಟ,ಅಸೂಯೆಗಳು
ಸೋನ್ನೆ ಇರುವ ಗುಣಡವಳು
ಹೊಗಳಿದರೆ ಕೆನ್ನೆಯಲಿಗು
ಳಿಗಳ ನರ್ತನತೆಗಳಿದರೆ ಮೊಗ,'?'
ಸನ್ನೆಯಲಿ ಪರಿವರ್ತನ
ಹೇಗೆ ಇರಲಿ
ಅವಳು ಎನ್ನ ಮನದನ್ನೆ
ರಾತ್ರಿ ಕನಸಲಿ ಬರುವ
ಕನಸಿನ ಕನ್ಯೆ


ಮರಳಿ ಕನಸಿನೂರಿಗೆ
ದಿನಗಳು ಅದೆಷ್ಟೋ
ಉರುಳಿವೆ ಅಕ್ಷರಗಳ
ಪೋಣಿಸದೆಪದಗಳ ಜೋಡಣೆಗೆ
ಪರದಾಡುವ ಪರಿಸ್ಥಿತಿಯೆ?

ವಿನಾ ಕಾರಣ
ಕೊಡಲೇಕೆ ಹಲವು
ನೆಪಗಳ ಕಂತೆಮತ್ತೆ ನ
ಡೆಯುದಿಲ್ಲಿ ಕನಸುಗಳ ಕಂತೆಹೊತ್ತು
ಆಸೆಗಳ ಸಾಗಿಹೆನು ಕನಸಿ
ನೂರಿನ ಕಡೆಗೆತೇಲಿ
ಸಾಗಲು ಜತೆಗೆ ಬರುವೆಯಾ
ನನ್ನೊಡನೆ?

ಪದಗಳ ಪರದಾಟವಲ್ಲ,
ಕೋಟಿ ಪದಗಳಲಿ,
ಕೋಟಿ ಬಾಳುವ
ಪದಗಳ ಹೆಕ್ಕುವ ಪೀಕಲಾಟ!
ಕಂತೆ ಕನಸುಗಳಿರುವಾಗ
ಕಾರಣಗಳ ಬೊಂತೆ ಏಕೆ?
ಆಸೆಗಳ ಮೂಟೆ ಹಂಚುವೆಯಾದರೆ,
ಜತೆಗೆ ಬರುವೆ ನಿನ್ನ ಕನಸಿನ ಊರಿಗೆ....


ವಾಹ್.. ವಾಹ್.. ಅದ್ಬುತ..!!

ವಾಹ್.. ವಾಹ್.. ಅದ್ಬುತ..!!
ಶೈಲಜರವರ ಕಾವ್ಯ
ಸುಧೆಗೆ ಅಡೆತಡೆ ಇಲ್ಲ..!
ದೀಪಕರ ಚುಂಬಕ
ಉತ್ತರಕ್ಕೆ ಸರಿಸಾಟಿಇಲ್ಲ..!!

ಮಾಲಿನಿಯವರ ಅಕ್ಷರ
ನೈವಿಕೆಗೆ ಮನಸೋಲ
ದವರಿಲ್ಲವೇ ಇಲ್ಲ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನುಕೈಯೊಳಾಸೆ
ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು
ಬೆಟ್ಟಗುಟ್ಟವ ಸುತ್ತಿ..!

ಕಂಡ ಕನಸ ಕೈಯಲಿಡಿಯುವ
ಹೆಬ್ಬಯಕೆಯನೊತ್ತಿ
ಕನಸುಗಾರ ನಾನು,
ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,
ಇದುವೆ ಆಸ್ಚರ್ಯಕನಸಿನಲ್ಲಿ
ಏನ್ನಮನವು ಸಧಾ ಮಗ್ನವಾಗಿಹುದು...!

ಮಗ್ನತೆಯ ಮಾದುರ್ಯದಿ
ಇಹವನೆ ಮರೆತಿಹುದು..!
ಕನಸಿನೊಲುಮೆ ಏನ್ನಮೇಲೆ
ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ
ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ
ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ
ಮಾತೆ ಜೇಂಕಾರದ ಸುದೆಯಂತೆ..!

ಕನಸಿನೊರ ನಾಸೇರ್ವೆನು
ಬೇದಿಸೆಲ್ಲ ಆತಂಕದಡೆ
ತಡೆಕನಸ ಕಾಣ್ವ ಗಳಯರನೆಲ್ಲ
ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು
ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ
ತ್ಯಜಿಸೆ ಸಿದ್ಧ ಈ ಉಸಿರ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ
ಕ್ಷಣದಿ ಸವಿಯ ಬಯಸಿಹೆನು..!! -ಯುವಪ್ರೇಮಿ



ಹೀಗಿತ್ತು ನನ್ನ ಪಯಣ

ಮರಳ ಕಣಗಳುರಿಳಿದಂತೆ ..
ಇರುಳು ಸಣಿಹ ಬಂದಿತು ..
ದಿನದ ದನಿವ ನಲಿವ ಕಂಡ
ಕಣ್ಣನು ರೆಪ್ಪೆ ತಾನು ಮುಚ್ಚಿತು
ಕನಸುಗಳ ಗುಡ್ಡೆ ಹಾಕಿ
ಒಂದೊಂದೇ ಹಂಚಿಹನು
ಚಂದ್ರಾಮನು ತಾರೆ ಸಖೀಯರೆಲ್ಲ
ಕೂಡಿ ಆಲ್ಲಿ ನಗುವ ಔತಣ ನಿ
ದ್ರೆ ಊರಿನಲ್ಲಿ ಸುಗ್ಗಿಯ ಸಂಭ್ರಮ
ನೀಡಿರೇ ಊರ ರಾಣಿ ಬಂದು
ನನ್ನ ನಲ್ಲಿ ಕಂಡಳೂ ಪ್ರೀತಿಯಿಂದ
ಆಪ್ಪಿ ನನ್ನ ನೂರಮುತ್ತಾ
ಕೊಟ್ಟಳು ಕನಸುಗಳು ಹೊತ್ತ
ನಾನು ಸಾಗಿದೆ ಉದಯ ರವಿಯ
ಮೊದಲ ಕಿರಣ ಬಂದು ನನ್ನ
ಮುತ್ತಲು ಬೆಳಕು ಹರಿದು
ಸಾರಿದ ರಾತ್ರಿ ಕತ್ತಲು ಹೊಸ
ದಿನದ ಹೊಸ ಬದುಕ ಜೀವಕಲೆಯ ಬಿತ್ತಲೂ




ನನ್ನ ಒಂದು ಪುಟ್ಟಗವನ ಹನಿಗೆ ನೀವೆಲ್ಲ ಸೇರಿಸಿದಿರಿ ನೂರೆಂಟು ಹನಿಗಳನುಪ್ರತ್ಯುತ್ತರದ ಝರಿ ನಿಲ್ಲದಿರಲಿ ಎಂದೂಕವಿಗನಸು ಅದೇ ತಾನೆ " DAM" ತುಂಬಲಿಯೆಂದು .....