ತಪ್ಪೇ ಮಾಡದೇ ಹೋದರೇ…ರೆಪ್ಪೆ ತೋಯದೇ ಹೋದರೆ..ಪ್ರೀತಿ ಎಂಬುದು ಎಲ್ಲಿದೆ…?..…….ಪ್ರಿಯಾ… ಹೇಗಿವೇ ಈ ಸಾಲುಗಳು..? ನಿಜಕ್ಕೂ ನಾ ಬರೆದದ್ದಲ್ಲ.. ಕವಿ..ಕಲ್ಯಾಣ್ ಬರೆದದ್ದು!!ಹೇಗಿವೇ..? ನಿಂಗೇನಾದ್ರೂ ಅರ್ಥ ಆಯ್ತಾ? ಅರ್ಥ ಆದ್ರೆ ಸಂತೋಷ.. ಆಗಲಿಲ್ಲ ಅಂದ್ರೂ.. ಸಂತೋಷಾನೇ..! ಯಾಕ್‍ಹೀಗೆ ಅಂತೀಯಾ… ನಾ ಅರ್ಥ ಮಾಡಿಸಬಹುದಲ್ಲ ಅಂಥ!! ಇರಲಿ ಬಿಡು..ಮತ್ತೆ ಯಾಕ್ ಪತ್ರ ಬರೀತಾ ಇದೀನಿ ಗೊತ್ತಾ…?ಮೇಲೆ ಇದಾವಲ್ಲ ಸಾಲುಗಳು .. ಅವು ತುಂಬಾ ಕಾಡ್ಬಿಟ್ವು ಕಣೇ.. ಅದಕ್ಕೆ!!ನಾನ್ ಆ ತಪ್ಪು ಮಾಡಿದಿನಿ.. ರೆಪ್ಪೆಗಳನ್ನು ಕೂಡ ತೋಯಿಸಿದಿನಿ.. ಆದ್ರೆ ನೀನ್ ಇನ್ನಾ .. ತಪ್ಪು ಮಾಡಿಲ್ಲ… i mean ಪ್ರೀತಿ ಮಾಡಿಲ್ಲ..(ಅಥವಾ ಅದು ಹುಟ್ಟಲೇ ಇಲ್ಲ…!!) ರೆಪ್ಪೆಗಳನ್ನ ಮಾತ್ರ ತೋಯಿಸಿದ್ದೀಯಾ.. ಆದ್ರೆ ನಿನ್ನದಲ್ಲ… ನನ್ನದು.. thanks for that ಕಣೇ!!ಜಗತ್ತಲ್ಲಿ ತಪ್ಪು ಮಾಡಿ ಕೂಡ.. ಸಂತೋಷವಾಗಿ ಇರೋವರು ಅಂದ್ರೆ ಪ್ರೇಮಿಗಳು ಮಾತ್ರ ಅನ್ಸುತ್ತೆ!! ಹ್ಹ…ಹ್ಹ… Again ಅವರಲ್ಲಿ..ನಾನೂ ಒಬ್ಬ!!ಪ್ರಿಯಾ.. ಒಂದ್ ಸತ್ಯ ಹೇಳಲಾ…? ನೀನ್ ಬ್ಯಾಡಾ ಅಂದ್ರೂ ಹೇಳ್ತೀನಿ ಕೇಳು..ನಿನಗಿಂತ ನಿನ್ ಹೆಸರನ್ನ ಜಾಸ್ತಿ .. ತುಂಬಾನೇ ಜಾಸ್ತಿ ಪ್ರೀತಿಸ್ತೀನಿ ಕಣೆ!, ನೀನು ನಾ ಕರೆದೊಡನೆ..ಬರೋದಿಲ್ಲ..ಆದ್ರೆ ನಿನ್ ಹೆಸರು.. ಹೂಂ.. ನಿಜವಾಗ್ಲೂ ಕರೆದ ತಕ್ಷಣ ಬರುತ್ತೆ.. ನನ್ನೊಳಗಿಂದ..ನನ್ನ ಮನದೊಳಗಿಂದ..!! ನನ್ನ ನಿನ್ನ ತುಟಿಗಳೆರೆಡು “ಭೇಟಿ” ಆಗೋದೇ ಇಲ್ಲ.. ಆದ್ರೆ ನಿನ್ನ ಹೆಸರ ಆರಂಭದ ಅಕ್ಷರ ಕರೆದೊಡನೆಯೇ.. ನನ್ನವೇ ಎರಡು ತುಟಿಗಳು ಎಷ್ಟು ಜಲ್ದಿ ಒಂದಾಗ್ತವೇ ಗೊತ್ತಾ..? ಬೇಕಿದ್ರೆ ನಿನ್ನ ಹೆಸರನ್ನ ನೀನೆ ಕರೆದುಕೊಂಡು ನೋಡು.. thatz y, i luv ur Name more than u…!! Sorry ನಿನ್ನ ಹೆಸರನ್ನೇ ನಿನ್ನ ಸವತಿಯನ್ನಾಗಿ ಮಾಡಿದ್ದಕ್ಕೆ!ಇನ್ನು ಒಬ್ರು ಸವತಿ ಇದಾರೆ..!! ಅವರು ಯಾರು ಗೊತ್ತಾ… ??? ಅದು ಕೂಡಾ ನಿನ್ನದೇ ಕಣೇ… ಗೊತ್ತಾಗಲಿಲ್ವಾ…? ಅವೇ ನಿನ್ನ “ನೆನಪುಗಳು…”ನಿಜವಾಗ್ಲೂ ಅವುಗಳು ಕೂಡ.. ನಿನಗಿಂತ ಎಷ್ಟೋ ವಾಸಿ.. ನೋಡು.. ನಿನ್ನನ್ನ ನಾ ಎಷ್ಟು ಗೋಗರೆದು ಕರೆದರೂ ನೀ ಬರೋಲ್ಲ.. ಆದ್ರೆ ನಿನ್ನ ನೆನಪುಗಳನ್ನ ನಾ ಕರೆಯೋದೇ ಬೇಡ.. ತಾವಾಗಿಯೇ.. ಮನದ ನೆಲದಲಿ ಮುತ್ತಿಡಲು ಬರುತ್ತವೆ.. ಮಳೆ ಹನಿಗಳು ಈ ಇಳೆಯ ಚುಂಬಿಸೋ ಹಾಗೆ! ನಿನ್ನಾಣೆಗೂ ಬರ್ತವೇ.. ಅದಕ್ಕೆ ನಾ ಹೇಳಿದ್ದು ನಿನಗಿಂತ ಅವೇ ಎಷ್ಟೋ ವಾಸಿ ಅಂಥ!! ನಮ್ ಕಾಲೇಜ್ ರೋಡಲ್ಲಿರೋ “ಪ್ರಿಯಾ ಬೇಕರಿ” ನೋಡಿದಾಗ.. ಅಲ್ಲಲ್ಲಿ ಕಾಣೋ…”ಪ್ರಿಯಾ ಸೀಮೆಂಟ್” Advertise ನೋಡಿದಾಗ.. ಟಿ.ವಿ..ಲೀ ಬರೋ..”Priya Gold” biscuits Ad ನೋಡಿದಾಗ ತಕ್ಷಣ ನಿನ್ ನೆನಪಾಗುತ್ತೆ ಕಣೆ..!! (ನನ್ನನ್ನ ಎಂಥಾ ಹುಚ್ಚನನ್ನಾಗಿ ಮಾಡ್ ಬಿಡ್ತೇ ನಿನ್ ಹೆಸರು..ನಿನ್ ನೆನಪು…!!?) ಅದಕ್ಕೆ ಹೇಳೋದು “ನೆನಪುಗಳ ಮಾತು ಮಧುರ..” ಅಂಥ!
ಹಾಗೆ.. ನಿನಗೆ ಗೊತ್ತಿಲ್ಲದೇ ನೀನು ಕೊಡೋ ನೋವಿಗಿಂತ ನಿನ್ನ ನೆನಪುಗಳು ನೀಡೋ ನೋವು..mmm!!.. ನಿಜಕ್ಕೂ ಅತೀ ಮಧುರ..!!ಅವು ಏನಾದ್ರೂ ಕಣ್ಣಿಗೇ ಕಾಣೋ ಹಾಗಿದ್ರೆ.. ಕೈಗೆ ಸಿಗೋ ಹಾಗಿದಿದ್ರೆ ಅವುಗಳನ್ನೇ ಕಟ್ಕೋಂಡ್‍ಬಿಡ್ತಿದ್ದೆ!! .. ನಗು ಬಂತಾ..!!?ಅದೇ ನನಗೂ ಬೇಕಾಗಿರೋದು.. ಅದೇ ನಿನ್ ನಗು..just.. be haPy.. keeP smiliNg..! I wanna leave..!! ನಿನ್ನ ನಗುವಿಲ್ಲದೆ ಹೂ..ಹೂಂ i cant!!… ನಾನ್ ಬದುಕಕ್ಕೆ ಆಗಲ್ಲ!
ಆ “ತೀರ” ಕಾಣದ ಕಡಲಲಿ..ಕ್ಷಣದಲಿ ಮರೆಯಾಗೋ ಅಲೆಗಳಲ ಮೇಲೆ..ಮನದ ಸಾಲುಗಳ ತುಂಬಿ ಪ್ರೀತಿಯ ದೋಣಿಯ ಕಳುಹಿಸಿದವ….. ನಾ(ಗು)ವಿಕ!!

No comments:
Post a Comment